Advertisement

ನೇತಾಜಿ ಬೋಸರ ಆದರ್ಶ ಪಾಲಿಸಿ

12:35 PM Jan 26, 2018 | Team Udayavani |

ಪಿರಿಯಾಪಟ್ಟಣ: ನೇತಾಜಿ ಸುಭಾಷ್‌ಚಂದ್ರ ಬೋಸರ ಆದರ್ಶ ಗುಣಗಳನ್ನು ವಿದ್ಯಾರ್ಥಿಗಳ ಬೆಳೆಸಿಕೊಳ್ಳಬೇಕು ಎಂದು ಪ್ರೌಢಶಾಲಾ ಶಿಕ್ಷಕ ಜಯಶೀಲಾ ತಿಳಿಸಿದರು. ತಾಲೂಕಿನ ಪಂಚವಳ್ಳಿ ಗ್ರಾಮದ ಪ್ರೌಢ ಶಾಲೆಯಲ್ಲಿ ನಡೆದ ಸುಭಾಶ್‌ ಚಂದ್ರ ಭೋಸ್‌ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು.

Advertisement

ಬೋಸರ ದೇಶಭಕ್ತಿಯ ಗುಣಗಳು ಮತ್ತು ಅವರ ಧೈರ್ಯ ಸಾಹಸ ಮನೋಭಾವಗಳು ವಿದ್ಯಾರ್ಥಿಗಳ ಜೀವನಕ್ಕೆ ಆದರ್ಶಪ್ರಾಯವಾದವು. ದೇಶಕ್ಕಾಗಿ ಒಂದು ಹನಿ ರಕ್ತಕೊಡಿ ನಿಮಗೆ ಸ್ವಾತಂತ್ರ್ಯಕೊಡುತ್ತೇನೆ ಎಂದು ಹೇಳಿ ಯುವಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವಂತೆ ಮಾಡಿದವರು. ಇವರ ಸಾವಿನ ನಿಖರತೆ ಇಂದಿಗೂ ತಿಳಿಯದಿರುವುದು ನೋವಿನ ಸಂಗತಿ ಎಂದು ತಿಳಿಸಿದರು.

ಮಕ್ಕಳ ಪ್ರತಿಭೆ ಗುರುತಿಸಿ: ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಕರೀಗೌಡ ಮಾತನಾಡಿ, ದೈಹಿಕ ಶಿಕ್ಷಕರು ಶಾಲೆಗೆ ಆಧಾರ ಸ್ತಂಭವಿದ್ದಂತೆ, ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಮಕ್ಕಳು ಭಾವಹಿಸುವಂತೆ ಮಾಡಿದ್ದು ಸಾಧನೆಯೇ  ಸರಿ. ಇಂತಹ ಮಕ್ಕಳನ್ನು ಶಾಲಾ ಹಂತದಲ್ಲಿ ಗುರುತಿಸಿ ಗೌರವಿಸಿ ಅವರ ಉತ್ಸಾಹ ಹೆಚ್ಚುವಂತೆ ಮಾಡಿ ಎಂದು ತಿಳಿಸಿದರು.

ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ ಕೆ.ಎಸ್‌.ಮಹಾದೇವಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮತ್ತು ಶಿಸ್ತು ಬೆಳೆಸುವಲ್ಲಿ ದೈಹಿಕ ಶಿಕ್ಷಕರ ಪಾತ್ರ ಮಹತ್ವದಾಗಿದೆ. ದೈಹಿಕ ಶಿಕ್ಷಕರು ಈ ಸಂದರ್ಭದಲ್ಲಿ ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ದೈಹಿಕ ಶಿಕ್ಷಕರು ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next