Advertisement

Nima Rinji Sherpa: ಅತಿ ಎತ್ತರದ 14 ಶಿಖರ ಏರಿದ ಅತಿ ಕಿರಿಯ ನಿಮಾ

11:20 PM Oct 09, 2024 | Team Udayavani |

ಕಠ್ಮಂಡು: ನೇಪಾಳದ 18 ವರ್ಷದ ಶೆರ್ಪಾ ನಿಮಾ ರಿಂಜಿ ವಿಶ್ವದ ಅತಿ ಎತ್ತರದ 14 ಪರ್ವತಗಳನ್ನೇರಿದ ಅತಿ ಕಿರಿಯ ಪರ್ವತಾರೋಹಿ ಎಂಬ ವಿಶ್ವದಾಖಲೆ ನಿರ್ಮಿಸಿದ್ದಾರೆ. ಬುಧವಾರ ಮುಂಜಾನೆ ಅವರು ಚೀನಾದ ಶಿಶಪಂಗ್ಮಾ (8027 ಮೀಟರ್‌) ಪರ್ವತವನ್ನೇರುವ ಮೂಲಕ ಈ ದಾಖಲೆ ನಿರ್ಮಿಸಿದರು. ಅವರು 7000 ಮೀಟರ್‌ ಎತ್ತರದವರೆಗೆ ಆಮ್ಲಜನಕದ ನೆರವಿಲ್ಲದೇ ಮೇಲೆ ಸಾಗಿದ್ದರು. ಬೆಟ್ಟದ ತುದಿಯಿಂದಲೇ ಅವರು ಚಿತ್ರ ಪೋಸ್ಟ್‌ ಮಾಡಿದ್ದಾರೆ.

Advertisement

ನಿಮಾ ರಿಂಜಿ ಕೇವಲ 16 ವರ್ಷ 162 ದಿನಗಳಾಗಿದ್ದಾಗ (2022, ಸೆಪ್ಟೆಂಬರ್‌) ಮೊದಲ ಬಾರಿಗೆ ಮನಸ್ಲು ಪರ್ವತವನ್ನೇರಿದ್ದರು. ಅವರು 17ನೇ ವರ್ಷದವರಿದ್ದಾಗ ಕೇವಲ 10 ಗಂಟೆಗಳಲ್ಲಿ ಎವರೆಸ್ಟ್‌ (8848.86 ಮೀ.) ಮತ್ತು ಲ್ಹಾಟೆÕ (8516 ಮೀ.) ಪರ್ವತವನ್ನೇರಿದ್ದರು. ಆಗ ಅವರು ವಿಶ್ವವಿಖ್ಯಾತರಾಗಿದ್ದರು.

“ಈ ಎತ್ತರ ಕೇವಲ ನನ್ನ ಯಾನದ ಮುಕ್ತಾಯವಲ್ಲ. ಪ್ರತಿ ಶೆರ್ಪಾಗೂ ಅರ್ಪಿಸುತ್ತಿರುವ ಕಾಣಿಕೆ. ಪರ್ವತ ಏರುವುದು ಬರೀ ಪರಿಶ್ರಮದ ವಿಷಯವಲ್ಲ, ನಮ್ಮ ಸಾಮರ್ಥ್ಯ, ಹೋರಾಟಕಾರಿ ಗುಣದ ಸಂಕೇತ’ ಎಂದು ನಿಮಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next