ಕಲಬುರಗಿ: ಮೂಲ ಸೌಕರ್ಯಗಳು ಬಲವರ್ಧನೆಗೊಂಡರೆ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಕಲಬುರಗಿ ಗ್ರಾಮೀಣ ಕ್ಷೇತ್ರದ ನಂದೂರ (ಬಿ) ಗ್ರಾಮದಿಂದ ಸೂಪರ್ ಮಾರ್ಕೆಟ್ ವರೆಗೆ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸೋಮವಾರ ನಂದೂರ ಬಿ ಗ್ರಾಮದಿಂದ ಕಲಬುರಗಿ ನಗರಕ್ಕೆ ಹೋಗಿ ಬರಲು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರಿಗೆ ಹಲವು ದಿನಗಳಿಂದ ಸಮಸ್ಯೆ ಎದುರಿಸುತ್ತಿದರು. ಹೀಗಾಗಿ ಗ್ರಾಮಕ್ಕೆ ಸೂಕ್ತ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಹಲವು ದಿನಗಳ ಬೇಡಿಕೆಯಾಗಿತ್ತು. ಹೀಗಾಗಿ ಜನರ ಬೇಡಿಕೆಗೆ ಸ್ಪಂದಿಸಿ ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಂದೂರು ಗ್ರಾಮಕ್ಕೆ ನೂತನ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರಿಗೆ ಸಮಸ್ಯೆ ಬಗೆಹರಿಸಲಾಗಿದೆ ಎಂದು ತಿಳಿಸಿದರು.
ನಂದೂರು ಗ್ರಾಮಕ್ಕೆ ಬಸ್ ಸಂಚಾರ ಕಲ್ಪಿಸಿದಕ್ಕೆ ಸಂತಸವಾಗಿದೆ. ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ಹೋಗಬೇಕಾದರೆ ಬಹಳ ತೊಂದರೆಯಾಗುತ್ತಿತ್ತು. ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಬಸ್ ಗಾಗಿ ಕಾದು ಬಸ್ ಹತ್ತಿದರು ಸಹ ಬಸ್ ನಲ್ಲಿ ಕುಳಿತುಕೊಂಡು ಸಂಚಾರ ಮಾಡಲು ಆಸನಗಳು ಸಿಗುತ್ತಿರಲಿಲ್ಲ. ಆದರೆ ಇದೀಗ ಬಸ್ ವ್ಯವಸ್ಥೆ ಮಾಡಿರುವುದರಿಂದ ಆ ಸಮಸ್ಯೆ ಇರುವುದಿಲ್ಲ ಎಂದು ವಿದ್ಯಾರ್ಥಿಗಳು ಸಂತಸ ಹಂಚಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿಯ ಯುವ ಮುಖಂಡರಾದ ರಾಜು ಎಂ ಚವಾಣ್, ನಾಗರಾಜ ಕಲ್ಲಾ, ಆರ್ ಎಂ ಸಿ, ವಿಶ್ವನಾಥ್ ಬೆನ್ನೂರ್, ಬಸವರಾಜ್ ಪಾಟೀಲ್ ಬೆನ್ನೂರ್, ರಮೇಶ್ ತೆಗ್ಗಿನಮನಿ, ಜಗನಾಥ್ ಪಾಟೀಲ್ ಅವರಾದ, ಈಶ್ವರ ರಾಠೊಡ , ಬಸವರಾಜ್ ಪಾಳಾ, ಮಾಂತು ಗೌಡ, ಬಸವರಾಜ ಪಾಟೀಲ್, ಶಿವಕುಮಾರ್ ಅಂಬಲಗಿ, ಕಲ್ಲಪ್ಪ ಅಪಚಂದ, ಮೈಲಾರಿ ದೊಡ್ಮನಿ, ಭಿಕ್ಕು ಸಿಂಗ್ ರಾಠೊಡ್, ಅರುಣ್ ರಾಠೊಡ, ರವಿ ಪವಾರ, ಗುರುಶಾಂತ್ ಬೆಳಗುಂಪಿ, ಸುನಿಲ್ ನಾಟಿಕಾರ್, ಅಂಬಣ್ಣ ಅಕ್ಕಲಕೋಟ್, ಉದಯ ಕುಮಾರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.