Advertisement
ಇದುವರೆಗೆ ಐಪಿಎಲ್ 12 ಆವೃತ್ತಿಗಳನ್ನು ಮುಗಿಸಿದೆ. ಅಷ್ಟೂ ಆವೃತ್ತಿಯಲ್ಲಿ ನೆಸ್ ವಾಡಿಯ ಪಂಜಾಬ್ ತಂಡದ ಮಾಲಿಕರಲ್ಲಿ ಒಬ್ಬರಾಗಿದ್ದರು. ಇದೀಗ ಅವರು ಫ್ರಾಂಚೈಸಿಯೊಂದಿಗೆ ಸಂಬಂಧ ಕಡಿದುಕೊಳ್ಳಲು ಬಯಸಿದ್ದಾರೆ. ಈ ಬೆಳವಣಿಗೆಗೆ ಅವರ ಕುಟುಂಬದ ಒತ್ತಾಯವೇ ಕಾರಣ ಎನ್ನಲಾಗಿದೆ. ಕಿಂಗ್ಸ್ ಪಂಜಾಬ್ ತಂಡದಲ್ಲಿ ನೆಸ್ ವಾಡಿಯ ಷೇರು ಶೇ.23ರಷ್ಟಿದ್ದರೆ, ಬಾಲಿವುಡ್ ನಟಿ ಪ್ರೀತಿ ಜಿಂಟಾ ಶೇ.23ರಷ್ಟು ಷೇರು ಹೊಂದಿದ್ದಾರೆ. ಬರ್ಮನ್ ಸಮೂಹ ಶೇ.46ರಷ್ಟು ಪಾಲನ್ನು ಹೊಂದಿದೆ. ಇನ್ನುಳಿದ ಶೇ.8ರಷ್ಟನ್ನು ಇನ್ನೊಬ್ಬರು ಹೊಂದಿದ್ದಾರೆ. ಪ್ರಸ್ತುತ ನೆಸ್ಐಪಿಎಲ್ನಿಂದ ಹೊರಹೋಗಲು ಮನಸ್ಸು ಮಾಡಿದ್ದರೂ, ಪ್ರೀತಿ ಜಿಂಟಾ ಹಾಗೂ ಬರ್ಮನ್ ಸಮೂಹ ಈ ಸಂಬಂಧವನ್ನು ಕಡಿದುಕೊಳ್ಳುವ ಮನಸ್ಸು ಹೊಂದಿಲ್ಲ.
ಆದ್ದರಿಂದ ಮುಂದಿನ ಐಪಿಎಲ್ ಹೊತ್ತಿಗೆ ಕಿಂಗ್ಸ್ ಪಂಜಾಬ್ ತಂಡ ಇನ್ನೊಬ್ಬ ಸಹ ಮಾಲಿಕನನ್ನು ಹುಡುಕಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು.