ಇತ್ತೀಚೆಗೆ ವೆರೈಟಿ ಡಿಸೈನ್ಸ್ ಡಿಫರೆಂಟ್ ಕಲರ್ ಮತ್ತು ತರಹೇವಾರಿ ಮೆಟಿರಿಯಲ್ಸ್ ಗಳ ಸೀರೆಗಳು ಮತ್ತು ಸಲ್ವಾರ್‌ಗಳು ಮಾರುಕಟ್ಟೆಗೆ ಬಂದಿವೆ. ಈ ನಾನಾ ವಿಧದ ಮೆಟಿರೀಯಲ್‌ಗಳಲ್ಲಿ ನೆಟ್ಟೆಡ್ ಮೆಟಿರೀಯಲ್ ಆಯ್ಕೆ ಮಾಡಿಕೊಂಡ ಮೇಲೆ ಅದರ ನಿರ್ವಹಣೆಯೂ ಅಷ್ಟೇ ಮುಖ್ಯವಾಗುತ್ತದೆ. ನೆಟ್ಟೆಡ್‌ನಲ್ಲಿ ಸೀರೆ ಮತ್ತು ಸಲ್ವಾರ್‌ಗಳು ವೆರೈಟಿ ಡಿಸೈನ್‌ಗಳಲ್ಲಿ ಸಿಗುತ್ತವೆ. ಅದರಲ್ಲೂ ಸೀರೆಗಿಂತ ಜಾಸ್ತಿ ಸಲ್ವಾರ್‌ಗಳೇ ನೆಟ್ಟೆಡ್‌ನಲ್ಲಿ ಹೆಚ್ಚು. ಕೊಂಚ ದುಬಾರಿಯೂ ಹೌದು. ನೆಟ್ಟೆಡ್ ಮೆಟೀರಿಯಲ್‌ನ ಸಲ್ವಾರ್‌ಗಳು ಎಲ್ಲಾ ವಯಸ್ಸಿನವರಿಗೂ ಸೂಕ್ತವಲ್ಲದಿದ್ದರೂ ಯುವತಿಯರಿಗೆ ಸುಂದರವಾಗಿ ಕಾಣುವುದು. ಅವುಗಳ ಆಯ್ಕೆಯಲ್ಲಿ ಮತ್ತು ನಿರ್ವಹಣೆಯಲ್ಲಿ ಸ್ವಲ್ಪ ಗಮನವಹಿಸಿದರೆ ಅವುಗಳನ್ನು ಧರಿಸುವವರು ನಿರಾಳರಾಗುವುದರ ಜೊತೆಗೆ ಅವರ ಸೌಂದರ್ಯ ಇಮ್ಮಡಿಗೊಳ್ಳುವುದು.
.ಕೊಂಚ ದಪ್ಪವಿರುವವರು ನೆಟ್ಟೆಡ್ ಸೀರೆಗಳನ್ನು ಉಟ್ಟರೆ ಇನ್ನೂ ಸ್ವಲ್ಪದಪ್ಪವಾಗಿ ಕಾಣುವುದರಿಂದ ಇದರ ಆಯ್ಕೆಯಲ್ಲಿ ಸ್ವಲ್ಪ ಎಚ್ಚರ ವಹಿಸಿದರೆ ಉತ್ತಮ.
.ನೆಟ್ಟೆಡ್ ಸೀರೆಗಳನ್ನು ಮತ್ತು ಸಲ್ವಾರ್‌ಗಳನ್ನು ಉಟ್ಟು ಓಡಾಡುವಾಗ, ಕುಳಿತುಕೊಳ್ಳುವಾಗ ಎಲ್ಲಿಯಾದರೂ ಸಿಕ್ಕು ಹಾಳಾಗದಂತೆ ಜಾಗ್ರತೆ ವಹಿಸಬೇಕು.
.ನೆಟ್ಟೆಡ್ ಡ್ರೆಸ್‌ಗಳು ತುಂಬಾ ತೆಳುವಾಗಿರುವುದರಿಂದ ಉತ್ತಮ ಮ್ಯಾಚಿಂಗ್ ಲಂಗ, ಬ್ಲೌಸ್ ಆಯ್ಕೆ ಸೂಕ್ತ.
.ಹೆವಿ ಡಿಸೈನ್ಸ್ ಸೀರೆಗಳು ಯುವತಿಯರ ಸೌಂದರ್ಯ ಹೆಚ್ಚಿಸುವುದು. ಡಾರ್ಕ್ ಕಲರ್ ಸೀರೆಗಳಿಗೆ ಶೈನಿಂಗ್ ಇರುವ ಸ್ಯಾಟಿನ್ ಕ್ಲಾತ್‌ನ ಲಂಗಗಳು ದೊರೆಯುತ್ತವೆ. ಇವು ಸೀರೆಯ ಸೊಬಗನ್ನು ಹೆಚ್ಚಿಸುತ್ತವೆ.
.ನೆಟ್ಟೆಡ್ ಬಟ್ಟೆಯಲ್ಲಿ ಎಂಬ್ರಾಯಿಡರಿ ವರ್ಕ್ ಮಾಡಿರುವ ಸೀರೆಗಳನ್ನು ಒಗೆಯುವಾಗ ಬ್ರಶ್ ಬಳಸಬಾರದು.
.ನೆಟೆಡ್ ಸೀರೆಗಳು ಸ್ವಲ್ಪ ತೆಳುವಾಗಿರುವುದರಿಂದ ಉಡುವಾಗ ಹೆಚ್ಚಿನ ಗಮನ ನೀಡಿ ಸರಿಯಾದ ರೀತಿಯಲ್ಲಿ ಪಿನ್ ಮಾಡಬೇಕಾಗುತ್ತದೆ; ಇಲ್ಲವಾದರೆ ಸೀರೆ ಪಿನ್ ಮಾಡಿದ ಜಾಗದಲ್ಲಿ ಹಾಳಾಗುವ ಸಾಧ್ಯತೆ ಇರುತ್ತದೆ.
.ನೆಟ್ಟೆಡ್ ಡ್ರೆಸ್‌ಗಳನ್ನು ತುಂಬಾ ಫೋಲ್ಡ್ ಮಾಡಿಡಬೇಡಿ, ಬದಲಿಗೆ ಹ್ಯಾಂಗ್‌ಗೆ ಹಾಕಿ ನೇತುಹಾಕಿ.
.ನೆಟ್ಟೆಡ್ ಡ್ರೆಸ್‌ಗಳ ಮೇಲೆ ಡಿಸೈನ್‌ನ ಸಲ್ವಾರ್, ಸೀರೆಗಳ ಮೇಲೆ ಬುಟ್ಟಾ , ಫ್ಲವರ್ ಡಿಸೈನ್‌ಗಾಗಿ ಬಳಸಿದ ದಾರದ ಬಣ್ಣ ಬಿಡುವ ಸಂಭವವಿರುತ್ತದೆ ಹಾಗೂ ದಾರ ಕತ್ತರಿಸಿಹೋಗುವ ಸಾಧ್ಯತೆ ಇರುತ್ತದೆ ಇದರ ಬಗ್ಗೆ ಗಮನವಿರಲಿ.
– ಸ್ಮಿತಾ