Advertisement

ಭಾರತೀಯ ಮೂಲದ ನೆಟ್‌ ಬೌಲರ್‌ಗೆ ಚೆಂಡಿನೇಟು

10:23 PM Jun 08, 2019 | Team Udayavani |

ಲಂಡನ್‌: ಆಸ್ಟ್ರೇಲಿಯದ ಕ್ರಿಕೆಟಿಗರಿಗೆ ಅಭ್ಯಾಸದ ವೇಳೆ ಬೌಲಿಂಗ್‌ ನಡೆಸುತ್ತಿದ್ದ ಭಾರತೀಯ ಮೂಲದ ವೇಗದ ಬೌಲರ್‌ ಒಬ್ಬರು ಚೆಂಡು ಬಡಿದು ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ.

Advertisement

ಇಂಗ್ಲೆಂಡಿನ ಈ ನೆಟ್‌ ಬೌಲರ್‌ ಮೂಲತಃ ಭಾರತದವರಾಗಿದ್ದಾರೆ. ಹೆಸರು ಜೈ ಕಿಶನ್‌. ಅವರು ಓವಲ್‌ನಲ್ಲಿ ಆಸೀಸ್‌ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್‌ ನಡೆಸುತ್ತಿದ್ದರು. ಡೇವಿಡ್‌ ವಾರ್ನರ್‌ ಬಾರಿಸಿದ ಬಲವಾದ ಹೊಡೆತವೊಂದನ್ನು ತಡೆಯುವಾಗ ಚೆಂಡು ಜೈ ಕಿಶನ್‌ ಅವರ ತಲೆಗೆ ಬಡಿಯಿತು. ಕೂಡಲೇ ಕುಸಿದು ಬಿದ್ದ ಅವರನ್ನು ಪ್ರಾಥಮಿಕ ಚಿಕಿತ್ಸೆ ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಘಟನೆ ಬಳಿಕ ಆಸ್ಟ್ರೇಲಿಯ ತನ್ನ ನೆಟ್‌ ಪ್ರ್ಯಾಕ್ಟೀಸ್‌ ಮುಂದುವರಿಸಿತಾದರೂ ಡೇವಿಡ್‌ ವಾರ್ನರ್‌ ಇದರಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಐಸಿಸಿ ವೆನ್ಯೂ ಮ್ಯಾನೇಜರ್‌ ಮೈಕಲ್‌ ಗಿಬ್ಸನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next