ಬೆಂಗಳೂರು: ಅಗ್ನಿ ಅವಘಡದ ಬಗ್ಗೆ ಮುನ್ನೆಚ್ಚರಿಕೆ ನೀಡುವ ವಿನೂತನ ಬಿಎಸ್ ಐV ಮಾದರಿಯ ಬಸ್‌ಗಳು ಶೀಘ್ರ ನಗರದ ರಸ್ತೆಗಿಳಿಯಲಿವೆ. ಇದರೊಂದಿಗೆ ದೇಶದ ವಿವಿಧ ಸಾರಿಗೆ ನಿಗಮಗಳಲ್ಲಿ ಈ ದರ್ಜೆಯ ಬಸ್‌ಗಳನ್ನು ರಸ್ತೆಗಿಳಿಸುತ್ತಿರುವ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬಿಎಂಟಿಸಿ ಪಾತ್ರವಾಗಲಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಒಟ್ಟಾರೆ 565 ಈ ಮಾದರಿಯ ಬಸ್‌ಗಳನ್ನು ಖರೀದಿಸಲು ಮುಂದಾಗಿದ್ದು, ಈ ಪೈಕಿ ಪ್ರೋಟೋಟೈಪ್ ವಾಹನವನ್ನು ಶಾಂತಿನಗರದಲ್ಲಿರುವ ಬಿಎಂಟಿಸಿ ಕೇಂದ್ರ ಕಚೇರಿ ಆವರಣದಲ್ಲಿ ವ್ಯವಸ್ಥಾಪಕ ನಿರ್ದೇಶಕ ವಿ. ಅನುºಕುಮಾರ್ ಪರಿಶೀಲಿಸಿದರು.
ಇದನ್ನೂ ಓದಿ:-ಕಾಲೇಜು ಅಭಿವೃದ್ದಿಗೆ ಸಹಕರಿಸಿ
ತಿಂಗಳಾಂತ್ಯಕ್ಕೆ 50 ಬಸ್‌ಗಳು ಬರಲಿದ್ದು, 2022ರ ಫೆಬ್ರವರಿ ಹೊತ್ತಿಗೆ ಉಳಿದೆಲ್ಲ ಬಸ್‌ಗಳು ಪೂರೈಕೆ ಆಗಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲ 565 ಬಸ್ಸುಗಳನ್ನು M/s Ashok Leyland pvt. Ltd. ಪೂರೈಕೆ ಮಾಡಲಿದೆ. ಈ ಬಸ್‌ಗಳ ಖರೀದಿಗೆ 2017-18ರಲ್ಲಿ ಹಣ ಮೀಸಲಿಡಲಾಗಿತ್ತು.
ಆ ಮೊತ್ತದಲ್ಲಿ ಬಸ್ ಗಳನ್ನು ಖರೀದಿಸಲಾಗುತ್ತಿದೆ ಎಂದೂ ಸಂಸ್ಥೆ ಸ್ಪಷ್ಟಪಡಿಸಿದೆ. ವಿಶೇಷತೆ ಏನು?: ಇದು ಪರಿಸರ ಸ್ನೇಹಿಯಾಗಿದ್ದು, ಗಾಳಿಯ ಗುಣಮಟ್ಟವನ್ನು ಸುಧಾರಿಸಿ, ವಾತಾವರಣದ ಮಾಲಿನ್ಯವನ್ನು ಕಡಿಮೆಗೊಳಿಸುತ್ತದೆ. ಆಖ ಐV ವಾಹನಗಳಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ಹೊಂದಿದೆ (197ಏಕ). ಈ ವಾಹನಗಳಲ್ಲಿ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕೊಡುವ ವ್ಯವಸ್ಥೆ ಕೂಡ ಇದರಲ್ಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.