Advertisement

ಪಡಿತರ, ಆನ್‌ಲೈನ್‌ ತರಗತಿ, ಇತರ ಸಂಪರ್ಕಕ್ಕೆ ಪರದಾಡುತ್ತಿರುವ ಜನತೆ

10:44 PM Feb 28, 2021 | Team Udayavani |

ಬೆಳ್ಮಣ್: ಕಾಂತಾವರ‌ ಗ್ರಾಮ ಪಂಚಾಯತ್‌ ಬೇಲಾಡಿ ಗ್ರಾಮದಲ್ಲಿ ಮೊಬೈಲ್‌ನ ಯಾವುದೇ ನೆಟ್‌ವರ್ಕ್‌ ಲಭ್ಯ ಇಲ್ಲ.
ದೇಶದ ಜನರು ಡಿಜಿಟಲ್‌ ಇಂಡಿಯಾ ಎಂದು ಹೆಮ್ಮೆಯಿಂದ ಬೀಗುತ್ತಿದ್ದರೂ ಬೇಲಾಡಿಯಂತಹ ಹಳ್ಳಿಗಳಲ್ಲಿ ಈ ಮಾತು ಸುಳ್ಳಾಗಿದೆ. ಹಳ್ಳಿ ಹಳ್ಳಿಗಳು ಕೂಡ ಇವತ್ತು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಎಲ್ಲ ವ್ಯವಸ್ಥೆಗಳು ಇಂಟರ್‌ನೆಟ್‌ ಕಾಲದಲ್ಲಿದೆ. ಅದೂ 4ಜಿ, 5ಜಿ ಯುಗದಲ್ಲಿದ್ದೇವೆ. ಆದರೆ ಬೇಲಾಡಿಯ ಜನ ಮಾತ್ರ ಈ ಕಾಲದಲ್ಲೂ ಒಂದು ಫೋನ್‌ ಕರೆ ಮಾಡಬೇಕಾದರೂ ನಾಲ್ಕೈದು ಕಿ.ಮೀ. ಸಾಗಬೇಕು ಇಲ್ಲ ವಾದಲ್ಲಿ ಎತ್ತರದ ಗುಡ್ಡವೇರಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

Advertisement

500ಕ್ಕೂ ಅಧಿಕ ಮನೆಗಳು
ಬೇಲಾಡಿ ಹಾಗೂ ಕಾಂತಾವರ ಗ್ರಾಮದಲ್ಲಿ ಸುಮಾರು 500ಕ್ಕೂ ಅಧಿಕ ಮನೆಗಳಿದ್ದು ಗ್ರಾಮದ ಉದ್ದಗಲಕ್ಕೂ ದುರ್ಬಲ ಸಂಪರ್ಕ ಸಿಗ್ನಲ್‌ನಿಂದ ಯಾವುದೇ ಖಾಸಗಿ ಮೊಬೈಲ್‌ ಸೇವಾ ಕಂಪೆನಿಗಳ ಸಂಪರ್ಕ ಅಥವಾ ಬಿಎಸ್‌ಎನ್‌ಎಲ್‌ ಸಂಪರ್ಕವೂ ಸಿಗದೆ ಇಲ್ಲಿನ ಜನ ಹೊರ ಜಗತ್ತಿನ ಸಂಪರ್ಕದಿಂದ ದೂರ ಉಳಿದು ಕೊಳ್ಳುವಂತಾಗಿದೆ. ಅಗತ್ಯ ಸಂದರ್ಭದಲ್ಲಿ ಎತ್ತರದ ಪ್ರದೇಶಕ್ಕೆ ತಮ್ಮ ಮೊಬೆ„ಲ್‌ ಕೊಂಡೊಯ್ಯಬೇಕಾಗಿದೆ. ಆದರೆ ಸಮರ್ಪಕ ನೆಟ್‌ವರ್ಕ್‌ ದೊರಕುತ್ತಿಲ್ಲ. ಗ್ರಾಮದಲ್ಲಿ ಹಲವಾರು ಸಂಘ- ಸಂಸ್ಥೆಗಳು, ಕನ್ನಡ ಸಂಘ ಹಾಗೂ ಸಾಹಿತ್ಯ ಹಾಗೂ ಸರಕಾರೇತರ ಸಂಘ ಸಂಸ್ಥೆಗಳು, ಸ್ವಸಹಾಯ ಗುಂಪುಗಳು ಕಾರ್ಯಾಚರಿಸುತ್ತಿವೆ. ಕನ್ನಡ ಮಾಧ್ಯಮ ಶಾಲೆಗಳು, ಹೈಸ್ಕೂಲ್‌ಗ‌ಳಿದ್ದು ಫೋನ್‌ ಕರೆಗೆ ನೆಟ್‌ ವರ್ಕ್‌ ಹಾಗೂ ಇಂಟರ್‌ನೆಟ್‌ ಇಲ್ಲದ ಕಾರಣ ಬಹುತೇಕ ಸಮಸ್ಯೆಯಾಗುತ್ತಿದೆ.

ಬೇಲಾಡಿಯ ಪರಿಸರದ ಮಕ್ಕಳು
ಹಾಗೂ ನಾಗರಿಕರಿಗೆ ಅತ್ಯವಶ್ಯಕವಾದ ದೂರವಾಣಿ ಸಂಪರ್ಕ, ಅಂತರ್ಜಾಲ ಸಂಪರ್ಕವಿಲ್ಲದೆ ವಿದ್ಯಾಭ್ಯಾಸಕ್ಕೂ ತೊಡಕುಂಟಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲವೂ ಅಂತರ್ಜಾಲದ ಮೂಲಕವೇ ವಿದ್ಯಾಭ್ಯಾಸಕ್ಕೆ ಪೂರಕ ಮಾಹಿತಿಯನ್ನು ಪಡೆಯಬೇಕಾಗಿದ್ದು ಕಾಂತಾವರ ಹಾಗೂ ಬೇಲಾಡಿ ಗ್ರಾಮದ ವಿದ್ಯಾರ್ಥಿಗಳು ಇಂಟರ್‌ನೆಟ್‌ ಇಲ್ಲದೆ ದೂರದೂರಿನ ಸೆ„ಬರ್‌ಗಳಿಗೆ ಅಲೆಯುವಂತಾಗಿದೆ.

ಗ್ರಾಮ ಸಭೆಯಲ್ಲೂ ಗದ್ದಲ
ಪ್ರತಿ ಗ್ರಾಮ ಸಭೆಯಲ್ಲೂ ಈ ಸಮಸ್ಯೆ ಕುರಿತು ಗ್ರಾಮಸ್ಥರು ಮನವಿ ಸಲ್ಲಿಸಿದ್ದರೂ ಯಾವುದೇ ಪರಿಹಾರ ಕಂಡಿಲ್ಲ. ತುರ್ತು ಅವಘಡ ಸಂದರ್ಭಗಳಲ್ಲಿ 6-7 ಕಿ.ಮೀ.ವರೆಗೆ ಸಂಚರಿಸಿ ಅನಂತರ ಕರೆ ಮಾಡಬೇಕಾದ ಪರಿಸ್ಥಿತಿ ಗ್ರಾಮಸ್ಥರದ್ದಾಗಿದೆ. ಬೇಲಾಡಿ
ಗ್ರಾಮದಲ್ಲಿ ಖಾಸಗಿ ಅಥವಾ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟವರ್‌ ಅಳವಡಿಸಿ ಗ್ರಾಮಸ್ಥರ ಬಹು ಕಾಲದ ಸಮಸ್ಯೆ ಪರಿಹರಿಸಲು ಕೋರಿದ್ದಾರೆ.

ಪಡಿತರ ವಿತರ‌ಣೆಗೂ ತೊಂದರೆ
ಬೇಲಾಡಿ, ಕಾಂತಾವರ ಗ್ರಾಮದಲ್ಲಿ ಯಾವುದೇ ನೆಟ್‌ವರ್ಕ್‌ ಸಂಪರ್ಕ ಇಲ್ಲದ ಪರಿಣಾಮ ದಿನೇ ದಿನೇ ಇಡೀ ಗ್ರಾಮದಲ್ಲಿ ಸಮಸ್ಯೆಗಳು ಹೆಚ್ಚಾಗು ತ್ತಿದೆ. ಇತ್ತಿಚಿನ ದಿನಗಳಲ್ಲಿ ಬಹುತೇಕ ಸರಕಾರಿ ಸೇವೆಗಳು ಇಂಟರ್‌ನೆಟ್‌ ಮೂಲಕವೇ ಆಗುತ್ತಿದ್ದು, ಗ್ರಾಮಸ್ಥರು ಸರಕಾರಿ ಯೋಜನೆ ಹಾಗೂ ಸೇವೆ ಪಡೆಯುವಲ್ಲಿ ನೆಟ್‌ವರ್ಕ್‌ ಸಮಸ್ಯೆ ಕಾಡುತ್ತಿದೆ. ನ್ಯಾಯಬೆಲೆ ಅಂಗಡಿ ಯಲ್ಲೂ ಪಡಿತರ ವಿತರಣೆಯಲ್ಲೂ ಸರ್ವರ್‌ ತೊಂದರೆಯುಂಟಾಗಿ ಗ್ರಾಮಸ್ಥರು ಪಡಿತರ ಕೇಂದ್ರಗಳಿಗೆ ಪದೇ ಪದೇ ಅಲೆದಾಡುವಂತಾಗಿದೆ.

Advertisement

ಸಮಸ್ಯೆ ಪರಿಹಾರಕ್ಕೆ ಪ್ರಯತ್ನ
ನೂತನ ಪಂಚಾಯತ್‌ ಇತ್ತೀಚೆಗಷ್ಟೇ ಆಡಳಿತಕ್ಕೆ ಬಂದಿದ್ದು ಮೊದಲ ಸಭೆಯಲ್ಲೇ ಈ ಬಗ್ಗೆ ಚರ್ಚಿಸಲಾಗುವುದು. ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು.
– ವನಿತಾ ನಾಯ್ಕ, ಕಾಂತಾವರ ಗ್ರಾ.ಪಂ.ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next