Advertisement

World Cup; ತಂಡ ಪ್ರಕಟಿಸಿದ ನೆದರ್ಲ್ಯಾಂಡ್; ಮಾಜಿ ಆರ್ ಸಿಬಿ ಆಟಗಾರನಿಗೆ ಸಿಕ್ತು ಚಾನ್ಸ್

06:06 PM Sep 07, 2023 | Team Udayavani |

ಆ್ಯಮ್ಸ್ಟರ್ ಡ್ಯಾಂ: ಅಕ್ಟೋಬರ್ 5ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಗೆ ನೆದರ್ಲ್ಯಾಂಡ್ ತಂಡವು ತನ್ನ ಪ್ರಾಥಮಿಕ 15 ಮಂದಿ ಸದಸ್ಯರ ತಂಡ ಪ್ರಕಟಿಸಿದೆ. ವಿಶ್ವಕಪ್ ಅರ್ಹತಾ ಕೂಟದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ನೆದರ್ಲ್ಯಾಂಡ್ಸ್ ಮೆಗಾ ಈವೆಂಟ್ ನಲ್ಲಿ ಆಡಲು ಅವಕಾಶ ಪಡೆದಿದೆ.

Advertisement

ಅನುಭವಿ ಜೋಡಿಯಾದ ರೋಲೋಫ್ ವ್ಯಾನ್ ಡೆರ್ ಮೆರ್ವೆ ಮತ್ತು ಕಾಲಿನ್ ಅಕರ್‌ಮನ್ ಅವರು ಮರಳಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಕ್ವಾಲಿಫೈಯರ್ ಪಂದ್ಯಾವಳಿಯಲ್ಲಿ ರನ್ನರ್-ಅಪ್ ಆದ ನೆದರ್ಲ್ಯಾಂಡ್ ತಂಡದಲ್ಲಿ ಈ ಇಬ್ಬರು ಆಟಗಾರರು ಇರಲಿಲ್ಲ. ಆದರೆ ಇದೀಗ ಮುಖ್ಯ ಕೂಟಕ್ಕೆ ಕರೆಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾಜಿ ಆಲ್‌ರೌಂಡರ್ ವ್ಯಾನ್ ಡೆರ್ ಮೆರ್ವೆ ಮತ್ತು ಅಕರ್‌ಮನ್ ಇಬ್ಬರೂ ನೆದರ್‌ಲ್ಯಾಂಡ್ ತಂಡಕ್ಕೆ ಅನುಭವದ ಆಧಾರ ನೀಡಲಿದ್ದಾರೆ. ನೆದರ್ಲ್ಯಾಂಡ್ ತಂಡವನ್ನು ಸ್ಕಾಟ್ ಎಡ್ವರ್ಡ್ಸ್ ಮುನ್ನಡೆಸಲಿದ್ದಾರೆ.

ನೆದರ್ಲ್ಯಾಂಡ್ ತಂಡವು ವಿಶ್ವಕಪ್‌ಗೆ ಮೊದಲು ಎರಡು ಅಭ್ಯಾಸ ಪಂದ್ಯಗಳನ್ನು ಆಡುತ್ತದೆ. ಸೆಪ್ಟೆಂಬರ್ 30 ರಂದು ಆಸ್ಟ್ರೇಲಿಯಾ ವಿರುದ್ಧ ಮತ್ತು ಅಕ್ಟೋಬರ್ 3 ರಂದು ಭಾರತದ ವಿರುದ್ಧ ಅಭ್ಯಾಸ ಪಂದ್ಯವಾಡಲಿದೆ. ವಿಶ್ವಕಪ್‌ ನಲ್ಲಿ ಅವರ ಮೊದಲ ಸ್ಪರ್ಧೆಯು ಅಕ್ಟೋಬರ್ 6 ರಂದು ಹೈದರಾಬಾದ್‌ ನಲ್ಲಿ ಪಾಕಿಸ್ತಾನದ ವಿರುದ್ಧ ನಡೆಯಲಿದೆ.

Advertisement

ನೆದರ್ಲ್ಯಾಂಡ್ ತಂಡ: ಸ್ಕಾಟ್ ಎಡ್ವರ್ಡ್ಸ್ (ನಾ), ಮ್ಯಾಕ್ಸ್ ಒ’ಡೌಡ್, ಬಾಸ್ ಡಿ ಲೀಡೆ, ವಿಕ್ರಮ್ ಸಿಂಗ್, ತೇಜ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಅಕರ್ಮನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರಿಯಾನ್ ಕ್ಲೈನ್, ವೆಸ್ಲಿ ಬ್ಯಾರೆಸಿ, ಸಕೀಬ್ ಬ್ಯಾರೆಸಿ ಜುಲ್ಫಿಕರ್, ಶರೀಜ್ ಅಹ್ಮದ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್.

Advertisement

Udayavani is now on Telegram. Click here to join our channel and stay updated with the latest news.

Next