ನವಿ ಮುಂಬಯಿ: ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್ ಟ್ರಸ್ಟ್ ನೆರೂಲ್ ಇದರ ರಜತ ಮಹೋತ್ಸವದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮವು ಡಿ. 24 ರಂದು ನೆರೂಲ್ ಶ್ರೀ ಶನೀಶ್ವರ ಮಂದಿರದ ಸಭಾಗೃಹದಲ್ಲಿ ನಡೆಯಿತು.
ಶ್ರೀ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್ ಟ್ರಸ್ಟ್ ನೆರೂಲ್ ಅಧ್ಯಕ್ಷ ಗುರುಸ್ವಾಮಿ ಅನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಗುರುಸ್ವಾಮಿಗಳಾದ ವಿ. ಕೆ. ಸುವರ್ಣ ಮತ್ತು ಅನಿಲ್ ಕುಮಾರ್ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗುರುವಂದನೆ ಸಲ್ಲಿಸಲಾಯಿತು.
ಹದಿನೆಂಟು ವರ್ಷಗಳಿಂದ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿರುವ ರಾಜು ಕೋಟೆಕಾರ್ ಸ್ವಾಮಿ, ಸುಜಿತ್ ಸ್ವಾಮಿ, ಪ್ರಸಾದ್ ಸ್ವಾಮಿ ಅವರನ್ನು ಸಮ್ಮಾನಿಸಲಾಯಿತು. ಪ್ರತಿಭಾವಂತ ಮಕ್ಕಳಾದ ಶ್ರಾವ್ಯಾ ಶೆಟ್ಟಿ ಮತ್ತು ಜಾಹ್ನವಿ ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ವೇದಿಕೆಯಲ್ಲಿ ನೆರೂಲ್ ಶ್ರೀ ಶನೀಶ್ವರ ಮಂದಿರದ ಕಾರ್ಯಾಧ್ಯಕ್ಷ ಸಂತೋಷ್ ಡಿ. ಶೆಟ್ಟಿ, ವಿದ್ವಾನ್ ದಿನೇಶ್ ಚಡಗ, ಶ್ರೀ ಶನೀಶ್ವರ ಮಂದಿರ ನೆರೂಲ್ ಅಧ್ಯಕ್ಷ, ಧರ್ಮದರ್ಶಿ ರಮೇಶ್ ಎಂ. ಪೂಜಾರಿ, ಘನ್ಸೋಲಿ ಶ್ರೀ ಮೂಕಾಂಬಿಕಾ ಕ್ಷೇತ್ರದ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಭಕ್ತವೃಂದ ಘನ್ಸೋಲಿ ಇದರ ಅಧ್ಯಕ್ಷ ಜಗದೀಶ್ ಶೆಟ್ಟಿ ನಂದಿಕೂರು, ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ವಿಜಯ ಕುಮಾರ್ ಹೆಗ್ಡೆ, ಶ್ರೀ ಮಣಿಕಂಠ ಸೇವಾ ಸಂಘ ನೆರೂಲ್ ಉಪಾಧ್ಯಕ್ಷ ಸುರೇಶ್ ಜಿ. ಶೆಟ್ಟಿ, ಸ್ಥಳೀಯ ನಗರ ಸೇವಕಿ ಮೀರಾ ಸಂಜಯ್ ಪಾಟೀಲ್, ಶ್ರೀ ಧರ್ಮಶಾಸ್ತ ಭಕ್ತವೃಂದ ನೆರೂಲ್ ಇದರ ಹರೀಶ್ ಗುರುಸ್ವಾಮಿ ಮೊದಲಾದವರಿದ್ದರು.
ಸಮಿತಿಯ ಸದಸ್ಯರಾದ ಉಪಾಧ್ಯಕ್ಷ ಪ್ರಭಾಕರ ಎಸ್. ಹೆಗ್ಡೆ, ಗೌರವ ಕೋಶಾಧಿಕಾರಿ ವಿಶ್ವನಾಥ ಕೆ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವೀಣಾ ವಿ. ಪೂಜಾರಿ, ಉಪಕಾರ್ಯಾಧ್ಯಕ್ಷೆ ಸುಪ್ರಿತಾ ಅನಿಲ್ ಹೆಗ್ಡೆ, ಸಮಿತಿಯ ಸದಸ್ಯ ಕೃಷ್ಣ ಎಂ. ಪೂಜಾರಿ, ಎನ್. ಕೆ. ಪೂಜಾರಿ, ಗಿರೀಶ್ ಸಿ. ಶೆಟ್ಟಿ, ವಿಜಯ್ ಶೆಟ್ಟಿ, ವಿನೋದಾ ರಾವ್, ಲಕ್ಷ್ಮೀನಾರಾಯಣ ಬಂಗೇರ, ಟ್ರಸ್ಟಿ ಕರುಣಾಕರ ಎಸ್. ಆಳ್ವ ಮತ್ತು ಅಯ್ಯಪ್ಪ ವ್ರತಧಾರಿಗಳು ಉಪಸ್ಥಿತರಿದ್ದರು. ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅವರು ಸಮ್ಮಾನ ಪತ್ರ ವಾಚಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಚಿತ್ರ-ವರದಿ: ಸುಭಾಷ್ ಶಿರಿಯಾ