Advertisement

Goa: ನೇಪಾಳ ಮೇಯರ್‌ ಪುತ್ರಿ, ಓಶೋ ಅನುಯಾಯಿ ಗೋವಾದಲ್ಲಿ ನಾಪತ್ತೆ

11:16 AM Mar 27, 2024 | Team Udayavani |

ಪಣಜಿ: ನೇಪಾಳ ಮೇಯರ್‌ ಪುತ್ರಿ ಆರತಿ ಹಮಾಲ್‌ (36ವರ್ಷ) ಗೋವಾದಲ್ಲಿ ನಾಪತ್ತೆಯಾಗಿರುವುದಾಗಿ ಆಕೆಯ ತಂದೆ ದೂರಿನಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.

Advertisement

ಇದನ್ನೂ ಓದಿ:Sena ಉದ್ಧವ್ ಪಕ್ಷದ 16 ಅಭ್ಯರ್ಥಿಗಳ ಲಿಸ್ಟ್ ಪ್ರಕಟ: ಮಾಜಿ ಕೇಂದ್ರ ಸಚಿವರು ಕಣಕ್ಕೆ

ಓಶೋ ಧ್ಯಾನಕೇಂದ್ರದ ಅನುಯಾಯಿಯಾಗಿರುವ ಆರತಿ ಕಳೆದ ಕೆಲವು ತಿಂಗಳಿನಿಂದ ಗೋವಾದಲ್ಲಿ ವಾಸ್ತವ್ಯ ಹೂಡಿದ್ದು, ಆಕೆ ಕೊನೆಯದಾಗಿ ಕಾಣಿಸಿಕೊಂಡಿದ್ದು ಸೋಮವಾರ ರಾತ್ರಿ ಎಂಬುದಾಗಿ ವರದಿ ವಿವರಿಸಿದೆ.

ಸೋಮವಾರ ರಾತ್ರಿ 9.30ರ ಹೊತ್ತಿಗೆ ಅಶ್ವೇಮ್‌ ಸೇತುವೆ ಸಮೀಪ ಆರತಿ ಕೊನೆಯದಾಗಿ ಕಾಣಿಸಿಕೊಂಡಿದ್ದಳು ಎಂದು ನೇಪಾಳಿ ದೈನಿಕ ದ ಹಿಮಾಲಯನ್‌ ಟೈಮ್ಸ್‌ ವರದಿ ಮಾಡಿದೆ.

ಧಂಗಾಧಿ ಉಪನಗರದ ಮೇಯರ್‌ ಆಗಿರುವ ಗೋಪಾಲ್‌ ಹಮಾಲ್‌ ಅವರು ಸಾಮಾಜಿಕ ಜಾಲತಾಣದಲ್ಲಿ ವಿಷಯವನ್ನು ಹಂಚಿಕೊಂಡಿದ್ದು, ತಮ್ಮ ಹಿರಿಯ ಪುತ್ರಿಯನ್ನು ಪತ್ತೆಹಚ್ಚಲು ನೆರವಾಗುವಂತೆ ಮನವಿ ಮಾಡಿಕೊಂಡಿದ್ದಾರೆ.

Advertisement

“ನನ್ನ ಹಿರಿಯ ಪುತ್ರಿ ಆರತಿ ಕಳೆದ ಕೆಲವು ತಿಂಗಳಿನಿಂದ ಗೋವಾದಲ್ಲಿ ವಾಸ್ತವ್ಯ ಹೂಡಿದ್ದಳು. ಆದರೆ ಕಳೆದ ರಾತ್ರಿಯಿಂದ ಆಕೆ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆಕೆಯ ಗೆಳೆಯರಿಂದ ಸಂದೇಶ ಬಂದಿದ್ದು, ದಯವಿಟ್ಟು ನನ್ನ ಮಗಳನ್ನು ಪತ್ತೆಹಚ್ಚಲು ನೆರವು ನೀಡಿ” ಎಂದು ಗೋಪಾಲ್‌ ಟ್ವೀಟ್‌ ನಲ್ಲಿ ತಿಳಿಸಿದ್ದಾರೆ.

ಮಗಳು ಆರತಿಯ ಬಗ್ಗೆ ವಿಚಾರಿಸಲು ನನ್ನ ಕಿರಿಯ ಮಗಳು ಅರ್ಝೂ ಮತ್ತು ಅಳಿಯ ಗೋವಾಕ್ಕೆ ತೆರಳಿದ್ದಾರೆ. ಒಂದು ವೇಳೆ ಆಕೆಯ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ವಿಷಯ ತಿಳಿಸಲು ಸಾಮಾಜಿಕ ಜಾಲತಾಣದಲ್ಲಿ ಮೂರು ಮೊಬೈಲ್‌ ನಂಬರ್‌ ಅನ್ನು ಶೇರ್‌ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next