Advertisement

Nepal; ಪ್ರಚಂಡ ಸರಕಾರ ಪತನ: ‘ವಿಶ್ವಾಸ’ದ ಪರೀಕ್ಷೆಯಲ್ಲಿ ಸೋಲು

12:45 AM Jul 13, 2024 | Team Udayavani |

ಕಠ್ಮಂಡು: ಬಹುಮತ ಕಳೆದುಕೊಂಡಿದ್ದ ಪ್ರಧಾನಿ ಪುಷ್ಪ ಕಮಲ್‌ ದಹಲ್‌(ಪ್ರಚಂಡ) ನೇತೃತ್ವದ ಸರಕಾರವು ಶುಕ್ರವಾರ ನೇಪಾಲ ಸಂಸತ್ತಿನಲ್ಲಿ ವಿಶ್ವಾಸ ಮತ ನಿರ್ಣಯದಲ್ಲಿ ಸೋಲು ಕಂಡಿದೆ. ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ನೇತೃತ್ವದ ಹೊಸ ಸರಕಾರ ಅಸ್ತಿತ್ವಕ್ಕೆ ಬರಲಿದೆ. ಈ ಮಧ್ಯೆ, ಪ್ರಚಂಡ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Advertisement

ಸರಕಾರದ ಪಾಲುದಾರ ಪಕ್ಷವಾದ ಸಿಪಿಎನ್‌-ಯುಎಂಎಲ್‌ ಬೆಂಬಲ ವಾಪಸ್‌ ಪಡೆದ ಹಿನ್ನೆಲೆಯಲ್ಲಿ ಪ್ರಚಂಡ ಸರಕಾರ ಅಲ್ಪಮತಕ್ಕೆ ಕುಸಿದಿತ್ತು. 275 ಸದಸ್ಯ ಬದಲ ನೇಪಾಲ ಸಂಸತ್ತಿನಲ್ಲಿ ವಿಶ್ವಾಸ ಮತದ ಪರವಾಗಿ ಕೇವಲ 63 ಮತಗಳು ಚಲಾವಣೆಯಾದರೆ, ನಿರ್ಣಯದ ವಿರುದ್ಧ 194 ಮತಗಳು ಬಂದವು. ವಿಶ್ವಾಸಮತ ಗೆಲ್ಲಲು ಕನಿಷ್ಠ 138 ಮತಗಳ ಅಗತ್ಯವಿತ್ತು. 2022ರಲ್ಲಿ ಅಧಿಕಾರಕ್ಕೆ ಬಂದ ಪ್ರಚಂಡ ಇದುವರೆಗೆ 4 ಬಾರಿ ವಿಶ್ವಾಸಮತ ನಿರ್ಣಯ ಗೆದ್ದಿದ್ದರು. ನೇಪಾಲ ಅಧ್ಯಕ್ಷ ರಾಮಚಂದ್ರ ಪೌಡೆಲ್‌ ಅವರು ನೇಪಾಲ ನ್ಯಾಶನಲ್‌ ಕಾಂಗ್ರೆಸ್‌ ಹಾಗೂ ಸಿಪಿಎನ್‌- ಯುಎಂಎಲ್‌ ಪಕ್ಷಕ್ಕೆ ಸರಕಾರ ರಚಿಸಲು ಶೀಘ್ರವೇ ಆಹ್ವಾನ ನೀಡುವ ಸಾಧ್ಯತೆಗಳಿವೆ. ಕಾಂಗ್ರೆಸ್‌ ಪಕ್ಷ 89 ಸದಸ್ಯರು ಮತ್ತು ಸಿಪಿಎನ್‌-ಯುಎಂಎಲ್‌ 78 ಸದಸ್ಯರನ್ನು ಹೊಂದಿದೆ. ಇವರೆಡೂ ಅತಿದೊಡ್ಡ ಪಕ್ಷಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next