Advertisement
ಕೋವಿಡ್ ಸೋಂಕು, ಲಾಕ್‌ಡೌನ್ ವಿಧಿಸಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿರುವ ರಾಜ್ಯ ಸರ್ಕಾರ, ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡ್ಡಿಯಾಗಬಾರದೆಂಬ ಉದ್ದೇಶದಿಂದ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿ ಆನ್‌ಲೈನ್ ತರಗತಿಗೆ ಅವಕಾಶ ಕಲ್ಪಿಸಿತು. ಆದರೆ, ದಿಢೀರ್‌ಆಗಿ ಬಂದ ಈ ಶೈಕ್ಷಣಿಕ ಪದ್ಧತಿ ನಿರೀಕ್ಷಿತಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ತಲುಪಿಲ್ಲ. ಅದರಲ್ಲೂ ಮುಖ್ಯವಾಗಿಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳುಸ್ಮಾರ್ಟ್‌ಫೋನ್, ಸಮರ್ಪಕ ಇಂಟರ್‌ನೆಟ್ ಸೌಲಭ್ಯಗಳಿಲ್ಲದೇ ಹಲವು ಸಮಸ್ಯೆಗಳನ್ನು ಎದುರಿಸುವಂತೆ ಮಾಡಿತು.
Related Articles
Advertisement
ಸಮರ್ಪಕ ಮೊಬೈಲ್‌ಗಳಿಲ್ಲದ ಶೇ. 40ರಷ್ಟು ವಿದ್ಯಾರ್ಥಿಗಳನ್ನು ಗುರುತಿಸಿರುವ ಆಯಾ ಶಾಲೆಗಳ ಶಿಕ್ಷಕರು, ಇತರೆ ಮೂಲಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮೊಬೈಲ್‌ಗಳು ಇಲ್ಲದ ವಿದ್ಯಾರ್ಥಿಗಳು ದೂರದರ್ಶನ (ಚಂದನ ಟಿವಿ)ದಲ್ಲಿ ವಿಷಯವಾರು ಪ್ರಸಾರವಾಗುವುದನ್ನು ವೀಕ್ಷಿಸಬಹುದು. ಜತೆಗೆ ಮಾದರಿ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಮನೆಗಳಿಗೆ ತಲುಪಿಸಿ ಅವುಗಳನ್ನು ಮನೆಯಲ್ಲೇ ಬರೆದು ಪರೀಕ್ಷೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ ಎನ್ನುತ್ತಾರೆ ಅವರು.
ಅಲ್ಪಮಟ್ಟದಲ್ಲಿ ಆನ್‌ಲೈನ್ ತರಗತಿ ಯಶಸ್ವಿ: ಇನ್ನು ಪದವಿ ಹಂತದಲ್ಲಿ ಆನ್ ಲೈನ್ ತರಗತಿಗಳು ಭಾಗಶಃ ತಲುಪಿದೆ ಎನ್ನಬಹುದು. ಬಹುತೇಕ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್‌ಗಳಿವೆ. ತಂತ್ರಜ್ಞಾನ ಬಳಸುವಷ್ಟು ಬೌದ್ಧಿಕ ಮಟ್ಟವೂ ಅವರಲ್ಲಿರುವ ಕಾರಣ ಅಲ್ಪಮಟ್ಟದಲ್ಲಿ ಆನ್‌ಲೈನ್ ತರಗತಿಗಳು ಯಶಸ್ವಿಯಾಗಿದೆ. ಬೋಧಕರು ಪಠ್ಯ ಬೋಧನೆಯನ್ನು ವೀಡಿಯೋ ರೆಕಾರ್ಡ್ ಮಾಡಿ ವಿದ್ಯಾರ್ಥಿಗಳ ಗ್ರೂಪ್‌ಗ್ಳಿಗೆ ಶೇರ್ ಮಾಡಿದ್ದಾರೆ. ಇದೂ ಇಲ್ಲದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನೇ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ವಿವಿ ಬೋಧಕರು ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಶೇ. 40ರಷ್ಟು ವಿದ್ಯಾರ್ಥಿಗಳಲ್ಲಿ ಸ್ಮಾರ್ಟ್‌ಫೋನ್ ಇಲ್ಲ. ಫೋನ್ ಇದ್ದ ವಿದ್ಯಾರ್ಥಿಗಳಿಗೂ ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಇದರ ನಡುವೆ ಬಹುತೇಕ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಿದ್ದಾರೆ ಎಂಬ ಮಾಹಿತಿ ಇದೆ. ಇನ್ನು ಫೋನ್ ಇಲ್ಲದ ವಿದ್ಯಾರ್ಥಿಗಳಿಗೆಶಿಕ್ಷಕರೇ ದೂರದರ್ಶನದಲ್ಲಿ ಪ್ರಸಾರವಾಗುವ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ಪರೀಕ್ಷೆಗೆ ಸಿದ್ಧಗೊಳಿಸಿದ್ದಾರೆ. -ಎರ್ರಿಸ್ವಾಮಿ,ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ, ಬಳ್ಳಾರಿ
ಆನ್‌ಲೈನ್ ತರಗತಿ ಸಲುವಾಗಿ ತಂದೆಯಿಂದ ಸ್ವಲ್ಪ ಹಣ ಪಡೆದು, ನಾನು ಕೂಲಿ ಕೆಲಸ ಮಾಡಿ ಬಂದ ಹಣದಲ್ಲಿ ಸ್ಮಾರ್ಟ್ ಫೋನ್ ಖರೀದಿಸಿದ್ದೇನೆ. ಆದರೆತಿಂಗಳಾಗುತ್ತಿದ್ದಂತೆ 250-300 ರೂಗಳ ಇಂಟರ್‌ನೆಟ್ ಪ್ಯಾಕ್ ಹಾಕಿಸುವುದು ಸಮಸ್ಯೆಯಾಗಿದೆ. ಪದೇ ಪದೇ ಪೋಷಕರನ್ನು ಹಣ ಕೇಳಲು ಬೇಸರವಾಗಿ ಅಥವಾ ಅವರು ನೀಡುವುದು ತಡವಾದಲ್ಲಿ ಸ್ನೇಹಿತರ ವೈಫೈ ಮೊರೆ ಹೋಗುತ್ತಿದ್ದೇವೆ. ಅವರು ಇದ್ದಷ್ಟು ಹೊತ್ತು ವೈಫೆ„ ಬಳಸುವುದು. ಕೆಲವೊಮ್ಮೆ ನೆಟ್ ಇಲ್ಲದಿದ್ದಾಗ ತರಗತಿಗೆ ಹಾಜರಾಗಿಲ್ಲ.-ಶಿವರಾಜ್, 10ನೇ ತರಗತಿ ವಿದ್ಯಾರ್ಥಿ ಹಂದ್ಯಾಳ್ ಗ್ರಾಮ
ನಮ್ಮ ಮನೆಯಲ್ಲಿ ಸ್ಮಾರ್ಟ್‌ಫೋನ್ ಇಲ್ಲ. ನಾವುಬಡವರಾಗಿದ್ದರಿಂದ ಖರೀದಿಸುವ ಗೋಜಿಗೂ ಹೋಗಿಲ್ಲ. ಹಾಗಾಗಿ ಆನ್‌ಲೈನ್ ತರಗತಿಗೆ ಹಾಜರಾಗುವುದು ನನಗೆ ಕಷ್ಟವಾಗುತ್ತಿತ್ತು.ದೂರದಲ್ಲಿರುವ ಸ್ನೇಹಿತರ ಮನೆಗೆ ಹೋಗಿ ಅವರ ಮೊಬೈಲ್‌ನಲ್ಲೇ ಹಾಜರಾಗುತ್ತಿದ್ದೆ.ಕೆಲವೊಮ್ಮೆ ಅವರಿಲ್ಲದಿದ್ದಾಗ ಮನೆಯಲ್ಲೇ ಪಠ್ಯಪುಸ್ತಕ ಓದುತ್ತಿದ್ದೆ.ಮೇಲಾಗಿ ಯಾಳಿ³ ಗ್ರಾಮ ಅಂತರಾಜ್ಯ ಗಡಿಗ್ರಾಮವಾದ್ದರಿಂದ ನೆಟ್‌ವರ್ಕ್ ಸರಿಯಾಗಿ ಬರಲ್ಲ.-ಶ್ರಾವಣಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ, ಯಾಳಿ³ ಗ್ರಾಮ
ನಮ್ಮ ಮನೆಯಲ್ಲಿ ಚಿಕ್ಕ ಫೋನ್ ಇದೆ. ಅದರಲ್ಲಿ ನೆಟ್‌ವರ್ಕ್ ಬರಲ್ಲ. ಹಾಗಾಗಿ ಪಕ್ಕದ ಮನೆಯವರ ಮೊಬೈಲ್‌ನಲ್ಲಿ ಆನ್ ಲೈನ್ ತರಗತಿಗೆ ಹಾಜರಾಗುತ್ತಿದ್ದೆ. ಕೆಲವೊಮ್ಮೆ ಅವರು ಬೇಗ ವಾಪಸ್ ಪಡೆಯುತ್ತಿದ್ದು, ತರಗತಿಯನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದೆ.-ರೇವತಿ, 10ನೇ ತರಗತಿ, ಹಗರಿ ಫಾರ್ಮ್ ಶಾಲೆ ವಿದ್ಯಾರ್ಥಿನಿ
-ವೆಂಕೋಬಿ ಸಂಗನಕಲ್ಲು