ನಗರದ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಗರದ ಬಹುತೇಕ ರಸ್ತೆಗಳ ಡಿವೈಡರ್‌ಗಳ ಮೇಲೆ ಹೂವಿನ ಗಿಡಗಳನ್ನು ನೆಡಲಾಗಿದೆ. ಇದು ಹೂ ಬಿಟ್ಟಾಗ ಸುಂದರವಾಗಿ ಕಾಣಿಸುತ್ತದೆ. ಆದರೆ ಇದರ ನಿರ್ವಹಣೆ ಸಮರ್ಪಕವಾಗಿ ಆಗದೆ ಇರುವುದು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಮಸ್ಯೆಯಾಗಿ ಬದಲಾಗಿದೆ. ಕೆಎಸ್ಸಾರ್ಟಿಸಿಯಿಂದ ಕಾಪಿಕಾಡ್ ಹೋಗುವ ರಸ್ತೆಯ ಡಿವೈಡರ್‌ನಲ್ಲಿ ಹೂವಿನ ಗಿಡಗಳನ್ನು ನೆಡಲಾಗಿದ್ದು, ಅದರ ಗಿಡವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದರಿಂದ ಅದು ದಟ್ಟವಾಗಿ ಬೆಳೆದಿದೆ. ಇದರಿಂದಾಗಿ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗುವ ಪಾದಚಾರಿಗಳಿಗೆ ವಾಹನಗಳು ಕಾಣದೆ ಸಣ್ಣಪುಟ್ಟ ಅಪಘಾತಗಳಾಗುತ್ತಿದೆ. ಹಾಗೆಯೇ ವೇಗವಾಗಿ ಬರುವ ವಾಹನ ಸವಾರರಿಗೆ ರಸ್ತೆ ದಾಟಲು ಮುಂದಾಗುವ ಪಾದಚಾರಿಗಳು ಕಾಣದೆ ಅಪಘಾತಗಳಾಗುತ್ತಿದೆ. ಹಾಗಾಗಿ ಇನ್ನಷ್ಟು ಅಪಾಯಗಳಾಗುವ ಮುನ್ನ ಗಿಡಗಳ ಕಟಾವು ಮಾಡಿಸುವ ಕೆಲಸವಾಗಬೇಕಾಗಿದೆ.
- ಪ್ರಜ್ಞಾ ಶೆಟ್ಟಿ