Advertisement

ನೆಟ್‌ವರ್ಕ್‌ ಸಮಸ್ಯೆ: ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿ ಸೇವೆ ಮಂದಗತಿ

09:16 PM Aug 03, 2019 | Team Udayavani |

ಕೈಕಂಬ: ಗುರುಪುರ ನಾಡ ಕಚೇರಿಯಲ್ಲಿ ನೆಟ್‌ವರ್ಕ್‌ನಲ್ಲಿನ ಸಮಸ್ಯೆಯಿಂದಾಗಿ ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿ ತೊಂದರೆಯಾಗಿದೆ.ಕಳೆದೆರಡು ದಿನಗಳಿಂದ ಈ ಸಮಸ್ಯೆ ಕಂಡು ಬಂದಿದ್ದು ನಾಡ ಕಚೇರಿಯಲ್ಲಿ ಬಂದ ಗ್ರಾಮಸ್ಥರಿಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿ ದ್ದು ಸಿಬಂದಿಗಳು ಹರಸಾಹಸ ಪಟ್ಟು ಸೇವೆ ನೀಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

13 ಗ್ರಾ. ಪಂ.ನ 26 ಗ್ರಾಮ ಗಳನ್ನೊಳ ಗೊಂಡ ಮತ್ತು ಮಂಗಳೂರು ಮಹಾ ನಗರ ಪಾಲಿಕೆಯ 3ವಾರ್ಡ್‌, ಗುರುಪುರ ನಾಡ ಕಚೇರಿಯಲ್ಲಿ ಜನರು ಕಾದು ನಿಂತ ದೃಶ್ಯಗಳು ಕಂಡು ಬಂದವು. ನಾಡಕಚೇರಿಯಲ್ಲಿ ಕೆಎಸ್‌ಡಬ್ಯೂಎಎನ್‌ ಯೋಜನೆಯಲ್ಲಿ ಬಿಎಸ್‌ಎನ್‌ಎಲ್‌ ಹೈಸ್ಪಿಡ್‌ ನೆಟ್‌ವರ್ಕ್‌ನಲ್ಲಿ ಅಟಲ್‌ ಜನಸ್ನೇಹಿ ಸೇವೆಗಳಾದ ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ವೃದ್ಯಾಪ್ಯ, ಸಂಧ್ಯಾ ಸುರಕ್ಷಾ,ವಿಧವಾ ಮುಂತಾದ ವೇತನಗಳು, ಕೃಷಿ ಕುಟುಂಬದ ದೃಢೀಕರಣ ಪತ್ರಪಹಣಿ ಪತ್ರಿಕೆ, ಜನನ ಹಾಗೂ ಮರಣ ಪ್ರಮಾಣ ಪತ್ರ ಮುಂತಾದವುಗಳ ಬಗ್ಗೆ ಸೇವೆ ನೀಡಲಾಗುತ್ತಿದ್ದು ಈಗ ತೊಂದರೆಯಾಗಿದೆ. ಈ ಸಮಸ್ಯೆ ಎಲ್ಲ ನಾಡಕಚೇರಿಯಲ್ಲಿ ಕಾಣಿಸಿಕೊಂಡ ಕಾರಣ ನೆಟ್‌ವರ್ಕ್‌ ಜತೆಗೆ ಸೈಟ್‌ ನಲ್ಲಿ ಸಮಸ್ಯೆ ಬಂದ ಕಾರಣ ಈ ಸೇವೆ ನೀಡಲು ತೊಂದರೆಯಾಗಿದೆ.

ಸೋಮವಾರದೊಳಗೆ ಸಮಸ್ಯೆ ಪರಿಹಾರ
ನೆಟ್‌ವರ್ಕ್‌ನಲ್ಲಿ ಸಮಸ್ಯೆಯಿಂದಾಗಿ ಅಟಲ್‌ಜೀ ಜನಸ್ನೇಹಿ ಸೇವೆಗಳು ನೀಡಲು ತೊಂದರೆಯಾಗಿವೆ ಆದರೂ ನಿಧಾನಗತಿಯಲ್ಲಿ ಸೇವೆ ನೀಡಲಾ ಗುತ್ತಿದೆ.ಈಗಾಗಲೇ ಈ ಬಗ್ಗೆ ತಿಳಿಸಲಾಗಿದೆ.ಸೋಮ ವಾ ರದಂದು ಈ ಸಮಸ್ಯೆ ಪರಿಹಾರ ವಾಗಲಿದೆ ಎಂದು ನಾಡಕಚೇರಿಯ ಉಪತಹಶೀಲ್ದಾರ ಶಿವಪ್ರಸಾದ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next