Advertisement

ಭಾರತ ವಿರೋಧಿ ಕ್ರಮಗಳಿಗೆ ನೇಪಾಳದ ಬೆಂಬಲ ಇಲ್ಲ ; ಕರಡು ನೀತಿಗೆ ಸಿದ್ಧತೆ

10:03 AM Jan 14, 2020 | Hari Prasad |

ಕಠ್ಮಂಡು: ಭಾರತ ಮತ್ತು ಚೀನ ರಾಷ್ಟ್ರಗಳೊಂದಿಗೆ ನೇಪಾಲ ಹೊಂದಿರುವ ಉತ್ತಮ ಬಾಂಧವ್ಯವನ್ನು ಹಾಳುಗೆಡವುವಂಥ ಯಾವುದೇ ಯೋಜನೆಗಳನ್ನು ತನ್ನ ನೆಲದಲ್ಲಿ ಯಾವುದೇ ಅಂತಾರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯು (ಎನ್‌ಜಿಒ) ನಡೆಸದಂತೆ ನಿರ್ಬಂಧಿಸಲು ನೇಪಾಲ ಸರಕಾರ ನಿರ್ಧರಿಸಿದೆ.

Advertisement

ಇದಕ್ಕಾಗಿ, ಸೂಕ್ತ ನೀತಿಯೊಂದನ್ನು ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ಸದ್ಯಕ್ಕೆ ಅದರ ಕರಡು ತಯಾರಿಕೆಯಲ್ಲಿ ಸರಕಾರ ನಿರತವಾಗಿದೆ. ಹೊಸ ನೀತಿಯಡಿ, ಭಾರತದ ಗಡಿ ಬಳಿಯಲ್ಲಿರುವ ಮದರಸಾಗಳಿಗೆ ಕತಾರ್‌, ಸೌದಿ ಅರೇಬಿಯಾ, ಟರ್ಕಿಯಿಂದ ಬರುವ ಧನಸಹಾಯ, ದೇಣಿಗೆಗಳನ್ನು ಕೂಲಂಕಶವಾಗಿ ಪರಿಶೀಲಿಸಲಿದೆ. ಈ ದೇಣಿಗೆಗಳ ಬಗ್ಗೆ ಭಾರತ ಈ ಹಿಂದೆ ಕಳವಳ ವ್ಯಕ್ತಪಡಿಸಿದ್ದರಿಂದ ಈ ಕ್ರಮಕ್ಕೆ ನೇಪಾಲ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next