Advertisement

ನೇತಾ, ನೀತಿ, ನಿಯತ್: ಏನಿದು ಬಿಜೆಪಿಯಲ್ಲಿ ನಡೆಯುತ್ತಿರುವ ಹಕೀಕತ್?

02:28 PM Mar 14, 2022 | Team Udayavani |

ಬೆಂಗಳೂರು : ಪಂಚರಾಜ್ಯಗಳ ಫಲಿತಾಂಶದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ” ಮಗುಮ್ಮಾ”ದ ಬೆಳವಣಿಗೆ ನಡೆಯುತ್ತಿದ್ದು, ” ನೇತಾ, ನೀತಿ, ನಿಯತ್” ಚರ್ಚೆ ಆರಂಭವಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Advertisement

ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿರಿಯ ನಾಯಕರೊಬ್ಬರು ಈ ಘೋಷವಾಕ್ಯದ ಪ್ರಸ್ತಾಪ ಮಾಡಿದ್ದಾರೆ. ಮುಂದಿನ ಚುನಾವಣೆ ಗೆಲ್ಲುವ ದೃಷ್ಟಿಯಿಂದ ಈ ಘೋಷವಾಕ್ಯ ಪಾಲನೆ ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಇದು ನಾಯಕತ್ವ ಬದಲಾವಣೆಯ ನಿಗೂಢ ಬೀಜವನ್ನು ಬಿತ್ತಿದೆಯೇ ? ಎಂಬ ಚರ್ಚೆ ಆರಂಭವಾಗಿದೆ.

ಚುನಾವಣೆ ಗೆಲ್ಲುವುದಕ್ಕೆ “ನೇತಾ ” ಬೇಕು. ಅದು ಪ್ರಧಾನಿ ನರೇಂದ್ರ ಮೋದಿ ಎಂದು ರಾಷ್ಟ್ರಮಟ್ಟದಲ್ಲಿ ಒಪ್ಪಿಕೊಳ್ಳೋಣ. ಆದರೆ ರಾಜ್ಯದಲ್ಲಿ ಆ ನಾಯಕತ್ವ ಸ್ಥಾನವನ್ನು ಭರ್ತಿ ಮಾಡುವುದು ಯಾರು? ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.

ಇನ್ನು ” ನೀತಿ” ಎಂದರೆ ಬಿಜೆಪಿಯ ತತ್ವ-ಸಿದ್ಧಾಂತ. ಮುಂದಿನ ಚುನಾವಣೆ ದೃಷ್ಟಿಯಿಂದ‌‌ ಬಿಜೆಪಿ ಮತ ಕೇಂದ್ರೀಕರಣಕ್ಕೆ ಈ ನೀತಿಯನ್ನು ಹೇಗೆ ಪಾಲಿಸಬೇಕೆಂಬ ಬಗ್ಗರ ಇನ್ನು ಚರ್ಚೆ ಆರಂಭಗೊಳ್ಳಲಿದೆ. ಅದೇ ರೀತಿ ” ನಿಯತ್ ” ವಿಚಾರ ಪಕ್ಷಾಂತರ ಮಾಡುವವರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತಾಪಿಸಲಾಗಿದೆ. ಸಚಿವರೂ ಸೇರಿದಂತೆ ಹಲವರ ಪಕ್ಷ ನಿಷ್ಠೆ ಬಗ್ಗೆ  ಬಿಜೆಪಿಯ ಆಂತರಿಕ ವಲಯದಲ್ಲಿ ಅನುಮಾನ ವ್ಯಕ್ತವಾಗಿದ್ದು, ” ನೇತಾ, ನೀತಿ, ನಿಯತ್” ಆಧಾರದ ಮೇಲೆ ಪಕ್ಷ ಹಾಗೂ ಸರಕಾರದಲ್ಲಿ ಒಂದಿಷ್ಟು ಸ್ವಚ್ಛತಾ ಕಾರ್ಯ‌ ನಡೆಯಲಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next