ಬೆಂಗಳೂರು: ಈಗಾಗಲೇ ದೆಹಲಿಯಲ್ಲಿ ಸೂಪರ್ ಸ್ಪೆಷಾಲಿಟಿ ಸೈಕಿಯಾಟ್ರಿಕ್ ನ್ಯೂರೊಕೇರ್ ಸೆಂಟರ್ ಅನ್ನು ಸ್ಥಾಪಿಸಿ ಯಶಸ್ವಿ ಕಂಡಿರುವ ಮೈಸೂರಿನ ಎನ್‌ಆರ್ ಸಮೂಹದ ರಂಗಸನ್ಸ್ ಹೆಲ್ತ್‌ಕೇರ್ ಈಗ ನಗರದ ರಿಚ್ಮಂಡ್‌ಟೌನ್‌ನ ರಹೇಜ ಪ್ಯಾರಾಮೌಂಟ್‌ನಲ್ಲಿ ಮೈಂಡ್‌ಫುಲ್ ಟಿಎಂಎಸ್ ನ್ಯೂರೋಕೇರ್ ಸೆಂಟರ್ ಹೆಸರಿನ 2ನೇ ಶಾಖೆ ಆರಂಭಿಸಿದೆ.
ಈ ಸಂದರ್ಭದಲ್ಲಿ ರಂಗಸನ್ಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಎನ್‌ಆರ್ ಸಮೂಹದ ವ್ಯವಸ್ಥಾಪಕ ಪಾಲುದಾರ ಪವನ್ ರಂಗ ಅವರು ಮಾತನಾಡಿ, ಅಮೆರಿಕ ಮೂಲದ ಮೈಂಡ್‌ಫುಲ್ ಟಿಎಂಎಸ್ (ಟ್ರಾನ್ಸ್‌ಕ್ರೇನಿಯಲ್ ಮ್ಯಾಗ್ನೆಟಿಕ್ ಸ್ಟಿಮುಲೇಷನ್) ನ್ಯೂರೊಕೇರ್ ಖನ್ನತೆ, ಒಸಿಡಿ ಮತ್ತು ವ್ಯಸನಗಳಿಗೆ ಚಿಕಿತ್ಸೆ ನೀಡುವ ವಿಶೇಷ ಕೇಂದ್ರವಾಗಿದೆ.
ಮಾನಸಿಕ ಅಸ್ವಸ್ಥತೆ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ರೋಗಿಗಳನ್ನು ಸಾಮಾನ್ಯ ಸ್ಥಿತಿಗೆ ತರುವಲ್ಲಿ ನೆರವಾಗಲು ಮೈಂಡ್‌ಫುಲ್ ನ್ಯೂರೋಕೇರ್ ಶ್ರಮಿಸಲಿದೆ. ದೆಹಲಿಯ ಕೇಂದ್ರ ಯಶಸ್ವಿ ನಂತರ ನಮ್ಮ ರಾಜ್ಯದಲ್ಲೂ ಆರೋಗ್ಯ ಸೇವೆಯನ್ನು ವಿಸ್ತರಿಸಬೇಕೆಂಬ ಇಚ್ಛೆಯಿಂದ ರಾಜಧಾನಿ ಬೆಂಗಳೂರಿನಲ್ಲಿ ಸೆಂಟರ್ ತೆರೆದಿದ್ದೇವೆ. ಜಾಗತಿಕ ತರಬೇತಿ ಹೊಂದಿದ ಮನೋವೈದ್ಯರು, ಮನಃಶಾಸ್ತ್ರಜ್ಞರು ಹಾಗೂ ಅತ್ಯಾಧುನಿಕ ಸೌಲಭ್ಯಗಳುಳ್ಳ ಮನೆಯ ವಾತಾವರಣ ಇಲ್ಲಿ ಸೃಷ್ಟಿಸಲಾಗಿದೆ ಎಂದರು.
ಮೈಂಡ್‌ಫುಲ್ ಟಿಎಂಎಸ್ ನ್ಯೂರೋಕೇರ್ ಬೆಂಗಳೂರಿನ ಮನೋರೋಗ ತಜ್ಞ ಡಾ. ವಿಜಯ್ ಮೆಹಟ್ರಿ ಅವರು, ನಿಜವಾದ ಚಿಕಿತ್ಸೆಯ ಅಗತ್ಯವಿರುವ ಹಾಗೂ ಖನ್ನತೆಗೊಳಗಾಗಿರುವ ವ್ಯಕ್ತಿಗಳ ಪೈಕಿ ದೊಡ್ಡ ಸಂಖ್ಯೆಯ ಜನರು ಸಮಗ್ರ ಚಿಕಿತ್ಸೆ ಮತ್ತು ಆರೈಕೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಕೆಲವರಲ್ಲಿ ಚಿಕಿತ್ಸೆ ನಿರೋಧಕತೆ ಇರುವುದರಿಂದ ಚಿಕಿತ್ಸೆಯ ನಂತರವೂ ಕೂಡ ಫಲಿತಾಂಶ ಕಾಣಲಾಗಿರುವುದಿಲ್ಲ.
ಪ್ರಸ್ತುತ ರೋಗಿಗಳಿಗೆ ನವೀನ, ಉನ್ನತ ಹಾಗೂ ಸಾಕ್ಷಿ ಆಧಾರಿತ ಪರಿಣಾಮಕಾರಿ ಚಿಕಿತ್ಸಾ ಮಾರ್ಗ ಟಿಎಂಎಸ್‌ನ ಅಗತ್ಯವಿರುತ್ತದೆ. ವಿಶ್ವದ ಎಲ್ಲೆಡೆ ಟಿಎಂಎಸ್ ಪರಿಣಾಮಕಾರಿ ಡ್ರಗ್ ಆಧಾರಿತವಲ್ಲದ ಚಿಕಿತ್ಸೆ. ಯಾವುದೇ ದುಷ್ಪರಿಣಾಮಗಳಿಲ್ಲದಂತೆ ಖನ್ನತೆಗಾಗಿ ಇದನ್ನು ವಿಕಾಸಗೊಳಿಸಲಾಗಿದೆ. ಖನ್ನತೆ, ಒಸಿಡಿ ಮುಂತಾದ ಮಾನಸಿಕ ಸಮಸ್ಯೆಗಳನ್ನು ನಿವಾರಿಸಲು ಇದು ನೆರವಾಗಲಿದೆ ಎಂದು ನುಡಿದರು. ಭಾರತೀಯ ಮನೋರೋಗಶಾಸ್ತ್ರ ಸಂಸ್ಥೆಯ ಅಧ್ಯಕ್ಷ ಡಾ. ಅಜಿತ್ ಭಿಡೆ ಅವರು ನ್ಯೂರೋಕೇರ್ ಸೆಂಟರ್‌ಗೆ ಚಾಲನೆ ನೀಡಿದರು.