Advertisement

ನೆಲಮಂಗಲ: ಯುವಕರ ಡೆಡ್ಲಿ ವೀಲಿಂಗ್ ಪುಂಡಾಟಿಕೆ; ವಿಡಿಯೋ ವೈರಲ್

12:38 PM Mar 20, 2022 | Team Udayavani |

ನೆಲಮಂಗಲ: ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವೀಲಿಂಗ್ ಹಾವಳಿ ಹೆಚ್ಚಾಗಿದ್ದು, ನೆಲಮಂಗಲದ ಮಾದನಾಯಕನಹಳ್ಳಿ ಬಳಿ ನಡೆದ ದುಸ್ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Advertisement

ಪೊಲೀಸರ ಭಯವೂ ಇಲ್ಲದೇ, ಅಮಾಯಕ ಜನರ ಜೀವದ ಜೊತೆಗೆ ಚಲ್ಲಾಟ ನಡೆಸುತ್ತಿದ್ದು, ಯುವಕರ ಭಯಾನಕ ಬೈಕ್ ವೀಲಿಂಗ್ ಗೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ:ದೇಹ ಸುಡುತ್ತಿದ್ದ ಸ್ಥಿತಿಯಲ್ಲೇ ಪ್ರಾಣ ಉಳಿಸಿಕೊಳ್ಳಲು ಓಡಿ ಬಂದ ಕಾರ್ಮಿಕರು

ರಾತ್ರಿ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಬರುವ ಪುಂಡರು, ಭಯಾನಕ ಬೈಕ್ ವೀಲಿಂಗ್ ನಡೆಸುತ್ತಿದ್ದು ಪೊಲೀಸರ ವಾಹನ ಬಂದರೂ ಸೆಡ್ಡು ಹೊಡೆದು ವೀಲಿಂಗ್‍ ಮಾಡಿ, ಸಾವಿನ ಜೊತೆಗೆ ಚಲ್ಲಾಟ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next