Advertisement

ODI World Cup; ಸ್ಕಾಟ್ಲೆಂಡ್‌ ಗೆ ಶಾಕ್ ನೀಡಿದ ನೆದರ್ಲೆಂಡ್ಸ್‌ ವಿಶ್ವಕಪ್ ಪ್ರವೇಶ

07:49 PM Jul 06, 2023 | Team Udayavani |

ಬಲವಾಯೋ: ಇಲ್ಲಿ ಗುರುವಾರ ನಡೆದ ವಿಶ್ವಕಪ್ ಪ್ರವೇಶ ನಿರ್ಣಾಯಕ ಸೂಪರ್‌-6 ಪಂದ್ಯದಲ್ಲಿ ನೆದರ್ಲೆಂಡ್ಸ್‌ ತಂಡ ಸ್ಕಾಟ್ಲೆಂಡ್‌ ತಂಡಕ್ಕೆ ಅಧಿಕಾರಯುತ ಸೋಲುಣಿಸಿ ವಿಶ್ವಕಪ್‌ ಪ್ರವೇಶಿಸಿದೆ.

Advertisement

ನೆದರ್ಲೆಂಡ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಸ್ಕಾಟ್ಲೆಂಡ್‌ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 277 ರನ್ ಕಲೆ ಹಾಕಿತು. ಭರ್ಜರಿ ಆಟವಾಡಿದ ಬ್ರಾಂಡನ್ ಮೆಕ್‌ಮುಲ್ಲೆನ್ 106 ರನ್ ಗಳಿಸಿ ಔಟಾದರು. ಅವರಿಗೆ ಸಾಥ್ ನೀಡಿದ ನಾಯಕ ಬೆರಿಂಗ್ಟನ್ 64 ರನ್ ಗಳಿಸಿ ಔಟಾದರು. ನೆದರ್ಲೆಂಡ್ಸ್ ಪರ ಬಿಗಿ ದಾಳಿ ನಡೆಸಿದ ಬಾಸ್ ಡಿ ಲೀಡೆ 5 ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ 42.5 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 278 ರನ್ ಗಳನ್ನು ಗಳಿಸಿ 4 ವಿಕೆಟ್ ಗಳ ಜಯ ಗಳಿಸಿ ವಿಶ್ವಕಪ್ ನಲ್ಲಿ ಆಡುವ ಅರ್ಹತೆ ಸಂಪಾದಿಸಿತು.ಗೆಲುವಿನಲ್ಲಿ ಹೀರೋ ಆದ ಬಾಸ್ ಡಿ ಲೀಡೆ ಅಮೋಘ ಶತಕ ಸಿಡಿಸಿದರು.123 ರನ್ ಗಳಿಸಿದ್ದ ವೇಳೆ ರನ್ ಔಟ್ ಆದರು 92 ಎಸೆತಗಳಲ್ಲಿ7 ಬೌಂಡರಿ ಮತ್ತು 5 ಆಕರ್ಷಕ ಸಿಕ್ಸರ್ ಸಿಡಿಸಿದರು. ವಿಕ್ರಮಜಿತ್ ಸಿಂಗ್ 40, ಸ್ಕಾಟ್ ಎಡ್ವರ್ಡ್ಸ್ 25, ಸಾಕಿಬ್ ಜುಲ್ಫಿಕರ್ ಔಟಾಗದೆ 33 ಗೆಲುವಿನಲ್ಲಿ ತಮ್ಮದೇ ಆದ ಕೊಡುಗೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next