Advertisement
ಮಂಗಳೂರಿನಿಂದ ಸುಮಾರು 30ಕಿ.ಮೀ ದೂರದ ಹಚ್ಚ ಹಸುರಿನ ಪ್ರಕೃತಿಯ ಮಡಿಲಲ್ಲಿ ದೇವಾಲಯವಿದೆ. ಗುಹಾ ದೇವಾಲಯವನ್ನು ಪ್ರತೀ ವರ್ಷ ತುಲಾ ಸಂಕ್ರಮಣದಂದು ತೆರೆಯಲಾಗುತ್ತದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ, ಅಂದರೆ ಮೇಷ ಸಂಕ್ರಮಣದಂದು ಸಕಲ ವಿಧಿ ವಿಧಾನಗಳೊಂದಿಗೆ ದೇವಾಲಯವನ್ನು ಮುಚ್ಚಲಾಗುತ್ತದೆ.
Related Articles
Advertisement
ಗುಹೆಯನ್ನು ಪ್ರವೇಶಿಸುವ ಮೊದಲು ದೇವಾಲಯದ ಸಮೀಪದಲ್ಲೇ ನೈಸರ್ಗಿಕವಾದ ‘ನಾಗಪ್ಪನ ಕೆರೆ’ಇದೆ. ಭಕ್ತರು ಇಲ್ಲಿ ಸ್ನಾನ ಮಾಡಿಯೇ ಗುಹೆಯೊಳಗೆ ಸಾಗಬೇಕೆಂಬ ನಂಬಿಕೆ ಚಾಲ್ತಿಯಲ್ಲಿದೆ. ನೆಲ್ಲಿತೀರ್ಥ ಗುಹಾ ದೇವಾಲಯವು ವರ್ಷದ ಆರು ತಿಂಗಳುಗಳ ಕಾಲ ಸಂಪೂರ್ಣ ಮುಚ್ಚಿದ ಸ್ಥಿತಿಯಲ್ಲೇ ಇರುವುದರಿಂದ ಈ ಅವಧಿಯಲ್ಲಿ ಯಾವುದೇ ಪೂಜೆಗಳು ನಡೆಯುವುದಿಲ್ಲ.
ಭಗವಾನ್ ಈಶ್ವರ (ಶ್ರೀ ಸೋಮನಾಥೇಶ್ವರ) ಈ ದೇವಾಲಯದ ಮುಖ್ಯ ದೇವರಾಗಿದ್ದು, ಪಕ್ಕದಲ್ಲಿ ‘ಮಹಾಗಣಪತಿ’ ಮತ್ತು ‘ಜಾಬಾಲಿ ಮಹರ್ಷಿ’ಯ ಗುಡಿಗಳು ಇವೆ. ಇದರ ಜೊತೆಯಲ್ಲಿ ದೇವಾಲಯದ ಪಕ್ಕದಲ್ಲೇ ಪ್ರಮುಖ ದೈವಗಳಾದ ಪಿಲಿಚಾಮುಂಡಿ (ಪಿಲಿ ಎಂದರೆ ಹುಲಿ), ರಕ್ತೇಶ್ವರಿ, ಧೂಮಾವತಿ ಮತ್ತು ಕ್ಷೇತ್ರಪಾಲಕರ ದೇವಾಲಯವಿದೆ. ಈ ದೇವಾಲಯದ ಆಡಳಿತವು ತುಳುನಾಡಿನ ಪ್ರಮುಖ ಮನೆತನಗಳಲ್ಲೊಂದಾದ ‘ಚೌಟ’ ಮನೆತನದ ಸುಪರ್ದಿಯಲ್ಲಿದೆ.
ಈ ಪವಿತ್ರ ಸ್ಥಳವು ಬಜ್ಪೆ ವಿಮಾನ ನಿಲ್ದಾಣಕ್ಕೆ ಅತ್ಯಂತ ಸನಿಹದಲ್ಲಿದೆ. ಮಂಗಳೂರಿನಿಂದ ಮೂಡಬಿದರೆ ರಸ್ತೆಯಲ್ಲಿ ಚಲಿಸುತ್ತಾ ಎಡಪದನಲ್ಲಿ ಎಡಗಡೆ ತಿರುಗಿ 8 ಕಿ.ಮೀ.ಸಾಗಿಯೂ ಈ ದೇವಾಲಯವನ್ನು ತಲುಪಬಹುದು. ಅದೇ ರೀತಿ ಬಜ್ಪೆಯಿಂದ ಕತ್ತಲ್‌ಸರ್ ರಸ್ತೆಯ ಮೂಲಕವೂ ಇಲ್ಲಿಗೆ ಬರಬಹುದು.
ಸಂತೋಷ್ ರಾವ್ ಪೆರ್ಮುಡ