Advertisement
ಹೊಸದಾಗಿ ಸೇವೆ ಆರಂಭಿಸಿರುವ ಕ್ಲಬ್ ಕ್ಲಾಸ್ ಬಸ್‌ನಲ್ಲಿ ಕಾಲಿಡಲು ಅತ್ಯಾಧುನಿಕ ವ್ಯವಸ್ಥೆ ಇದ್ದು, ಒಟ್ಟು 47 ಸೀಟುಗಳು ಲಭ್ಯವಿವೆ. ಎಲೆಕ್ಟ್ರಾನಿಕ್ ನಿಯಂತ್ರಿತ ಉಪಕರಣದೊಂದಿಗೆ ನವೀನ ಬಿ.ಎಸ್.-4 ಎಂಜಿನ್ ಹೊಂದಿದೆ. ಮಾನವ ಚಾಲಿತ ಹಾಗೂ ಸ್ವಚಾಲಿತ ಗೇರ್ ವ್ಯವಸ್ಥೆ ಹೊಂದಿರುವ ಈ ಬಸ್‌ಗಳು ಸಣ್ಣ ಮತ್ತು ಸೂಕ್ಷ್ಮ ತಿರುವುಗಳಲ್ಲೂ ಸುಲಲಿತವಾಗಿ ಓಡುವ ಸಾಮರ್ಥ್ಯ ಹೊಂದಿವೆ. ಎಲೆಕ್ಟ್ರಾನಿಕ್ ಸಸ್ಪೆನÒನ್ ವ್ಯವಸ್ಥೆ ಇರುವ ಇದರಲ್ಲಿ ಬ್ರೇಕ್ ನಿಯಂತ್ರಣಕ್ಕೂ ಎಲೆಕ್ಟ್ರಾನಿಕ್ ಸೌಲಭ್ಯವಿದೆ. ಇಂಧನ ಕ್ಷಮತೆ ಮತ್ತು ಬಾಳಿಕೆಯೂ ಹೆಚ್ಚಾಗಿರುವ ಈ ಬಸ್‌ನ ಬೆಲೆ 1.07 ಕೋಟಿ ರೂ. ಆಗಿದೆ. ಆದರೆ, ಟಿಕೆಟ್ ದರ ಈ ಹಿಂದೆ ಇದ್ದ ವೋಲ್ವೋ ಕ್ಲಬ್‌ಕ್ಲಾಸ್ ಬಸ್ ದರದಷ್ಟೇ ಇರುತ್ತದೆ.
ಬೆಂಗಳೂರು ವಿಭಾಗದಿಂದ ಬೆಂಗಳೂರು-ಕ್ಯಾಲಿಕಟ್, ಬೆಂಗಳೂರು-ಚೆನ್ನೈ, ಬೆಂಗಳೂರು-ವಿಜಯವಾಡ ಮತ್ತು ಬೆಂಗಳೂರು-ಶ್ರೀಹರಿಕೋಟಾ ಮಧ್ಯೆ ತಲಾ ಎರಡು ಬಸ್‌ಗಳು, ಮಂಗಳೂರು ವಿಭಾಗದಿಂದ ಮಣಿಪಾಲ್, ಮಂಗಳೂರು-ಬೆಂಗಳೂರು ಮಧ್ಯೆ ಮೂರು ಬಸ್‌ಗಳು, ಮಂಗಳೂರು-ಮುಂಬೈ ಮಧ್ಯೆ ಮತ್ತು ಮಂಗಳೂರು ಬೆಂಗಳೂರು ಮಧ್ಯೆ 2 ಬಸ್‌ಗಳು, ಮೈಸೂರು ವಿಭಾಗದಿಂದ ವಿರಾಜಪೇಟೆ-ಬೆಂಗಳೂರು ಮಧ್ಯೆ ಒಂದು, ಮಡಿಕೇರಿ-ಬೆಂಗಳೂರು ಮಧ್ಯೆ 2 ಹಾಗೂ ಮೈಸೂರು-ಬೆಂಗಳೂರು ಮಧ್ಯೆ 5 ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.