Advertisement

ಅಮೆರಿಕ ಅಧ್ಯಕ್ಷರಿಗಾಗಿ ಹೊಸ ಏರ್‌ಫೋರ್ಸ್‌ ಒನ್‌

10:12 AM Jul 28, 2020 | mahesh |

ಜಗತ್ತಿನ ಅತ್ಯಾಧುನಿಕ ಹಾಗೂ ಗರಿಷ್ಟಾತಿಗರಿಷ್ಟ ಭದ್ರತೆಯ ವಿವಿಐಪಿ ವಿಮಾನವೆಂದರೆ ಅದು ಅಮೆರಿಕದ “ಏರ್‌ಫೋರ್ಸ್‌ ಒನ್‌’. ಸವಲತ್ತುಗಳಲ್ಲಿ, ಸುರಕ್ಷತೆಯಲ್ಲಿ ಈ ವಿಮಾನಕ್ಕೆ ಸರಿಸಾಟಿಯಾದ ಬೇರೊಂದು ವಿಮಾನವಿಲ್ಲ. ಈಗ ಚಾಲ್ತಿಯಲ್ಲಿರುವ ವಿಮಾನ ಹಳತಾಗಿದ್ದರಿಂದ ಅದನ್ನು ನೇಪಥ್ಯಕ್ಕೆ ಸರಿಸಲಾಗುತ್ತಿದ್ದು, ಸದ್ಯದಲ್ಲೇ ಹೊಸ “ಏರ್‌ಫೋರ್ಸ್‌ ಒನ್‌’ ಅಸ್ತಿತ್ವಕ್ಕೆ ಬರಲಿದೆ.

Advertisement

ಹೊಸ ವಿಮಾನ ಯಾವುದು?
“ವಿಸಿ -25ಬಿ’ ಎಂಬ ವಿಮಾನವನ್ನು ಹೊಸದಾಗಿ ಏರ್‌ಫೋರ್ಸ್‌ ಒನ್‌ ವಿಮಾನವಾಗಿ ಪರಿವರ್ತಿಸಲಾಗುತ್ತಿದೆ. ಇದು ಜೆಟ್‌ ತಂತ್ರಜ್ಞಾನವುಳ್ಳ ವಿಮಾನ. ಅತ್ಯಂತ ವೇಗವಾಗಿ ನಿಖರವಾಗಿ ಪ್ರಯಾಣಿಸುವ, ಕ್ಷಿಪಣಿಯನ್ನು ಹಿಮ್ಮೆಟ್ಟಿಸುವ, ಮಿಂಚು-ಗುಡುಗು ಇವುಗಳನ್ನು ನಿಗ್ರಹಿಸುವ ಛಾತಿಯನ್ನು
ಹೊಂದಿದೆ. ಸುಮಾರು 5,900 ಸಾವಿರ ಕೋಟಿ ರೂ. ನೀಡಿ ವಿಮಾನವನ್ನು ಖರೀದಿಸಲಾಗಿದೆ. ಈಗ ನಿವೃತ್ತಿಯ ಅಂಚಿನಲ್ಲಿರುವ ಏರ್‌ಫೋರ್ಸ್‌ ಒನ್‌ ವಿಮಾನಕ್ಕೆ ಹೋಲಿಸಿದರೆ ಈ ವಿಮಾನದಲ್ಲಿ ಕೆಲವು ಸೌಲಭ್ಯಗಳು ಕಡಿಮೆ. ಅಂದರೆ, ಅನಗತ್ಯ ಸೌಲಭ್ಯಗಳನ್ನು ತೆಗೆದು ಹಾಕಲಾಗಿದೆ. ಆದರೆ, ಮೊದಲಿಗಿಂತಲೂ ದೊಡ್ಡದಾದ ವಿಮಾನವಿದು. ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ.

ವಿಮಾನದ ವಿಶೇಷವೇನು?
– ಇದು ಮೊದಲಿಗೆ ಬಳಕೆಗೆ ಬಂದಿದ್ದು ಜಾರ್ಜ್‌ ಬುಷ್‌ ಅವರು ಅಮೆರಿಕ ಅಧ್ಯಕ್ಷರಾಗಿದ್ದಾಗ.
– 1990ರ ದಶಕದಲ್ಲಿ ಈ ಸುರಕ್ಷಿತ ವಿಮಾನವನ್ನು ಮೊದಲ ಬಾರಿಗೆ ಬಳಕೆಗೆತರಲಾಯಿತು.
– ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಹಳೆಯ ವಿಮಾನಕ್ಕೆ ನಿವೃತ್ತಿ ನೀಡಲಾಗುತ್ತಿದೆ.
– ಹೊಸ ವಿಮಾನವನ್ನು ಏರ್‌ಫೋರ್ಸ್‌ ಒನ್‌ ಆಗಿ ಪರಿವರ್ತಿಸಲಾಗುತ್ತಿದೆ.

39,000 ಕೋಟಿ ರೂ. ಹೊಸ “ಏರ್‌ಫೋರ್ಸ್‌ ಒನ್‌’ಗಾಗಿ ಮೀಸಲಿಟ್ಟಿರುವ ಒಟ್ಟು ಬಜೆಟ್‌
5,900 ಕೋಟಿ ರೂ. ಹೊಸ “ವಿಸಿ-25ಬಿ’ ವಿಮಾನ ಖರೀದಿಗಾಗಿ ವ್ಯಯಿಸಲಾಗಿರುವ ಹಣ
33,100 ಕೋಟಿ ರೂ. “ವಿಸಿ-25ಬಿ’ ವಿಮಾನವನ್ನು ಪರಿವರ್ತಿಸಲು ಮೀಸಲಿಟ್ಟಿರುವ ಬಜೆಟ್‌

Advertisement

Udayavani is now on Telegram. Click here to join our channel and stay updated with the latest news.

Next