ಬೆಂಗಳೂರು: ಉದ್ಯಾನನಗರಿಯಲ್ಲಿ ಅತೀ ಹೆಚ್ಚು ಕಿರಿಕಿರಿ ಎನಿಸುವುದು ಟ್ರಾಫಿಕ್ ಸಮಸ್ಯೆ. ಇದು ಪ್ರತಿಯೊಬ್ಬರು ಎದುರಿಸುವ ಸಮಸ್ಯೆಯಾಗಿದೆ. ಒಂದು ವೇಳೆ ನೀವು ನಿಮ್ಮ ಕಾರು ಅಥವಾ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಸಿಗ್ನಲ್ ಬಳಿ ಹೆಲಿಕಾಪ್ಟರ್ ನಿಂತಿದ್ದರೆ ಹೇಗಾಗಬಹುದು? ಹೌದು ಅಂತಹ ಒಂದು ಘಟನೆ ಬೆಂಗಳೂರಿನ ಎಚ್ ಎಎಲ್ ಬಳಿ ನಡೆದಿದ್ದು, ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:Sanatana Dharma; ಯಾವ ಧರ್ಮವೂ ಬಿಕ್ಕಟ್ಟು ಮಾಡುವ ಸಂದೇಶ ನೀಡುವುದಿಲ್ಲ: ಯು.ಟಿ.ಖಾದರ್
ಸಾಮಾಜಿಕ ಜಾಲತಾಣ x ನಲ್ಲಿ ಶೇರ್ ಮಾಡಿರುವ ಬೆಂಗಳೂರು ಟ್ರಾಫಿಕ್ ನಲ್ಲಿ ಹೆಲಿಕಾಪ್ಟರ್ ನಿಂತಿರುವ ಫೋಟೋ ವೈರಲ್ ಆಗಿದೆ. ಎಚ್ ಎಎಲ್ ಬಳಿಯ ರಸ್ತೆಯಲ್ಲಿ ವಾಹನ ಸವಾರರು ತಮ್ಮ ಆಟೋ ಮತ್ತು ಬೈಕ್ ಗಳನ್ನು ನಿಲ್ಲಿಸಿ ಹೆಲಿಕಾಪ್ಟರ್ ಅನ್ನು ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯುತ್ತಿರುವುದು ಚಿತ್ರದಲ್ಲಿದೆ.
ರಸ್ತೆಯಲ್ಲಿ ಹೆಲಿಕಾಪ್ಟರ್ ಅನ್ನು ಕೊಂಡೊಯ್ಯುತ್ತಿದ್ದ ಪರಿಣಾಮ ವಾಹನ ಸವಾರರ ಮೇಲೆ ಪರಿಣಾಮ ಬೀರಿದ್ದು, ಟ್ರಾಫಿಕ್ ಜಾಮ್ ಆಗುವಂತಾಗಿತ್ತು. ಕೆಲವು ಅಧಿಕಾರಿಗಳು ಹೆಲಿಕಾಪ್ಟರ್ ಅನ್ನು ಮುಂದಕ್ಕೆ ಒಯ್ಯಲು ಪ್ರಯತ್ನಿಸುವ ಮೂಲಕ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲು ಯತ್ನಿಸಿರುವುದಾಗಿ ವರದಿ ತಿಳಿಸಿದೆ.
ಈ ಫೋಟೊವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬಳಕೆದಾರರು ಹಂಚಿಕೊಂಡು ತಮಾಷೆಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ವಾಹನ ದಟ್ಟಣೆ ನಿಗ್ರಹಕ್ಕೆ ಹೊಸ ಮಾರ್ಗ ಎಂಬ ಕ್ಯಾಪ್ಶನ್ ಅನ್ನು ಬಳಕೆದಾರರೊಬ್ಬರು ನೀಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಮನ್ ಸುರಾನ ಎಂಬವರು ರಸ್ತೆ ಮಧ್ಯೆ ಹೆಲಿಕಾಪ್ಟರ್ ಸಿಲುಕಿಕೊಂಡ ಚಿತ್ರವನ್ನು ಹಂಚಿಕೊಂಡಿದ್ದಾರೆ.