Advertisement

ವಿನೂತನ ಅನುಭವ ಮಂಟಪಕ್ಕೆ ಜನವರಿಯಲ್ಲಿ ಅಡಿಗಲ್ಲು

02:25 PM Nov 18, 2019 | keerthan |

ಬೀದರ್: ಬಸವ ಕಲ್ಯಾಣದಲ್ಲಿ ರಾಜ್ಯ ಸರ್ಕಾರದಿಂದ ವಿನೂತನ ಅನುಭವ ಮಂಟಪ ನಿರ್ಮಾಣಕ್ಕೆ ಬರುವ ಜನವರಿ ತಿಂಗಳಲ್ಲಿ ಅಡಿಗಲ್ಲು ನೆರವೇರಿಸಲು ನಿರ್ಧರಿಸಲಾಗಿದೆ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುಭವ ಮಂಟಪ ಉತ್ಸವದ ವೇಳೆಯೇ ಕಾಮಗಾರಿಗೆ ಚಾಲನೆ ನೀಡುವ ಉದ್ದೇಶ ಹೊಂದಲಾಗಿತ್ತು. ಆದರೆ, ಉಪ ಚುನಾವಣೆ ಹಿನ್ನಲೆಯಲ್ಲಿ ಇದನ್ನು ಮುಂದೂಡಲಾಗಿದೆ. ವಿನೂತನ ಅನುಭವ ಮಂಟಪಕ್ಕೆ ರಾಜ್ಯ ಸರ್ಕಾರ ಈಗಾಗಲೇ 50 ಕೋಟಿ ರೂ. ಮಂಜೂರು ಮಾಡಿದ್ದು, ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದರೆ ಕೋಟ್ಯಂತರ ಹಣ ಸಿಗಲು ಸಾಧ್ಯವಿದೆ. ಈ ದಿಸೆಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಂಶೋಧನೆಗಳ ಆಧಾರದ ಮೇಲೆಯೇ 1955ರಲ್ಲಿ ಲಿಂ. ಡಾ. ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪವನ್ನು ನಿರ್ಮಿಸಿದ್ದಾರೆ. ಗೆಜೆಟ್ ಪ್ರಕಾರ ಮಂಟಪವು ಒಟ್ಟು 80 ಎಕರೆ ಜಮೀನು ಹೊಂದಿತ್ತು. ಆದರೆ, ಅದು ಈಗ 25 ಎಕರೆಗೆ ಬಂದಿದೆ. ನೂತನ ಕಟ್ಟಡ ಟ್ರಸ್ಟ್‌ಗೆ ಸೇರಬಹುದೆಂಬ ಉದ್ದೇಶಕ್ಕೆ ಕೆಲವರು ಈ ಸ್ಥಳಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆ ಜಮೀನು ಸಹ ಟ್ರಸ್ಟ್ ಹೆಸರಿನಲ್ಲಿಲ್ಲ, ಕೇವಲ ಕಬ್ಜಾದಲ್ಲಿದೆ. ನೂತನ ಕಟ್ಟಡಕ್ಕಾಗಿ ಟ್ರಸ್ಟ್ ಬೇಷರತ್ತಾಗಿ ಈ ಜಾಗವನ್ನು ಸರ್ಕಾರಕ್ಕೆ ಕೊಟ್ಟಿದೆ ಎಂದು ಡಾ. ಪಟ್ಟದ್ದೇವರು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next