Advertisement

ಪ್ರೇಮಸೌಧದಲ್ಲಿ ನೆತನ್ಯಾಹು ದಂಪತಿ

06:00 AM Jan 17, 2018 | Team Udayavani |

ನವದೆಹಲಿ: ಆರು ದಿನಗಳ ಭಾರತ ಭೇಟಿಯಲ್ಲಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮಂಗಳವಾರ ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಿದರು. ಇವರೊಂದಿಗೆ ಇವರ ಪತ್ನಿ ಸಾರಾ ಕೂಡ ಇದ್ದರು. ನೆತನ್ಯಾಹು ದಂಪತಿಯನ್ನು ಉ.ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಖೇರಿಯಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ, ಬ್ರಜ್‌ ನೃತ್ಯದಿಂದ ಅವರನ್ನು ಸ್ವಾಗತಿಸಲಾಯಿತು.

Advertisement

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನೆತನ್ಯಾಹು ಬುಧವಾರ ಗುಜರಾತ್‌ಗೆ ತೆರಳಲಿದ್ದು, ಅಹಮದಾಬಾದ್‌ನಲ್ಲಿ ಭರ್ಜರಿ ತಯಾರಿ ನಡೆಸಲಾಗಿದೆ. ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮದವರೆಗೆ ಎಂಟು ಕಿ.ಮೀ ವರೆಗೆ ಇಬ್ಬರೂ ನಾಯಕರು ರೋಡ್‌ಶೋ ನಡೆಸಲಿದ್ದಾರೆ. ಈ ರಸ್ತೆಗುಂಟ 50 ವೇದಿಕೆಗಳನ್ನು ನಿರ್ಮಿಸಲಾಗಿದ್ದು, ದೇಶದ ವಿವಿಧ ರಾಜ್ಯದ ಜನರು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನೆತನ್ಯಾಹುರನ್ನು ಆಹ್ವಾನಿಸಲಿದ್ದಾರೆ. ಭಾರತದ ಯಹೂದಿ ಸಮುದಾಯದ ಜನರೂ ಇರಲಿದ್ದಾರೆ. ಎರಡು ಪರಿಣಿತಿ ಕೇಂದ್ರಕ್ಕೆ ಭೇಟಿ ನೀಡಿ ಒಂದು ಪರಿಣಿತಿ ಕೇಂದ್ರವನ್ನು ಅನಾವರಣಗೊಳಿಸಲಿದ್ದಾರೆ. ಅಲ್ಲದೆ ಸಬರಮತಿ ಆಶ್ರಮಕ್ಕೂ ಅವರು ಭೇಟಿ ನೀಡಲಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಜಪಾನ್‌ ಪ್ರಧಾನಿ ಶಿಂಜೋ ಅಬೆಗೆ ಇದೇ ರೀತಿಯ ಸ್ವಾಗತ ಕೋರಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next