Advertisement

ಟಿವಿಎಸ್‌ ಮೋಟಾರ್‌ನಿಂದ ನೂತನ ಬೈಕ್‌ ಬಿಡುಗಡೆ

06:31 PM Jul 08, 2021 | Team Udayavani |

ಬೆಂಗಳೂರು: ನವೀನ ಮಾದರಿಯ ಬೈಕ್‌ ಹಾಗೂ ತ್ರಿಚಕ್ರವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಪ್ರಖ್ಯಾತಿಯಾಗಿರುವ ಟಿವಿಎಸ್‌ ಮೋಟಾರ್‌ ಕಂಪನಿಯುಮತ್ತೂಂದು ನೂತನ ಟಿವಿಎಸ್‌ ಎನ್‌ಟಿಒಆರ್‌ಕ್ಯೂ 125ರೇಸ್‌ ಎಕ್ಸ್‌ಪಿ ಬೈಕ್‌ ಅನ್ನು ಲೋಕಾರ್ಪಣೆಗೊಳಿಸಿದೆ.

Advertisement

ಬುಧವಾರ ನೂತನ ಬೈಕ್‌ಲೋಕಾರ್ಪಣೆಗೊಳಿಸಿದ ಕಂಪನಿಯ ಬ್ರಾಂಡ್‌ವಿಭಾಗದ ಉಪಾಧ್ಯಕ್ಷ ಅನಿರುದ್ಧ ಹಲ್ದಾರ್‌ ಮಾತನಾಡಿ, ಇದು 10 ಪಿಎಸ್‌ಗಿಂತ ಅಧಿಕ ಪವರ್‌ ಹೊಂದಿರುವ 125 ಸಿಸಿ ವಲಯದ ಏಕೈಕ ಬೈಕ್‌. ಪ್ರಸ್ತುತ (ಆಧುನಿಕ ಯುಗ)ಝಡ್‌ಪೀಳಿಗೆಯ ಯುಗದಲ್ಲಿ ಅನಾವರಣಗೊಂಡಿದ್ದು, ನಮಗೆಸಂತೋಷವಾಗುತ್ತಿದೆ. ಈ ಬೈಕ್‌ ಗರಿಷ್ಠ ಶಕ್ತಿಯೊಂದಿಗೆ ಸುಸಜ್ಜಿತವಾಗಿದ್ದು, ಡ್ಯುಯಲ್‌ ರೈಡ್‌ ಮೋಡ್‌ಗಳನ್ನುಹೊಂದಿದೆ ಎಂದು ತಿಳಿಸಿದರು.

ಎಂಜಿನ್‌ ಬ್ರಿàದಿಂಗ್‌ ಮತ್ತು ಗರಿಷ್ಠ ದಹಿಸುವಿಕೆಯೊಂದಿಗೆಅತ್ಯಾಧುನಿಕ ಎಂಜಿನಿಯರಿಂಗ್‌ ಪಾಲಿಮರ್‌ಗಳಿಗೆಬಲಶಾಲಿ ಮತ್ತು ಮಿಶ್ರಲೋಹವನ್ನು ಬಳಸಲಾಗಿದೆ.

ಜತೆಗೆಕಂಪ್ಯೂಟರ್‌ ನೆರವಿನ ಸಿಮ್ಯುಲೇಶನ್‌ ವಿನ್ಯಾಸಒಳಗೊಂಡಿದೆ. ಕನೆಕ್ಟಿವಿಟಿ ಪ್ಲಾಟ್‌ಫಾರಂ ಉದ್ಯಮದಲ್ಲೇಮೊದಲ ಬಾರಿಗೆ ಧ್ವನಿ ನೆರವಿನ ಹಾಗೂ ಸ್ಪಂದನೆಗಳನ್ನುಪಡೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದುಹೇಳಿದ್ದಾರೆ.

ಬ್ಲೂಟೂಥ್ಚಾಲಿತ ತಂತ್ರಜ್ಞಾನ: ಈ ಬೈಕ್‌ಗೆ ಸ್ಮಾಟ್‌ìಗ್ಸೋನೆಕ್ಟಮ್‌ ಕನೆಕ್ಟಿವಿಟಿಯಿದ್ದು, ಬ್ಲೂಟೂಥ್‌ ಚಾಲಿತಮೊಬೈಲ್‌ ಆ್ಯಪ್‌ ಆಗಿದೆ. ಎಲ್ಲ ಆ್ಯಂಡ್ರಾಯ್ಡ ಮತ್ತುಐಒಎಸ್‌ ಪ್ಲಾಟ್‌ಫಾರಂಗಳಲ್ಲಿ ಲಭ್ಯವಿದೆ. ರೇಸ್‌ಎಕ್ಸ್‌ಪಿ ಧ್ವನಿಯಿಂದ ಗ್ರಾಹಕರು ಬೈಕ್‌ ಜೊತೆ ಧ್ವನಿಸಂಪರ್ಕ ಸಾಧಿಸಬಹುದು. ಈ ಆ್ಯಪ್‌ 15ಕ್ಕೂಹೆಚ್ಚು ಬಗೆಯ ಧ್ವನಿಗಳನ್ನು ಸ್ವೀಕರಿಸುತ್ತದೆ.ಜತೆಗೆ ಉñಮ ‌¤ ರೈಡ್‌ ಮೋಡ್‌ ಆಧಾರಿತ ಲೈವ್‌ಡ್ಯಾಶ್‌ಬೋರ್ಡ್‌ ಹೊಂದಿದೆ. ಉತ್ಕೃಷ್ಟ ಕ್ಷಮತೆಹೊಂದಿರುವ ಬೈಕ್‌ 10.8 ಎನ್‌ಎಂಗೆ 5,500ಪಿಆರ್‌ಎಂ ಟಾರ್ಕ್‌ ಹೊರ ಸೂಸುತ್ತದೆ.

Advertisement

ಗಂಟೆಗೆ ಗರಿಷ್ಠ 98ಕಿ.ಮೀ ವೇಗ ಕಮ ‌Ò ತೆ ನೀಡುತ್ತದೆ ಎಂದು ತಿಳಿಸಿದ್ದಾರೆ.83,275 ರೂ. ದರ ನಿಗದಿ: ಇದು ಬ್ಯಾಡ್ಜ್, ರೇಸ್‌ಸ್ಫೂರ್ತಿಯ ಬಣ್ಣದ ಥೀಮ್‌ ಮತ್ತು ಗ್ರಾಫಿಕ್‌ಗಳನ್ನುಒಳಗೊಂಡಿದೆ. ಸ್ಕೂಟರ್‌ನ ನ್ಪೋರ್ಟಿ ಕೆಂಪು ಚಕ್ರಗಳುಮತ್ತೂಂದು ಆಕರ್ಷಣೆ. ಇದು ಮೂರು ಟೋನ್‌ ಕಲರ್‌ಸ್ಕೀಂಗಳಲ್ಲಿ ಲಭ್ಯವಿದ್ದು, 83,275 ರೂ.(ಎಕ್ಸ್‌-ಶೋರೂಂದೆಹಲಿ) ದರ ನಿಗದಿಪಡಿಸಲಾಗಿದೆ ಎಂದು ಮಾಹಿತಿನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next