Advertisement

Nepal: “ಭಾರತದಲ್ಲಿ ಪಶುಪತಿನಾಥ ಪ್ರತಿಕೃತಿ ನಿರ್ಮಿಸಲು ಅನುಮತಿಸಿಲ್ಲ”

12:09 AM Nov 26, 2023 | Team Udayavani |

ಕಠ್ಮಂಡು: ವಿಶ್ವವಿಖ್ಯಾತ ಪಶುಪತಿನಾಥ ದೇಗುಲದ ಪ್ರತಿಕೃತಿಯನ್ನು ಭಾರತದಲ್ಲಿ ನಿರ್ಮಿಸಲು ಯಾರಿಗೂ ಅನುಮತಿ ನೀಡಲಾಗಿಲ್ಲ ಎಂದು ನೇಪಾಲದ ಪಶುಪತಿನಾಥ ಪ್ರದೇಶಾಭಿವೃದ್ಧಿ ಟ್ರಸ್ಟ್‌ನ ಆಡಳಿತ ಮಂಡಳಿ ಶನಿವಾರ ಸ್ಪಷ್ಟ ಪಡಿಸಿದೆ. ಉತ್ತರಾಖಂಡದ ಗ್ರಾಮವೊಂದರಲ್ಲಿ ನೇಪಾಲದ ಪಶುಪತಿನಾಥ ದೇಗುಲದ ಪ್ರತಿಕೃತಿ ನಿರ್ಮಿಸಲಾಗುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

Advertisement

ಈ ಹಿನ್ನೆಲೆಯಲ್ಲಿ ಟ್ರಸ್ಟ್‌ನ ನಿರ್ವಾಹಕ ನಿರ್ದೇಶಕ ಡಾ| ಘನಶ್ಯಾಮ್‌ ಪ್ರತಿಕ್ರಿಯೆ ನೀಡಿದ್ದಾರೆ. ಉತ್ತರಾಖಂಡದಲ್ಲಿ ಪಶುಪತಿನಾಥ ದೇಗುಲ ನಿರ್ಮಾಣವಾಗುತ್ತಿರುವ ಸುದ್ದಿ ಕೇವಲ ವದಂತಿ ಅಷ್ಟೇ, ಅಂಥ ಯಾವುದಕ್ಕೂ ಅನುಮತಿ ನೀಡಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next