Advertisement

ನೇತಾಜಿ ಮ್ಯೂಸಿಯಂ ಲೋಕಾರ್ಪಣೆ

12:30 AM Jan 24, 2019 | |

ಹೊಸದಿಲ್ಲಿ: ಸ್ವತಂತ್ರ ಹೋರಾಟಗಾರ ಸುಭಾಸ್‌ ಚಂದ್ರ ಬೋಸ್‌ ಅವರ 122ನೇ ಜನ್ಮದಿನೋತ್ಸವ (ಜ. 23) ಹಿನ್ನೆಲೆಯಲ್ಲಿ ದೆಹಲಿಯ ಕೆಂಪುಕೋಟೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸುಭಾಸ್‌ ಚಂದ್ರ ಬೋಸ್‌ ಮ್ಯೂಸಿಯಂ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಲೋಕಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ, ಕೆಂಪುಕೋಟೆಯ ಆವರಣದ ಇತರ ಭಾಗದಲ್ಲಿ ನಿರ್ಮಿಸಲಾಗಿರುವ ಜಲಿಯನ್‌ ವಾಲಾ ಬಾಘ… ಹತ್ಯಾಕಾಂಡ ಸ್ಮರಣಾರ್ಥ ನಿರ್ಮಿಸಲಾಗಿರುವ “ಯಾದ್‌-ಎ-ಜಲಿಯನ್‌’ ಮ್ಯೂಸಿಯಂ ಹಾಗೂ ಮೊದಲ ಮಹಾ ಯುದ್ಧದ ಸ್ಮರಣಾರ್ಥ ನಿರ್ಮಿಸಲಾ ಗಿರುವ “ಯೋಧರ ಸ್ಮಾರಕ ವಸ್ತು ಸಂಗ್ರಹಾಲಯ’ ಮತ್ತು ಭಾರತೀಯ ಚಿತ್ರಕಲೆಯ ಇತಿಹಾಸ ದಾಖಲಿಸುವ “ದೃಶ್ಯಕಲಾ ವಸ್ತು ಸಂಗ್ರಹಾಲಯ’ವನ್ನು ಪ್ರಧಾನಿ ಉದ್ಘಾಟಿಸಿದರು. 

Advertisement

ಬೋಸ್‌ ಮ್ಯೂಸಿಯಂ: ಸುಭಾಸ್‌ ಚಂದ್ರ ಬೋಸ್‌ ಮ್ಯೂಸಿಯಂನಲ್ಲಿ ಬೋಸ್‌ ಉಪಯೋಗಿಸಿದ ಕತ್ತಿ, ಕುರ್ಚಿ, ಪದಕಗಳು, ಬ್ಯಾಡುjಗಳು, ಸಮವಸ್ತ್ರಗಳನ್ನು ಇಡಲಾಗಿದೆ. ಹಾಗೆಯೇ ಅವರು ಕಟ್ಟಿದ ಇಂಡಿಯನ್‌ ನ್ಯಾಷನಲ್‌ ಆರ್ಮಿಯಲ್ಲಿ (ಐಎನ್‌ಎ) ಉಪಯೋಗಿಸ ಲಾಗಿದ್ದ ಕೆಲವು ಸಾಮಗ್ರಿಗಳನ್ನೂ ಪ್ರದರ್ಶನಕ್ಕೆ ಇಡಲಾ ಗಿದೆ. ಇದರ ಜತೆಗೆ, ಬೋಸ್‌ ಬಗ್ಗೆ ಒಂದು ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಇದಕ್ಕೆ ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌ ಅವರು ಹಿನ್ನಲೆ ಧ್ವನಿ ನೀಡಿದ್ದಾರೆ. 

ಹತ್ಯಾಕಾಂಡದ ಕರಾಳ ನೆನಪು: “ಯಾದ್‌-ಎ- ಜಲಿಯನ್‌’ ಮ್ಯೂಸಿಯಂನಲ್ಲಿ 2019ರ ಏ. 13ರಂದು ನಡೆದಿದ್ದ ಜಲಿಯನ್‌ ವಾಲಾ ಹತ್ಯಾಕಾಂಡ ನೆನಪಿಸುವ ಅನೇಕ ಚಿತ್ರಗಳನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಜಲಿಯನ್‌ ವಾಲಾ ಬಾಘ… ಸ್ಥಳವನ್ನೇ ಹೋಲುವ ಸೆಟ್‌ ಹಾಕಲಾಗಿದ್ದು, ಇದರಲ್ಲಿ ಹತ್ಯಾಕಾಂಡ ನಡೆದ ಜಾಗ ಹಾಗೂ ಅಂದಿನ ಪರಿಸ್ಥಿತಿಯನ್ನು ನೋಡುಗರಿಗೆ ಮನಮುಟ್ಟುವಂತೆ ವಿವರಿಸುವ ಪ್ರಯತ್ನ ಮಾಡಲಾಗಿದೆ.

ಯೋಧರ ಸ್ಮರಣೆ: ಮೊದಲ ಮಹಾ ಯುದ್ಧದಲ್ಲಿನ ಭಾರತೀಯ ಯೋಧರ ತ್ಯಾಗ ಸ್ಮರಿಸುವ ವಸ್ತು ಸಂಗ್ರಹಾಲಯದಲ್ಲಿ ಯುದ್ಧದ ವೇಳೆ ಭಾರತೀಯ ಸೈನಿಕರು ತೊಟ್ಟಿದ್ದ ಸಮವಸ್ತ್ರಗಳು, ಉಪಯೋಗಿಸಿದ ಯುದ್ಧ ಸಲಕರಣೆಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ವೀರೋಚಿತ ಹೋರಾಟ ನೀಡಿದ ಯೋಧರನ್ನು ಸ್ಮರಿಸುವ ಪ್ರಯತ್ನ ಮಾಡಲಾಗಿದೆ. “ಭಾರತದ ಕೋಗಿಲೆ’ ಸರೋಜಿನಿ ನಾಯ್ಡು ಅವರು ಯುದ್ಧದಲ್ಲಿ ಭಾಗವಹಿಸಿದ್ದ 15 ಲಕ್ಷ ಭಾರತೀಯ ಯೋಧರಿಗಾಗಿ ಬರೆದಿದ್ದ “ದ ಗಿಫ್ಟ್’ ಎಂಬ ಪದ್ಯದ ಪ್ರತಿಯನ್ನೂ ಇಡಲಾಗಿದೆ. ಇದೇ ವಸ್ತು ಸಂಗ್ರಹಾಲಯದಲ್ಲಿ 1857ರಲ್ಲಿ ನಡೆದಿದ್ದ, ಭಾರತದ ಮೊದಲ ಸ್ವಾತಂತ್ರ ಸಂಗ್ರಾಮವೆಂದೇ ಪರಿಗಣಿಸಲ್ಪಟ್ಟಿರುವ “ಸಿಪಾಯಿ ದಂಗೆ’ಯ ಮಹತ್ವವನ್ನು ಸಾರುವ ಪ್ರಯತ್ನ ಮಾಡಲಾಗಿದೆ. 

“ಕಲಾ ಪಯಣ’ದ ದಾಖಲೆ: ದೃಶ್ಯಕಲಾ ವಸ್ತು ಸಂಗ್ರಹಾಲಯದಲ್ಲಿ, 16ನೇ ಶತಮಾನದಿಂದ ಭಾರತ ಸ್ವತಂತ್ರವಾಗುವವರೆಗೆ ಭಾರತೀಯ ಕಲೆಯು ನಡೆದು ಬಂದ ಹಾದಿಯನ್ನು ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಇವುಗಳಲ್ಲಿ ಭಾರತದ ಅವಿಸ್ಮರಣೀಯ ಕಲಾವಿದೆ ಅಮೃತಾ ಶೆರ್ಗಿ, ರಾಜಾ ರವಿವರ್ಮ ಅವರ ಕಲಾಕೃತಿಗಳನ್ನು ಇಡಲಾಗಿದೆ.

Advertisement

ಬೋಸ್‌ ಕುಟುಂಬಕ್ಕೆ ಮೋದಿ ಧನ್ಯವಾದ
ಸ್ವತಂತ್ರ ಹೋರಾಟಗಾರ ಸುಭಾಷ್‌ ಚಂದ್ರ ಬೋಸ್‌ ಅವರು ಧರಿಸಿದ್ದ ಟೋಪಿಯನ್ನು ತಮಗೆ ಉಡುಗೊರೆಯಾಗಿ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಬೋಸ್‌ ಅವರ ಕುಟುಂಬಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಟ್ವಿಟರ್‌ನಲ್ಲಿ ಧನ್ಯವಾದ ಅರ್ಪಿಸಿರುವ ಅವರು, “”ಸದ್ಯದಲ್ಲೇ ಆ ಟೋಪಿಯನ್ನು ಕೆಂಪುಕೋಟೆಯಲ್ಲೇ ಇರುವ “ಕ್ರಾಂತಿ ಮಂದಿರ’ದಲ್ಲಿ ಪ್ರದರ್ಶಿಸಲಾಗುವುದು. ಕ್ರಾಂತಿ ಮಂದಿರಕ್ಕೆ ಭೇಟಿ ನೀಡುವ ಇಂದಿನ ಯುವ ಸಮೂಹಕ್ಕೆ ನೇತಾಜಿಯವರ ಜೀವನ ಸ್ಫೂರ್ತಿಯಾಗಲೆಂದು ಆಶಿಸುತ್ತೇನೆ” ಎಂದಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಮೋದಿಗೆ ಈ ಟೊಪ್ಪಿಯನ್ನು ನೀಡಲಾಗಿತ್ತು.

ಕೆಂಪುಕೋಟೆಯ ಆವರಣದಲ್ಲಿ ನಿರ್ಮಿಸಿರುವ ವಸ್ತು ಸಂಗ್ರಹಾಲಯ
ಯಾದ್‌-ಎ- ಜಲಿಯನ್‌, ಯೋಧರ ಸ್ಮಾರಕ, ಚಿತ್ರಕಲಾ ಸಂಗ್ರಹಾಲಯಗಳೂ ಲೋಕಾರ್ಪಣೆ

Advertisement

Udayavani is now on Telegram. Click here to join our channel and stay updated with the latest news.

Next