Advertisement
ತುಂಬಿದ ನೇತ್ರಾವತಿ ಡ್ಯಾಂಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ದಲ್ಲಿನ ಕಿಂಡಿ ಅಣೆಕಟ್ಟು ಭರ್ತಿ ಯಾಗಿದೆ. ನದಿ ನೀರನ್ನೇ ಆಶ್ರಯಿಸಿದ್ದ ಕೃಷಿಕರು ಹರ್ಷದಲ್ಲಿದ್ದಾರೆ. ನೇತ್ರಾವತಿ ಸ್ನಾನಘಟ್ಟದಲ್ಲಿ ಭಕ್ತರು ತೀರ್ಥಸ್ನಾನದಲ್ಲಿ ಪಾಲ್ಗೊಂಡರು.
ತಾ|ನಲ್ಲಿ ಪೂರ್ವ ಮುಂಗಾರು ಕೈಕೊಟ್ಟಿದ್ದರಿಂದ ಕೃಷಿ ಚಟುವಟಿಕೆ ಸೊರಗಿತ್ತು. ಇತ್ತ ಮಂಗಾರು ವಿಳಂಬ ವಾಗಿದ್ದರಿಂದ ಈಗಾಗಲೇ ಭತ್ತ ಕೃಷಿ ಆರಂಭಿಸಬೇಕಿದ್ದ ಕೃಷಿಕರಲ್ಲೂ ಆತಂಕ ತರಿಸಿತ್ತು. ಸದ್ಯ ಮಳೆ ಪ್ರಮಾಣ ಏರಿಕೆಯಾ ದ್ದರಿಂದ ಕೃಷಿ ಚಟುವಟಿಕೆಗೆ ಕಳೆಬಂದಿದೆ.
ಕೃಷಿ ಇಲಾಖೆ 50 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಇರಿಸಿತ್ತು. ಈಗಾಗಲೇ 108 ರೈತರು 30 ಕ್ವಿಂಟಾಲ್ ಭತ್ತ ಖರೀದಿಸಿದ್ದಾರೆ. ಸದ್ಯ 20 ಕ್ವಿಂಟಾಲ್ ದಸ್ತಾನಿದೆ ಎಂದು ತಾಂತ್ರಿಕ ಕೃಷಿ ಅಧಿಕಾರಿ ಹುಮೇರ ಜಬೀನ್ ತಿಳಿಸಿದ್ದಾರೆ. ಆತಂಕ ನಿವಾರಣೆ
ಧರ್ಮಸ್ಥಳ ಡ್ಯಾಂನಿಂದ ಗ್ರಾ.ಪಂ.ನ ವ್ಯಾಪ್ತಿಯ 200 ಮನೆಗಳಿಗೆ ನೀರಿನ ಸಂಪರ್ಕ ನೀಡಿಲಾಗಿದೆ. ಮಳೆಯಾಗದೆ ಸ್ವಲ್ಪಮಟ್ಟಿಗೆ ಆತಂಕ ಎದುರಾಗಿತ್ತು. ಡ್ಯಾಂನಲ್ಲಿ ನೀರು ಭರ್ತಿಯಾಗಿರುವುದರಿಂದ ಇದ್ದ ಆತಂಕ ನಿವಾರಣೆಯಾಗಿದೆ.
– ಉಮೇಶ್ ಕೆ. ಪಿಡಿಒ, ಧರ್ಮಸ್ಥಳ