Advertisement

ಬಂಟ್ವಾಳ: ಸದ್ಯಕ್ಕೆ ಬರ ಆತಂಕವಿಲ್ಲ

07:42 PM Dec 11, 2019 | mahesh |

ಬಂಟ್ವಾಳ: ನೇತ್ರಾವತಿ ನದಿ ತಟದಲ್ಲೇ ವಿಸ್ತರಿಸಿಕೊಂಡಿರುವ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಬೇಸಗೆಯಲ್ಲಿ ಹಿಂದೆಂದೂ ಕಾಣದ ರೀತಿಯ ಬರ ಪರಿಸ್ಥಿತಿ ಎದುರಾಗಿದ್ದು, ಸದ್ಯದ ಪರಿಸ್ಥಿತಿ ಯಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಈ ಬಾರಿ ನೀರಿನ ಬರ ಎದುರಾಗದು ಎಂಬ ಸ್ಥಿತಿ ಇದೆ.

Advertisement

ಪುರಸಭಾ ವ್ಯಾಪ್ತಿಯ ನಿವಾಸಿಗಳು ಕುಡಿಯುವ ನೀರಿಗಾಗಿ ಬಹುತೇಕ ನೇತ್ರಾವತಿ ನದಿಯನ್ನೇ ಆಶ್ರಯಿ ಸಿದ್ದು, ಜಕ್ರಿಬೆಟ್ಟಿನಲ್ಲಿರುವ ಪಂಪುಹೌಸ್‌ ಮೂಲಕ ನದಿಯಿಂದ ನೀರನೆತ್ತಿ ಶುದ್ಧೀಕರಿಸಿ ನಗರವಾಸಿಗಳಿಗೆ ಪೂರೈಕೆ ಮಾಡಲಾಗುತ್ತದೆ. ಆದರೆ ಕಳೆದ ಬೇಸಗೆಯಲ್ಲಿ ನದಿಯಲ್ಲಿ ನೀರಿನ ಒಳಹರಿವು ಇಲ್ಲದೆ ಮಾರ್ಚ್‌, ಎಪ್ರಿಲ್‌, ಮೇ ತಿಂಗಳಲ್ಲಿ ನೀರಿಗೆ ಹಾಹಾಕಾರದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪ್ರಸ್ತುತ ನದಿಯಲ್ಲಿ ಎಷ್ಟೇ ನೀರಿನ ಪ್ರಮಾಣ ಕಂಡುಬಂದರೂ ಒಳಹರಿವು ಇಲ್ಲದೇ ಇದ್ದರೆ ಒಂದೆರಡು ತಿಂಗಳಲ್ಲೇ ನೀರು ಪೂರ್ಣ ಬತ್ತಿ ಹೋಗುವ ಅಪಾಯ ಇರು
ತ್ತದೆ. ನದಿಯಲ್ಲಿ ಒಳಹರಿವು ಇದ್ದಾಗ ನದಿಯಲ್ಲಿಯೂ ನೀರಿನ ಪ್ರಮಾಣ ಕಂಡು ಬರುತ್ತದೆ. ಹೀಗಾಗಿ ಈ ಬಾರಿ ಕಳೆದ ವರ್ಷಕ್ಕೆ ಹೋಲಿಸಿದರೆ ಒಳಹರಿವು ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

9.65 ಎಂಎಲ್‌ಡಿ ಬಳಕೆ
ಪುರಸಭಾ ನಿವಾಸಿಗಳಿಗೆ ಪ್ರತಿದಿನ 9.65 ಎಂಎಲ್‌ಡಿನಷ್ಟು ಅಂದರೆ 9 ಲಕ್ಷ ಲೀ.ನಷ್ಟು ನೀರನ್ನು ನದಿ
ಯಿಂದ ಲಿಫ್ಟ್‌ ಮಾಡಲಾಗುತ್ತದೆ. ಇದರ ಜತೆಗೆ ಸುಮಾರು 40ರಷ್ಟು ಕೊಳವೆಬಾವಿಯ ಮೂಲಕ ನೀರನ್ನು ಪಡೆಯಲಾಗುತ್ತದೆ. ಒಟ್ಟು 7 ಸಾವಿರ ದಷ್ಟು ಮನೆ ಬಳಕೆ, ವಾಣಿಜ್ಯ ಉದ್ದೇಶದ ನೀರಿನ ಸಂಪರ್ಕಗಳಿವೆ.

ಕಳೆದ ಬರಕ್ಕೆ ಕಾರಣವೇನು?
ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಡ್ಯಾಂನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿರುವು ದರಿಂದ ಅದರ ಹಿನ್ನೀರು ಬಂಟ್ವಾಳ- ಜಕ್ರಿ ಬೆಟ್ಟುವರೆಗೂ ವ್ಯಾಪಿಸಿಕೊಂಡಿರುತ್ತದೆ. ಕಳೆದ ವರ್ಷದ ಡಿಸೆಂಬರ್‌ ವೇಳೆಯಲ್ಲೂ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿತ್ತು. ಆದರೆ ಸೆಪ್ಟಂಬರ್‌, ಅಕ್ಟೋಬರ್‌, ನವೆಂ ಬರ್‌ ತಿಂಗಳಿನಲ್ಲಿ ಮಳೆ ಬಾರದ ಹಿನ್ನೆಲೆ ಯಲ್ಲಿ ನದಿಯಲ್ಲಿ ನೀರಿನ ಒಳ ಹರಿವು ತೀರಾ ಕಡಿಮೆ ಇತ್ತು. ಜತೆಗೆ ಕಳೆದ ಮಾರ್ಚ್‌, ಎಪ್ರಿಲ್‌ನಲ್ಲಿ ಮಳೆ ಬಾರದೆ ಪುರಸಭೆಗೆ ನೀರಿನ ಬರ ಎದುರಾಗಿತ್ತು.

Advertisement

ಬರ ಸಾಧ್ಯತೆ ಕಡಿಮೆ
ಈ ಬಾರಿ ಸೆಪ್ಟೆಂಬರ್‌, ಅಕ್ಟೋಬರ್‌, ನವೆಂಬರ್‌ ತಿಂಗಳಿನಲ್ಲಿ ಉತ್ತಮ ಮಳೆಯಾಗಿರುವ ಕಾರಣ ನೀರಿನ ಒಳಹರಿವು ಉತ್ತಮವಾಗಿದ್ದು, ಹೀಗಾಗಿ ಮಾರ್ಚ್‌, ಎಪ್ರಿಲ್‌ನಲ್ಲಿ ಮಳೆ ಬಾರದಿದ್ದರೂ ಕಳೆದ ವರ್ಷದ ರೀತಿಯಲ್ಲಿ ಬರ ಉಂಟಾಗುವ ಸಾಧ್ಯತೆ ಕಡಿಮೆ ಇದೆ ಎಂದು ಪುರಸಭಾ ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.

 ಉತ್ತಮ ಮಳೆ
ಕಳೆದ ವರ್ಷ ಸಪ್ಟೆಂಬರ್‌, ಅಕ್ಟೋಬರ್‌, ನವೆಂಬರ್‌ ತಿಂಗಳಿ ನಲ್ಲಿ ಮಳೆಯಾಗದೆ ಇದ್ದು, ಜತೆಗೆ ಮಾರ್ಚ್‌, ಎಪ್ರಿಲ್‌ನಲ್ಲಿಯೂ ಮಳೆಯಾಗದೆ ಬರ ಉಂಟಾಗಿತ್ತು. ಆದರೆ ಈ ಬಾರಿ ನವೆಂಬರ್‌ ಅಂತ್ಯದವರೆಗೂ ಉತ್ತಮ ಮಳೆಯಾಗಿರುವ ಕಾರಣ ಬರ ಎದುರಾಗದು ಎಂಬುದು ನಮ್ಮ ಅಭಿಪ್ರಾಯ.
– ಡೊಮಿನಿಕ್‌ ಡಿ’ಮೆಲ್ಲೊ, ಎಂಜಿನಿಯರ್‌, ಪುರಸಭೆ

- ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next