Advertisement
2017ರಲ್ಲಿ ಶಿಲಾನ್ಯಾಸ ನಡೆದಿತ್ತುಹಳಿ ದ್ವಿಗುಣ ಕಾಮಗಾರಿಗೆ 2017ರ ಆ. 18ರಂದು ನಗರದಲ್ಲಿ ಶಿಲಾನ್ಯಾಸ ನಡೆದಿತ್ತು. ಅಂದಿನ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಹೊಸದಿಲ್ಲಿಯ ರೈಲ್ವೇ ಮಂಡಳಿ ಸಭಾಭವನದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಶಿಲಾನ್ಯಾಸ ನಡೆಸಿದ್ದರು. 28.05 ಕೋ.ರೂ.ವೆಚ್ಚದಲ್ಲಿ ಹಳಿದ್ವಿಗುಣ ಕಾಮಗಾರಿ ಕೈಗೆತ್ತಿ ಕೊಳ್ಳಲಾಗಿದೆ ಎಂದು ಅಂದು ತಿಳಿಸಲಾಗಿತ್ತು. ಆದರೆ ಅನಂತರ ಈ ಯೋಜನೆ ಅಂತಿಮ ರೂಪ ಪಡೆದಿರಲೇ ಇಲ್ಲ. ಪ್ರಸ್ತುತ ಇದರ ಅಂದಾಜು ಮೊತ್ತ ಕೂಡ ಸುಮಾರು 38 ಕೋ.ರೂ.ಗೂ ಮೀರಿದೆ.
ರೈಲು ಹಳಿ ದ್ವಿಗುಣಗೊಳ್ಳುವ ಕಾರಣದಿಂದ ಮಂಗಳೂರು ಸೆಂಟ್ರಲ್‌ನಲ್ಲಿ ಇನ್ನೊಂದು ಫ್ಲಾಟ್‌ಫಾರಂ ಕೂಡ ನಿರ್ಮಾಣಗೊಳ್ಳಲಿದೆ. ಹಾಗಾಗಿ ಈಗ ಸೆಂಟ್ರಲ್‌ನಲ್ಲಿರುವ “ಫಿಟ್ ಲೈನ್'(ಬೋಗಿಗಳ ತಾಂತ್ರಿಕ ಕಾಮಗಾರಿ ನಡೆಸುವ ಹಳಿ)ಅನ್ನು ಸ್ಥಳಾಂತರಿಸಬೇಕಾಗಿದೆ. ಸದ್ಯ ಫಿಟ್‌ಲೈನ್ ಅನ್ನು ಈಗಿರುವ ಜಾಗ ದಿಂದ ಸ್ವಲ್ಪ ದೂರಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ನೇತ್ರಾವತಿ ಸೇತುವೆಯಿಂದ ಸೆಂಟ್ರಲ್‌ವರೆಗಿನ ಹಳಿ ದ್ವಿಗುಣದ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆಗೆ ಸೇರಿದ ಭೂಮಿಯೇ ಅಧಿಕ ವಿದ್ದು, ಕೊಂಚ ಖಾಸಗಿ ಭೂಮಿ ಇದೆ. ಹೀಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ರೈಲು ಕಾಯುವ ಪ್ರಮೇಯವಿರಲ್ಲ!ಮಂಗಳೂರು ಸೆಂಟ್ರಲ್‌ನಿಂದ ನೇತ್ರಾವತಿ ಸೇತುವೆವರೆಗೆ ಸದ್ಯ ಒಂದೇ ರೈಲು ಹಳಿ ಇದೆ. ಹೀಗಾಗಿ ಸೆಂಟ್ರಲ್‌ನಿಂದ ಒಂದು ರೈಲು ಹೊರಟ ಅನಂತರ ಅದು ನೇತ್ರಾವತಿ ಸೇತುವೆ ದಾಟುವವರೆಗೆ, ಕೇರಳ ಭಾಗದಿಂದ ಇನ್ನೊಂದು ರೈಲು ಬರಲು ಅವಕಾಶವಿಲ್ಲ. ಅದಕ್ಕಾಗಿ ಕೇರಳ ಭಾಗದಿಂದ ಬರುವ ರೈಲು ಸುಮಾರು 10-15 ನಿಮಿಷ ನೇತ್ರಾವತಿ ಸೇತುವೆ ಬಳಿ ನಿಲ್ಲಬೇಕಾಗುತ್ತದೆ. ಹಳಿ ದ್ವಿಗುಣಗೊಂಡರೆ ಇಂತಹ ಸಮಸ್ಯೆ ಇರುವುದಿಲ್ಲ. ಅದರ ಜತೆಗೆ ಹೊಸ ರೈಲು ಓಡಾಟಕ್ಕೂ ಅವಕಾಶ ಸಿಗಲಿದೆ ಎಂಬುದು ರೈಲ್ವೇ ಮೂಲಗಳ ಮಾಹಿತಿ. ಕಾಮಗಾರಿ ಆರಂಭ
ಮಂಗಳೂರು ಸೆಂಟ್ರಲ್‌ನಿಂದ ನೇತ್ರಾವತಿ ಸೇತುವೆವರೆಗಿನ ರೈಲು ಹಳಿ ದ್ವಿಗುಣ ಕಾಮಗಾರಿ ಇತ್ತೀಚೆಗೆ ಆರಂಭವಾಗಿದೆ. ಇದು ಪೂರ್ಣಗೊಂಡ ಬಳಿಕ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಇನ್ನಷ್ಟು ರೈಲು ಸೇವೆ ದೊರೆಯುವ ನಿರೀಕ್ಷೆಯಿದೆ.
- ಕಿಶನ್ ಕುಮಾರ್ ಎಂ.ಎಸ್., ಡೆಪ್ಯುಟಿ ಸ್ಟೇಷನ್ ಮ್ಯಾನೇಜರ್ (ವಾಣಿಜ್ಯ)
ಮಂಗಳೂರು ಸೆಂಟ್ರಲ್ - ದಿನೇಶ್ ಇರಾ