Advertisement

ಉಪ್ಪಿನಂಗಡಿಯಲ್ಲಿ ಬತ್ತಿದ ನೇತ್ರಾವತಿ ನದಿ!

11:49 PM Apr 09, 2023 | Team Udayavani |

ಉಪ್ಪಿನಂಗಡಿ: ಬಿಸಿಲ ಝಳ ಮುಂದುವರಿಯುತ್ತಿದ್ದಂತೆಯೇ ಜಿಲ್ಲೆಯ ಜೀವ ನದಿಯಾಗಿರುವ ನೇತ್ರಾವತಿಯು ಉಪ್ಪಿನಂಗಡಿಯಲ್ಲಿ ತನ್ನ ಹರಿವನ್ನು ಕಡಿದುಕೊಂಡಿದ್ದು, ಇತ್ತೀಚೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ಎರಡನೇ ಬಾರಿ ಇಂಥ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿಗೆ ಸಮಸ್ಯೆ ಕಾಡುವ ಭೀತಿ ಮೂಡಿಸಿದೆ.

Advertisement

ಮೂರು ವರ್ಷಗಳ ಹಿಂದೆ ಇದೇ ರೀತಿ ನೀರಿನ ಹರಿವು ಕಡಿದುಕೊಂಡಿತ್ತು. ಸನಿಹದಲ್ಲೇ ಕುಮಾರಧಾರಾ ನದಿ ಸಂಗಮಿಸಿದ ಬಳಿಕ ನೇತ್ರಾವತಿ ಮತ್ತೆ ಹರಿಯುತ್ತಾಳಾದರೂ ಕುಮಾರಧಾರಾ ಸಂಗಮಿಸುವ ಮುನ್ನವೇ ನೇತ್ರಾವತಿ ನದಿಯ ನೀರು ಬತ್ತಿ ಹೋಗಿ ನದಿ ಬರಡಾಗಿದೆ.

ಸದ್ಗತಿ ಕಾರ್ಯಕ್ಕೆ ತೊಡಕು
ಬಹುತೇಕ ಶ್ರದ್ಧಾಳುಗಳು ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಬಂಧುಗಳ ಅಸ್ಥಿ ವಿಸರ್ಜನೆ ಮಾಡಿ ಪಿಂಡ ಪ್ರದಾನಾದಿ ಕಾರ್ಯಗಳನ್ನು ನೆರವೇರಿಸಿದ ಬಳಿಕ ನದಿಯಲ್ಲಿ ಪುಣ್ಯ ಸ್ನಾನ ಮಾಡುವುದು ವಾಡಿಕೆ. ನದಿ ಬತ್ತಿ ಹೋದ ಕಾರಣಕ್ಕೆ ಪುಣ್ಯ ತೀರ್ಥ ಸ್ನಾನಕ್ಕೆ ಅಡಚಣೆಯಾಗಿದೆ. ಕುಮಾರಧಾರಾ ಸಂಗಮಿಸಿದ ಬಳಿಕ ಸ್ನಾನ ಮಾಡುವ ಅವಕಾಶವಿದೆಯಾದರೂ ಸದ್ರಿ ಸ್ಥಳವು ಅಪಾಯಕಾರಿಯಾಗಿರುವುದರಿಂದ ಭಕ್ತರ ಅನುಕೂಲತೆಗಾಗಿ ಸಂಗಮ ಸ್ಥಳದಲ್ಲಿ ಮರಳು ತೆಗೆದು ಹೊಂಡ ಮಾಡಿ ಅಲ್ಲಿ ನೀರು ನಿಲ್ಲುವಂತೆ ತಾತ್ಕಾಲಿಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಪರಿಸರದ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಮಳೆಯಾಗಿದೆ ಯಾದರೂ ಬಳಿಕ ವ್ಯಕ್ತಗೊಂಡ ವಾತಾವರಣ ದಲ್ಲಿನ ಭಾರೀ ಉಷ್ಣತೆಯಿಂದಾಗಿ ಜಲ ಮೂಲಗಳೆಲ್ಲವೂ ಬತ್ತಿ ಹೋಗತೊಡಗಿದೆ.

Advertisement

Udayavani is now on Telegram. Click here to join our channel and stay updated with the latest news.

Next