Advertisement
ತೀರ್ಥಹಳ್ಳಿ ಸಮೀಪದ ಕೋಣಂದೂರಿನ ರತ್ನಮ್ಮ (70) ಮತ್ತು ಅವರ ಪುತ್ರ ಸೋಮಶೇಖರ (47) ಮೃತಪಟ್ಟವರು. ಆಮ್ನಿಯಲ್ಲಿ ಒಟ್ಟು 9 ಮಂದಿ ಪ್ರಯಾಣಿಸುತ್ತಿದ್ದು ಉಳಿದ ಏಳು ಮಂದಿ ಅಂದರೆ ಚಾಲಕ ಆದರ್ಶ್ (32), ಸೋಮಶೇಖರ ಅವರ ಪತ್ನಿ ಅಂಬಿಕಾ (40), ಪುತ್ರ ಆಶಿಕ್ (17), ಪುತ್ರಿ ನಿಸರ್ಗ (12), ನೆರೆಯ ಗಂಗಪ್ಪ (60) ಮತ್ತು ಅವರ ಪತ್ನಿ ಲಲಿತಾ (51), ಉಮಾವತಿ (45) ಗಂಭೀರವಾಗಿ ಗಾಯಗೊಂಡಿದ್ದು ಎಲ್ಲರನ್ನೂ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋವಾ ಕಾರಿನಲ್ಲಿದ್ದವರಿಗೂ ಅಲ್ಪಸ್ವಲ್ಪ ಗಾಯಗಳಾಗಿವೆ.
ಬೊಂಡದಂಗಡಿ ಬಳಿ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ ರಸ್ತೆ ಉಬ್ಬು ಅನೇಕ ಅವಘಡ ಗಳಿಗೆ ಕಾರಣವಾಗುತ್ತಿದ್ದು ಇದನ್ನು ನಿವಾರಿಸ ಬೇಕು ಎಂದು ಪಂಚಾಯತ್ ವತಿಯಿಂದ ಲೋಕೋಪ ಯೋಗಿ ಇಲಾಖೆಗೆ ಈ ಹಿಂದೆಯೇ ಮನವಿ ಸಲ್ಲಿಸ ಲಾಗಿದೆ. ಈ ಜಾಗದಲ್ಲಿ ಒಂದು ಬದಿಯಲ್ಲಿ ತೀರಾ ಇಳಿಜಾರು ಇದ್ದು ಧರ್ಮಸ್ಥಳದ ಕಡೆಯಿಂದ ಬರು ತ್ತಿದ್ದ ಇನ್ನೋವಾ ಕಾರು ಯಾವುದೋ ವಾಹನವನ್ನು ಹಿಂದಿಕ್ಕಿ ಬರುವ ಪ್ರಯತ್ನದಲ್ಲಿ ಈ ರಸ್ತೆ ಉಬ್ಬಿನ ಬಳಿ ತಗ್ಗಿನಿಂದ ಮೇಲೇರಿಬರುತ್ತಿದ್ದ ಆಮ್ನಿ ಕಾರನ್ನು ಗಮನಿಸಲಾಗದೆ ನೇರ ಢಿಕ್ಕಿ ಹೊಡೆಯುವಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ರಸ್ತೆ ಉಬ್ಬಿನ ಅವೈಜ್ಞಾನಿಕ ನಿರ್ಮಾಣದ ಬಗ್ಗೆ ಲೋಕೋಪಯೋಗಿ ಇಲಾಖೆ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಜನರು ಆಗ್ರಹಿಸುತ್ತಿದ್ದಾರೆ.