Advertisement

100 ದಿನದೊಳಗೆ 2,00,000 ಚಂದಾದಾರರನ್ನು ಕಳೆದುಕೊಂಡ ನೆಟ್ ಫ್ಲಿಕ್ಸ್…ಕಾರಣವೇನು?

12:58 PM Apr 20, 2022 | |

ಸ್ಯಾನ್ ಫ್ರಾನ್ಸಿಸ್ಕೋ: ಕಳೆದ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ನೆಟ್ ಫ್ಲಿಕ್ಸ್ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸುಮಾರು 100 ದಿನದೊಳಗೆ ಬರೋಬ್ಬರಿ 2,00,000 ಚಂದದಾರರನ್ನು (ಸಬ್ಸ್ ಕ್ರೈಬರ್ಸ್) ಕಳೆದುಕೊಂಡಿರುವುದಾಗಿ ಹೇಳಿದೆ.

Advertisement

ಇದನ್ನೂ ಓದಿ:ಕೋಮು ಸಂಘರ್ಷ: ಮಂಗಳೂರಿನಲ್ಲಿ’ಮಾರಿ ಗುಡಿ’ ನಕಲಿ ಖಾತೆ: ಓರ್ವನ ಬಂಧನ

ಪ್ರಮುಖ ಸ್ಟ್ರೀಮಿಂಗ್ ಟೆಲಿವಿಷನ್ ಸೇವೆಯ ನೆಟ್ ಫ್ಲಿಕ್ಸ್ ಸಂಸ್ಥೆ ಹತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಭಾರೀ ಸಂಖ್ಯೆಯಲ್ಲಿ ಸಬ್ಸ್ ಕ್ರೈಬರ್ ಅನ್ನು ಕಳೆದುಕೊಂಡಿದೆ. ರಷ್ಯಾ ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿ ಸೇವೆಯನ್ನು ಸ್ಥಗಿತಗೊಳಿಸಿರುವ ಪರಿಣಾಮ ಮೊದಲ ತ್ರೈಮಾಸಿಕದಲ್ಲಿ ಚಂದಾದಾರರ ಸಂಖ್ಯೆಯಲ್ಲಿ ಇಳಿಕೆಯಾಗಲು ಕಾರಣವಾಗಿದೆ ಎಂದು ನೆಟ್ ಫ್ಲಿಕ್ಸ್ ಆರೋಪಿಸಿದೆ.

ನೆಟ್ ಫ್ಲಿಕ್ಸ್ ಮೊದಲ ತ್ರೈಮಾಸಿಕದಲ್ಲಿ 221.6 ಮಿಲಿಯನ್ ಚಂದಾದಾರರನ್ನು ಹೊಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ 2 ಲಕ್ಷ ಸಬ್ಸ್ ಕ್ರೈಬರ್ ಸಂಖ್ಯೆ ಇಳಿಕೆಯಾಗಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು 1.6 ಬಿಲಿಯನ್ ಡಾಲರ್ ಆದಾಯ ಗಳಿಸಿದೆ. ಆದರೆ ಕಳೆದ ವರ್ಷ ಕಂಪನಿ 1.7 ಬಿಲಿಯನ್ ಡಾಲರ್ ಆದಾಯ ಗಳಿಸಿರುವುದಾಗಿ ತಿಳಿಸಿದೆ.

ನೆಟ್ ಫ್ಲಿಕ್ಸ್ ತನ್ನ ಮೊದಲ ತ್ರೈಮಾಸಿಕದ ವರದಿಯನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ಕಂಪನಿಯ ಷೇರುಗಳ ಮೌಲ್ಯ ಶೇ.25ರಷ್ಟು ಕುಸಿತ ಕಂಡಿದೆ. ನಮ್ಮ ಎಣಿಕೆಯ ಪ್ರಕಾರದಷ್ಟು ಆದಾಯ ಗಳಿಕೆಯಲ್ಲಿ ಏರಿಕೆ ಕಂಡಿಲ್ಲ ಎಂದು ನೆಟ್ ಫ್ಲಿಕ್ಸ್ ಹೇಳಿದೆ.

Advertisement

2020ರಲ್ಲಿ ಕೋವಿಡ್ ಸೋಂಕು ಪತ್ತೆಯಾದ ಸಂದರ್ಭದಲ್ಲಿ ನಮ್ಮ ಆದಾಯ ಮತ್ತು ಚಂದಾದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು. ಆದರೆ 2021ರಲ್ಲಿ ನಮ್ಮ ಆದಾಯ ನಿರೀಕ್ಷಿತ ಮಟ್ಟ ಇಳಿಕೆಯಾಗಲು ಆರಂಭವಾಗಿತ್ತು ಎಂದು ಕಂಪನಿ ತಿಳಿಸಿದೆ.

ಅಂದಾಜಿನ ಪ್ರಕಾರ ಸುಮಾರು 222 ಮಿಲಿಯನ್ ಕುಟುಂಬಗಳು ನೆಟ್ ಫ್ಲಿಕ್ಸ್ ಸೇವೆಗೆ ಶುಲ್ಕ ಪಾವತಿಸುತ್ತಿದ್ದು, ಇದರಲ್ಲಿ 100 ಮಿಲಿಯನ್ ಕ್ಕಿಂತಲೂ ಅಧಿಕ ಮಂದಿ ಕುಟುಂಬ ಸದಸ್ಯರಿಗೆ ನೆಟ್ ಫ್ಲಿಕ್ಸ್ ಖಾತೆಯ ಪಾಸ್ ವರ್ಡ್ ಹಂಚಿಕೊಂಡಿದ್ದು, ಇವರು ಯಾವುದೇ ಶುಲ್ಕ ಪಾವತಿಸುತ್ತಿಲ್ಲ. ಇದರಿಂದಾಗಿ ನಮ್ಮ ಚಂದಾದಾರರ ಸಂಖ್ಯೆ ಹೆಚ್ಚಳ ಮಾಡಲು ಸಮಸ್ಯೆಯಾಗುತ್ತಿದೆ ಎಂದು ನೆಟ್ ಫ್ಲಿಕ್ಸ್ ಹೇಳಿದೆ.

ಅಷ್ಟೇ ಅಲ್ಲ ಅಮೆಜಾನ್ ಫ್ರೈಮ್, ಸೋನಿ, ವೂಟ್, ಎಚ್ ಬಿಒ ಮ್ಯಾಕ್ಸ್, ಡಿಸ್ನಿ+ ನಂತಹ ಕಂಪನಿಗಳು ತೀವ್ರ ಸ್ಪರ್ಧೆ ನೀಡುತ್ತಿರುವುದು ನೆಟ್ ಫ್ಲಿಕ್ಸ್ ಚಂದಾದಾರರು ಕುಸಿತವಾಗಲು ಮತ್ತೊಂದು ಕಾರಣವಾಗಿದೆ ಎಂದು ವರದಿ ತಿಳಿಸಿದೆ. ಇದೀಗ ನಮ್ಮ ಚಂದಾದಾರರು ಮತ್ತು ಆದಾಯ ಹೆಚ್ಚಳಕ್ಕೆ ಎಲ್ಲಾ ರೀತಿಯಿಂದಲೂ ಪ್ರಯತ್ನಿಸಲಾಗುತ್ತಿದೆ ಎಂದು ನೆಟ್ ಫ್ಲಿಕ್ಸ್ ವಿವರಿಸಿದೆ.

ಚಂದಾದಾರರ ಆರೋಪವೇನು?

ನಾವು ಎಷ್ಟು ದಿನ ನೀವು ಕೊಟ್ಟ ಕಂಟೆಂಟ್ ಅನ್ನೇ ವೀಕ್ಷಿಸುವುದು. ಅಮೆಜಾನ್ ಫ್ರೈಮ್, ಸೋನಿ, ಡಿಸ್ನಿ+ನಲ್ಲಿ ನಮಗೆ ಬೇಕಾದ ವೆಬ್ ಸೀರೀಸ್, ಸಿನಿಮಾಗಳು ಲಭ್ಯವಾಗುತ್ತದೆ. ಅಷ್ಟೇ ಅಲ್ಲ ಖಾತೆ ಪಾಸ್ ವರ್ಡ್ ಹಂಚಿಕೆಗೆ ಹೆಚ್ಚುವರಿ ಶುಲ್ಕ ನಮಗೆ ಹೊರೆಯಾಗುತ್ತಿದೆ ಎಂಬುದು ಚಂದಾದಾರರ ಆರೋಪವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next