Advertisement
ಮಾಟುಂಗ ಪೂರ್ವದ ಭಾವುದಾಜಿ ರೋಡ್ ರೋಡ್ ನಂಬರ್-4ರಲ್ಲಿರುವ ಹಬ್‌ಟೌನ್ ಹೆವೆನ್ ಕಟ್ಟಡದ ಸಿ-ವಿಂಗ್‌ನ ತಳಮಡಿಯಲ್ಲಿ ಆಧುನಿಕ ಸೌಲಭ್ಯ ಮತ್ತು ತಂತ್ರಜ್ಞಾನಗಳನ್ನು ಒಳಗೊಂಡಿರುವ ಭಾರತ್ ಬ್ಯಾಂಕ್‌ನ ಮಾಟುಂಗ ಪೂರ್ವದ ನೂತನ ಶಾಖೆಯನ್ನು ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಯು. ಶಿವಾಜಿ ಪೂಜಾರಿ ಉದ್ಘಾಟಿಸಿದರು.
Related Articles
Advertisement
ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬಯಿ ಲಿ. ಅನ್ನು 1978ರಲ್ಲಿ ಇದು 88 ವರ್ಷಗಳ ಹಳೆಯ ಚಾರಿಟೆಬಲ್ ಸಂಸ್ಥೆಯಾಗಿರುವ ಮುಂಬಯಿಯ ಬಿಲ್ಲವರ ಅಸೋಸಿಯೇಶನ್ ಸ್ಥಾಪಿಸಿತು. ಪ್ರಸ್ತುತ ಈ ಬ್ಯಾಂಕ್ ಮಹಾನಗರದಲ್ಲಿ ಭಾರತ್ ಬ್ಯಾಂಕ್ ಎಂದು ಜನಪ್ರಿಯವಾಗಿದೆ. ಇಂದು ಬ್ಯಾಂಕ್ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ 100ಕ್ಕೂ ಹೆಚ್ಚು ಶಾಖೆಗಳ ಮೂಲಕ ಸೇವೆಗಳನ್ನು ಒದಗಿಸುತ್ತಿದೆ. ಬ್ಯಾಂಕ್ ತನ್ನ ನಿರಂತರವಾಗಿ ಏರುತ್ತಿರುವ ವ್ಯವಹಾರವನ್ನು ನಿರ್ವಹಿಸುವಲ್ಲಿ ಶ್ಲಾಘನೀಯ ವೃತ್ತಿಪರತೆ ದಾಖಲಿಸಿದೆ. ಭಾರತ್ ಬ್ಯಾಂಕ್ ತನ್ನ ಬ್ರಾಂಡ್ ಅನ್ನು ನಂಬಿಕೆ, ಸೇವೆಯ ಗುಣಮಟ್ಟವನ್ನು ನಾವೀನ್ಯತೆಯ ಮೂಲಕ ನಿರ್ಮಿಸುವಲ್ಲೂ ಯಶಸ್ವಿಯಾಗಿದೆ.
ಅದ್ಭುತ ಪ್ರಗತಿ :
ಭಾರತ್ ಬ್ಯಾಂಕ್ ಪ್ರಾರಂಭದಿಂದಲೂ ಗ್ರಾಹಕರಿಗೆ ಠೇವಣಿ ಸಜ್ಜುಗೊಳಿಸುವಿಕೆ, ಮುಂಗಡಗಳು, ನಾವೀನ್ಯತೆಗಳು ಮತ್ತು ಸೇವಾ ದಕ್ಷತೆಯಂತಹ ವಿವಿಧ ನಿಯತಾಂಕಗಳಲ್ಲಿ ಅದ್ಭುತ ಪ್ರಗತಿ ತೋರಿಸಿದೆ. ಗ್ರಾಹಕರಿಗೆ ವೈಯಕ್ತಿ ಕಗೊಳಿಸಿದ ಸೇವೆಗಳನ್ನು ಒದಗಿಸು
ವುದರ ಮೇಲೆ ಬ್ಯಾಂಕ್ ಗಮನ ಹರಿಸುತ್ತಿದ್ದು, ಅತ್ಯಂತ ಗ್ರಾಹಕ ಸ್ನೇಹಿ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಥಾನಕ್ಕಾಗಿ ಬ್ಯಾಕ್‌ನ ನಿರ್ವಹಣೆಯು ನಿರಂತರ ತಾಂತ್ರಿಕ ಶ್ರೇಣಿಯನ್ನು ಸರಿಯಾಗಿ ನಿಭಾಯಿಸುತ್ತಿದ್ದು, ಬ್ಯಾಂಕ್ ಕೋರ್ ಬ್ಯಾಂಕಿಂಗ್ ಪರಿಹಾರ (ಸಿಬಿಎಸ್) ಫೈನಾಕಲ್ ಬೈ ಇನ್ಫೋಸಿಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಡಿಜಿಟಲ್ ಇಂಡಿಯಾ ಅನುಗುಣವಾಗಿ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ, ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ, ಎಸ್‌ಎಂಎಸ್ ಬ್ಯಾಂಕಿಂಗ್ ಸೌಲಭ್ಯ ಮತ್ತು ಪಿಒಎಸ್ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸುತ್ತಿದೆ.
ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು :
ಭಾರತ್ ಬ್ಯಾಂಕ್ ಕಳೆದ 42 ವರ್ಷಗಳಲ್ಲಿ ವಿವಿಧ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳಿಂದ 59 ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದೆ. 2019-2020ರ ಹಣಕಾಸು ಸಮಯದಲ್ಲಿ ದಿ ಬೃಹನ್ ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿ.ನ ಪ್ರಥಮ ಪುರಸ್ಕಾರ, ಮಹಾರಾಷ್ಟ್ರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕರ್ಸ್ ಫೆಡರೇಶನ್ ಲಿ.ನ ಬ್ಯಾಂಕ್‌ನ 5,000 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ಠೇವಣಿ ಹೊಂದಿರುವ ವಿಭಾಗದಲ್ಲಿ ಸರ್ವೋತ್ಕೃಷ್ಟ ಬ್ಯಾಂಕ್ ಪುರಸ್ಕಾರ -2019 ಅನ್ನು ಗಳಿಸಿದೆ.
ಸಮರ್ಥ ನಿರ್ದೇಶಕರ ತಂಡ :
ಬ್ಯಾಂಕಿಂಗ್ ಮತ್ತು ಇತರ ಕ್ಷೇತ್ರಗಳಲ್ಲಿನ ತಜ್ಞರನ್ನು ಒಳಗೊಂಡ ಸಮರ್ಥ ನಿರ್ದೇಶಕರ ಮಂಡಳಿ ಯಿಂದ ಬ್ಯಾಂಕ್ ಅನ್ನು ವೃತ್ತಿಪರವಾಗಿ ನಿರ್ವಹಿಸಲಾಗುತ್ತದೆ. ಬ್ಯಾಂಕ್ ಪ್ರಾರಂಭದಿಂದಲೂ ಎ ಆಡಿಟ್ ವರ್ಗೀಕರಣ ಪ್ರಮಾಣಪತ್ರ ಹೊಂ ದಿದ್ದು ಬ್ಯಾಂಕ್‌ನ ಸೇವಾದಕ್ಷತೆಗೆ ಸಂದ ಪ್ರತಿಫಲವಾಗಿದೆ. ವರ್ಗ 1ರ ಅಡಿಯಲ್ಲಿರುವ ಕೆಲವೇ ಕೆಲವು ಸಹಕಾರಿ ಬ್ಯಾಂಕ್‌ಗಳಲ್ಲಿ ಭಾರತ್ ಬ್ಯಾಂಕ್ ಕೂಡ ಒಂದು. ವಿದೇಶಿ ವಿನಿಮಯ ವ್ಯವಹಾರಕ್ಕಾಗಿ ಹೆಸರು ಪಡೆದಿರುವ ಭಾರತ್ ಬ್ಯಾಂಕ್ ಅಧಿಕೃತ ಮಾರಾಟಗಾರರಾದ ಲೈಫ್ ಮತ್ತು ಜನರಲ್ ಇನ್ಶೂರೆನ್ಸ್ ಎರಡೂ ವಿಮಾ ವ್ಯವಹಾರಕ್ಕಾಗಿ ಬ್ಯಾಂಕ್ ಎಲ…ಐಸಿ, ಎಚ್‌ಡಿಎಫ್‌ಸಿ ಲೈಫ್, ಬಜಾಜ್ ಎಲಾಯಾನ್ಸ್ ಜನರಲ್ ಇನ್ಶೂರೆನ್ಸ್ ಕಂ. ಲಿ. ಮತ್ತು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂ. ಲಿ.
ಜತೆ ಒಪ್ಪಂದ ಮಾಡಿಕೊಂಡಿದ್ದು, ಗ್ರಾಹಕರ ಅಚ್ಚುಮೆಚ್ಚಿನ ಬ್ಯಾಂಕ್ ಎಂದೇ ಪ್ರಸಿದ್ಧಿ ಪಡೆದಿದೆ.