Advertisement
ಇಂದು ಕೃಷಿಕರಿಗೆ ತಾವು ಬೆಳೆದ ಕೃಷಿ ಉಳಿಯಲು, ಪ್ರಾಣಿ, ಪಕ್ಷಿಗಳ ಕಾಟ ತಪ್ಪಿಸುವುದೇ ದೊಡ್ಡ ಸಮಸ್ಯೆ ಎಂಬಂತಾಗಿದೆ. ಈ ಕಾರಣಕ್ಕಾಗಿಯೇ ಭತ್ತ ಬೇಸಾಯದಷ್ಟೇ ತರಕಾರಿ ಬೆಳೆ ಉಳಿಸಲು ಕೃಷಿಕರು ಶ್ರಮಪಡುತ್ತಿದ್ದಾರೆ. ಈಗ ಕುಂಬಳಕಾಯಿ, ಸೌತೆಕಾಯಿ ತರಕಾರಿ ಬೆಳೆಸುವ ಸಮಯ. ಈಗಾಗಲೇ ಇದರ ಬೀಜ ಬಿತ್ತನೆಯಾಗಿದೆ. ಗಿಡಗಳು ಮೇಲೆದ್ದು ಬಂದಿದೆ, ಬಳ್ಳಿಗಳು ಹರಡಿವೆ.ಅದನ್ನು ರಕ್ಷಿಸಲು ಈ ಕೋಟೆ ನಿರ್ಮಾಣವಾಗಿದೆ.
ಕಾಡು ನಾಶದಿಂದ ಕಾಡಿನಲ್ಲಿದ್ದ ಪಕ್ಷಿ, ಪ್ರಾಣಿಗಳಿಗೆ ಏನೂ ಆಹಾರ ಸಿಗದ ಕಾರಣ ಇಂದು ನಾಡಿನತ್ತ ಬರುತ್ತಿವೆ. ಅದು ಕೂಡ ಹಿಂಡು-ಹಿಂಡಾಗಿ ಬರುತ್ತದೆ. ಕಾಡಿನ ಸಮೀಪದಲ್ಲಿದ್ದರೆ ಅದರ ಉಪಟಳ ಇನ್ನೂ ಹೆಚ್ಚು. ನವಿಲು ಈಗ ಊರಿನಲ್ಲೇ ತನ್ನ ಬದುಕು ನಡೆಸುತ್ತಿದ್ದು, ಕೃಷಿಕರ ನಿದ್ದೆಗೆಡಿಸುತ್ತಿದೆ. ಫಲ ನೀಡದ ಉಪಾಯಗಳು
ಬೆಳ್ಚಪ್ಪ, ಡಬ್ಬಿ ಹೊಡೆಯುವುದು, ಪತಾಕೆ ಹಾರಿಸುವುದು, ಗಾಳಿಗೆ ಶಬ್ದ ಮಾಡುವ ಬೆಗಡೆಗಳನ್ನು ಕಟ್ಟುವುದು ಇಂತಹ ಹಲವು ಉಪಾಯಗಳನ್ನು ಮಾಡಿದರೂ ಫಲ ನೀಡುತ್ತಿಲ್ಲ. ಅದಕ್ಕಾಗಿಯೇ ಸೀರೆ ಹಾಗೂ ನೆಟ್‌ನ ಕೋಟೆ ನಿರ್ಮಿಸಿದ್ದಾರೆ.
Related Articles
ತರಕಾರಿ ಬೆಳೆಸುವ ಪ್ರವೃತ್ತಿ ತನ್ನನ್ನು ಪ್ರತಿಬಾರಿ ಈ ಕಾಯಕಕ್ಕೆ ಇಳಿಸುತ್ತಿದೆ. ನದಿಯ ತಟದಲ್ಲಿಯೇ ಈ ಗದ್ದೆ ಇದೆ. ಹಿಂಗಾರು ಭತ್ತ ಬೇಸಾಯಕ್ಕೆ ರೆಡಿ ಮಾಡಿದ್ದೆ. ಆದರೆ ಉಳುಮೆ ಮಾಡಲು ಇಲ್ಲಿ ಟಿಲ್ಲರ್ ತರಲು ರಸ್ತೆ ಇಲ್ಲದಾಗಿದೆ. ಮುಂಗಾರು ಭತ್ತ ಬೇಸಾಯಕ್ಕೆ ನೆರೆ ಹಾವಳಿ ಇದೆ. ನವಿಲು ಹಿಂಡು ಹಿಂಡಾಗಿ ಬರುತ್ತವೆ. ಇದಕ್ಕಾಗಿ ನೆಟ್ ಹಾಗೂ ಸೀರೆ ಬಳಸಿ ತರಕಾರಿ ಗಿಡಗಳ ರಕ್ಷ ಣೆಗೆ ಶ್ರಮಿಸುತ್ತಿದ್ದೇನೆ.
– ಚಂದ್ರಹಾಸ ಮಾರ್ಲ,ಕೃಷಿಕರು
Advertisement