ಬೀಜಿಂಗ್/ಹೊಸದಿಲ್ಲಿ: ಕೊರೊನಾ ಸೋಂಕಿನ ರೂಪಾಂತರಿಗಳ ಕಾಟದಿಂದ ನಲುಗಿರುವ ಜಗತ್ತಿಗೆ ಚೀನದ ವುಹಾನ್‌ನ ವಿಜ್ಞಾನಿಗಳು ಹೊಸ ಶಾಕ್ ಕೊಟ್ಟಿದ್ದಾರೆ.
ದ.ಆಫ್ರಿಕಾದಲ್ಲಿ ಬಾವಲಿಗಳಲ್ಲಿ ಕಂಡುಬರುವ “ನಿಯೋಕೋವ್’ ಎಂಬ ಕೊರೊನಾ ವೈರಸ್ ಭವಿಷ್ಯದಲ್ಲಿ ಮನುಷ್ಯರಿಗೆ ಹಬ್ಬುವ ಸಾಧ್ಯತೆಯಿದೆ. ಅದು ಅತ್ಯಂತ ಅಪಾಯಕಾರಿ ರೂಪಾಂತರಿಯಾಗಿ ಪರಿಣಮಿಸಲಿದ್ದು, ಈ ಸೋಂಕು ತಗಲಿದ ಮೂವರಲ್ಲಿ ಒಬ್ಬರು ಸಾವಿಗೀಡಾಗುವ ಸಾಧ್ಯತೆಯಿದೆ ಎಂದು ವುಹಾನ್ ಸಂಶೋಧಕರ ವರದಿ ಹೇಳಿದೆ.
ಸದ್ಯಕ್ಕೆ ನಿಯೋಕೋವ್ ವೈರಸ್ ರೂಪಾಂತರಗೊಂಡಿಲ್ಲ. ಈವರೆಗೆ ಅದು ಬಾವಲಿಗಳಲ್ಲಿ ಮಾತ್ರ ಹಬ್ಬಿರುವುದು ಕಂಡುಬಂದಿದೆ. ಒಂದು ವೇಳೆ, ಈ ವೈರಸ್‌ನಲ್ಲಿ ಒಂದು ರೂಪಾಂತರವಾದರೂ ಅದು ಮನುಷ್ಯನಿಗೆ ಹಬ್ಬಬಹುದು. ಆಗ ಸಾವಿನ ಪ್ರಮಾಣ, ಸೋಂಕು ವ್ಯಾಪಿಸುವಿಕೆ ತೀವ್ರಗತಿಯಲ್ಲಿರಲಿದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ:“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ
ಮೂಗಿನ ಲಸಿಕೆ ಪ್ರಯೋಗಕ್ಕೆ ಅಸ್ತು: ಭಾರತ್ ಬಯೋಟೆಕ್ ಸಂಶೋಧಿಸಿ, ಅಭಿ ವೃದ್ಧಿಪಡಿಸಿರುವ ಮೂಗಿನ ಮೂಲಕ ನೀಡುವ ಲಸಿಕೆಯ ಪ್ರಯೋಗಕ್ಕೆ ಭಾರ ತೀಯ ಔಷಧ ಮಹಾನಿರ್ದೇಶನಾಲಯ ಶುಕ್ರವಾರ ಅನುಮತಿ ನೀಡಿದೆ. ಬೂಸ್ಟರ್ ಡೋಸ್ ನೀಡಲು ಇದನ್ನು ಬಳಸಬಹುದೇ ಎಂಬ ಬಗ್ಗೆ ಪರೀಕ್ಷೆ ನಡೆಯಲಿದೆ. 9 ಕಡೆ ಪ್ರಯೋಗ ನಡೆಸಲು ತೀರ್ಮಾನಿಸಲಾಗಿದೆ. ಇದೇ ವೇಳೆ, ಗುರುವಾರದಿಂದ ಶುಕ್ರವಾರಕ್ಕೆ ದೇಶದಲ್ಲಿ 2.5 ಲಕ್ಷ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 627 ಮಂದಿ ಸಾವಿಗೀಡಾಗಿದ್ದಾರೆ.