Advertisement

ಸುಳ್ಳು ಸುದ್ದಿ ತಡೆಗೆ ಜಾಲ ವಿಸ್ತರಣೆ

12:30 AM Feb 12, 2019 | |

ಹೊಸದಿಲ್ಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿ ದ್ದಂತೆಯೇ ಜನಪ್ರಿಯ ಸಾಮಾಜಿಕ ಅಂತರ್ಜಾಲ ತಾಣ ಫೇಸ್‌ಬುಕ್‌ ತನ್ನ ವಾಸ್ತವಾಂಶ ಪರಿಶೀಲನೆ ಕಾರ್ಯಕ್ರಮವನ್ನು ಇನ್ನಷ್ಟು ವಿಸ್ತರಿಸಿದೆ. ಈ ಯೋಜನೆಯನ್ನು ಜಾರಿಗೊಳಿಸುವುದಕ್ಕಾಗಿ ಇಂಡಿಯಾ ಟುಡೇ ಗ್ರೂಪ್‌, ವಿಶ್ವಾಸ್‌ ನ್ಯೂಸ್‌, ಫ್ಯಾಕ್ಟ್ಲಿ, ನ್ಯೂಸ್‌ಮೊಬೈಲ್‌ ಮತ್ತು ಫ್ಯಾಕ್ಟ್ ಕ್ರೆಸೆಂಡೋ ಸಂಸ್ಥೆಗ ಳನ್ನೂ ತೊಡಗಿಸಿಕೊಳ್ಳಲಿದೆ. ಈ ಸಂಸ್ಥೆಗಳು ಫೇಸ್‌ಬುಕ್‌ನಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಪರಿಶೀಲನೆ ನಡೆಸಿ ಅದರ ಖಚಿತತೆಯನ್ನು ಪರಾಮರ್ಶಿಸಲಿವೆ.

Advertisement

ಅಷ್ಟೇ ಅಲ್ಲ, ಈ ಸಂಸ್ಥೆಗಳು ಕೇವಲ ಇಂಗ್ಲಿಷ್‌ ಅಲ್ಲದೆ, ಹಿಂದಿ, ಬೆಂಗಾಲಿ, ತೆಲುಗು, ಮಲಯಾಳಂ ಮತ್ತು ಮರಾಠಿಯಲ್ಲಿರುವ ವಿಷಯಗಳನ್ನೂ ಪರಾಮರ್ಶಿಸಲಿವೆ. ಸುಳ್ಳು ಸುದ್ದಿಗಳ ಪತ್ತೆ ಮಾಡಲು ನಮಗೆ ಪಾಲುದಾರರ ಜಾಲ ಹೆಚ್ಚಿಸುವು ದೊಂದೇ ಮಾರ್ಗ. ಆರು ಭಾಷೆಯಲ್ಲಿ ವಾಸ್ತವಾಂಶ ವನ್ನು ಪರಿಶೀಲಿ ಸುವ ಏಳು ಪಾಲುದಾರರನ್ನು ನಾವು ಸದ್ಯ ಹೊಂದಿದ್ದೇವೆ ಎಂದು ಫೇಸ್‌ಬುಕ್‌ನ ಸುದ್ದಿ ಪಾಲು ದಾರಿಕೆ ವಿಭಾಗದ ಮನೀಶ್‌ ಖಂಡೂರಿ ಅವರು ಹೇಳಿದ್ದಾರೆ.

ಟ್ವಿಟರ್‌ ಸಿಇಒ ಡೋರ್ಸಿ ವಿರುದ್ಧ ಸಮಿತಿ ಗರಂ
ಟ್ವಿಟರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯಾಕ್‌ ಡೋರ್ಸಿ ಅವರಿಗೆ ಸಂಸದೀಯ ಸಮಿತಿ ಮತ್ತೂಂದು ಸಮನ್ಸ್‌ ಜಾರಿಗೊಳಿಸಿದ್ದು, ಫೆ.25ರಂದು ತನ್ನ ಮುಂದೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದೆ. ಸಾಮಾಜಿಕ ಜಾಲತಾಣಗಳ ಬಳಕೆದಾರರು ಹಂಚಿಕೊಳ್ಳುವ ಮಾಹಿತಿ, ದತ್ತಾಂಶಗಳ ಭದ್ರತೆ ಕುರಿತಂತೆ ಸಂಬಂಧಪಟ್ಟ ಜಾಲತಾಣ ಸಂಸ್ಥೆಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಲು, ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ನೇತೃತ್ವದ ಸಂಸದೀಯ ಸಮಿತಿ, ಜ್ಯಾಕ್‌ ಅವರಿಗೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಿತ್ತು. ಆದರೆ, ವಿಚಾರಣೆಗೆ ಅವರು ಗೈರಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಮಿತಿ, ಫೆ. 25ರ ವಿಚಾರಣೆಗೆ ಹಾಜರಾಗಲೇಬೇಕೆಂದು ತಾಕೀತು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next