Advertisement

ದೇಶದ ಯುವಶಕ್ತಿಗೆ ನೇತಾಜಿ ಸ್ಫೂರ್ತಿ: ಪೂಜಾರಿ

05:43 PM Feb 10, 2022 | Shwetha M |

ವಿಜಯಪುರ: ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಬ್ರಿಟಿಷರ ವಶದಲ್ಲಿ ಭಾರತದ ಕೆಲ ಭೂ ಪ್ರದೇಶ ವಶಪಡಿಸಿಕೊಂಡು ಭಾರತದ ಮೊದಲ ಪ್ರಧಾನಿಯಾಗಿದ್ದ ಸುಭಾಷ್‌ ಚಂದ್ರ ಬೋಸ್‌ ಅವರು ದೇಶದ ಇಂದಿನ ಯುವಶಕ್ತಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಸಂಗಮೇಶ ಪೂಜಾರಿ ಹೇಳಿದರು.

Advertisement

ಬುಧವಾರ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗ ಮತ್ತು ಭಾರತಿಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸುಭಾಷ್‌ ಚಂದ್ರ ಬೋಸ್‌ ಅವರ 125ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ನೇತಾಜಿ ಕಂಡ ಕನಸಿನ ಭಾರತದ ಕುರಿತು ಅವರು ಉಪನ್ಯಾಸ ನೀಡಿದರು.

ತಮ್ಮಲ್ಲಿದ್ದ ಅಪ್ರತಿಮ ನಾಯಕತ್ವ ಗುಣ ಹಾಗೂ ದೇಶದ ಜನರಲ್ಲಿ ಚೈತನ್ಯ ತುಂಬುವ ಶಕ್ತಿ ಹೊಂದಿದ್ದ ಕಾರಣಕ್ಕೆ ನೇತಾಜಿ ಎಂಬ ಅಭಿದಾನ ಪಡೆದಿದ್ದರು ಎಂದು ಬಣ್ಣಿಸಿದ ಅವರು, ನೇತಾಜಿ ಭಾರತ ಕಂಡ ಅಪ್ರತಿಮ ಸ್ವಾತಂತ್ರ್ಯ ಸೇನಾನಿ. ಅವರ ಕ್ರಾಂತಿಕಾರಿ ನಿಲುವುಗಳು, ಕೆಚ್ಚೆದೆಯ ಹೋರಾಟಗಳು ಇಂದಿನ ಯುವ ಪೀಳಿಗೆಗೆ ಮಾದರಿ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಎಂ.ಎನ್‌. ಚೋಗರಸ್ತಿ ಮಾತನಾಡಿ, ದೇಶದ ಅಪ್ರತಿಮ ನಾಯಕ ಸುಭಾಷ್‌ ಚಂದ್ರ ಬೋಸ್‌ ಅವರು ಮಾಹಾನ್‌ ದೇಶಭಕ್ತರಾಗಿದ್ದರು. ದೇಶದ ಏಕತೆಗಾಗಿ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲೇ ಭಾರತೀಯರಿಗೆ ಜೈ ಹಿಂದ್‌ ಘೋಷಣೆ ನೀಡಿ ದೇಶಪ್ರೇಮದ ಕೆಚ್ಚು ಮೂಡಿಸಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಬಿ.ಕೆ. ತುಳಸಿಮಾಲ ಮಾತನಾಡಿ, ವಿಚಾರಗಳು ವ್ಯಕ್ತಿತ್ವವನ್ನು ನಿರ್ಮಿಸುತ್ತವೆ. ಎಲ್ಲ ಪ್ರಕಾರದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಸುಭಾಷ್‌ ಚಂದ್ರ ಬೋಸ್‌ ಅವರ ವಿಚಾರಗಳನ್ನು ಎಲ್ಲ ವಿದ್ಯಾರ್ಥಿಗಳು ಅರ್ಥೈಸಿಕೊಂಡು ಜೀವನದಲ್ಲಿ ಮುನ್ನಡೆ ಸಾಧಿ ಸಬೇಕು ಎಂದರು.

Advertisement

ಸಂಗಮೇಶ ಮೇತ್ರಿ ಮಾತನಾಡಿದರು. ಸಮಾಜ ವಿಜ್ಞಾನ ನಿಕಾಯದ ಡೀನ್‌ ಡಿ.ಎಂ. ಮದರಿ, ನಾಮದೇವ ಗೌಡ, ರಾಜು ಬಾಗಲಕೋಟ, ಆನಂದ ಕುಲಕರ್ಣಿ, ಹನುಮಂತಯ್ಯ ಪೂಜಾರಿ, ಗುಲಾಬ ರಾಠೊಡ ಸೇರಿದಂತೆ ಇತರರು ಇದ್ದರು.

ರಾಜಕುಮಾರ ಮಾಲಿಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ಸಂಯೋಜಕರಾದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಮೇಶ ಸೋನಕಾಂಬಳೆ ಸ್ವಾಗತಿಸಿದರು. ಸತೀಶ ಪಾಟೀಲ ಪರಿಚಯಿಸಿದರು. ಅಶ್ವಿ‌ನಿ ನಿರೂಪಿಸಿದರು. ಯಲ್ಲಪ್ಪ ಕೊಂಬಿನೂರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next