Advertisement

Udupi: ಡಾ.ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ನರರೋಗ ಶಾಸ್ತ್ರ ಕ್ಲಿನಿಕ್ ಪ್ರಾರಂಭ

02:22 PM Feb 13, 2024 | Team Udayavani |

ಉಡುಪಿ: ಡಾ. ಟಿ.ಎಂ.ಎ. ಪೈ ಆಸ್ಪತ್ರೆಯು ನರರೋಗ ಶಾಸ್ತ್ರ ಕ್ಲಿನಿಕ್ ಅನ್ನು ಪರಿಚಯಿಸುವ ಮೂಲಕ ತನ್ನ ವೈದ್ಯಕೀಯ ಸೇವೆಗಳನ್ನು ಹೆಚ್ಚಿಸಲು ಸಜ್ಜಾಗಿದೆ. ಈ ಕ್ಲಿನಿಕ್ ಹೊರರೋಗಿಗಳ ಸಮಾಲೋಚನೆಗಾಗಿ 2024ರ ಫೆ. 16 ಪ್ರಾರಂಭ.

Advertisement

ಖ್ಯಾತ ನರರೋಗ ತಜ್ಞ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಣಿಪಾಲದ ಸಹ ಪ್ರಾಧ್ಯಾಪಕ ಡಾ. ನಿಕಿತ್ ಅಂಪಾರ್  ಪ್ರತಿ ಶುಕ್ರವಾರ ಮಧ್ಯಾಹ್ನ 12. 30- 4 ಗಂಟೆಯವರೆಗೆ ಸಮಾಲೋಚನೆಗೆ ಲಭ್ಯವಿರುತ್ತಾರೆ.

ಈ ಕೆಳಗಿನ ರೋಗ ಲಕ್ಷಣಗಳಿರುವ ರೋಗಿಗಳು ನರರೋಗ ಶಾಸ್ತ್ರ ತಜ್ಞರನ್ನು ಭೇಟಿ ಮಾಡಬಹುದು: ಪಾರ್ಶ್ವವಾಯು, ಪಾರ್ಕಿನ್ಸನ್ ಮತ್ತು ಚಲನೆ-ಸಂಬಂಧಿತ ಅಸ್ವಸ್ಥತೆಗಳು, ಮೈಗ್ರೇನ್ (ತೀವ್ರ ತಲೆ ನೋವು) ಮತ್ತು ಇತರ ತಲೆನೋವು ಅಸ್ವಸ್ಥತೆಗಳು, ಮರೆವಿನ ತೊಂದರೆ (ಮೆಮೊರಿ ಲಾಸ್), ಮೆದುಳಿನ ಸೋಂಕುಗಳು, ಮಲ್ಟಿಪಲ್ ಸ್ಕ್ಲೆರೋಸಿಸ್ ಹಾಗೂ ಇನ್ನಿತರ ಯಾವುದೇ ನರರೋಗ ಸಮಸ್ಯೆಗಳು.

ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ಮಾತನಾಡಿ, ನಮ್ಮ ವೈದ್ಯಕೀಯ ಪರಿಣಿತರ ತಂಡಕ್ಕೆ ಡಾ. ನಿಕಿತ್ ಅಂಪಾರ್ ಅವರನ್ನು ಸ್ವಾಗತಿಸಲು ಸಂತೋಷವಾಗಿದೆ. ನರರೋಗ ತಜ್ಞರ  ಸೇರ್ಪಡೆಯಿಂದಾಗಿ ಉಡುಪಿಯ ಜನರಿಗೆ ಸೂಕ್ತಕಾಲದಲ್ಲಿ ರೋಗ ನಿರ್ಣಯದೊಂದಿಗೆ ಗುಣಮಟ್ಟದ ವೈದ್ಯಕೀಯ ಆರೈಕೆ ಸಮುದಾಯಕ್ಕೆ ತಲುಪಿಸುವ ನಮ್ಮ ಬದ್ಧತೆಗೆ  ಹೊಂದಾಣಿಕೆಯಾಗುತ್ತದೆ ಎಂದು ಹೇಳಿದ್ದಾರೆ.

ಸಮಾಲೋಚನೆಯನ್ನು ಕಾಯ್ದಿರಿಸಲು (ಅಪಾಯಿಂಟ್‌ಮೆಂಟ್ ನಿಗದಿಪಡಿಸಲು) ಅಥವಾ ಹೆಚ್ಚಿನ ಮಾಹಿತಿಗಾಗಿ ಮೊ. ಸಂಖ್ಯೆ 7259032864 ಸಂಪರ್ಕಿಸಬಹುದು ಎಂದು ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next