Advertisement

ನೆಕ್ರಾಜೆ ಶ್ರೀ ಗೋಪಾಲಕೃಷ್ಣ ದೇವಾಲಯಕ್ಕೆ ಕಾರ್ಕಳದಿಂದ ಶಿಲೆಯ ಆಗಮನ

12:49 PM Jun 14, 2019 | keerthan |

ಬದಿಯಡ್ಕ: ನೆಕ್ರಾಜೆ ಗ್ರಾಮ ದೇವಸ್ಥಾನವಾದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಶಿಲಾಮಯ ಗರ್ಭ ಗುಡಿಯ ನಿರ್ಮಾಣ ಕಾರ್ಯಗಳಿಗಾಗಿ ಕಾರ್ಕಳದಿಂದ ಶಿಲೆಯನ್ನು ಭಕ್ತರ ಸಮೂಹದಿಂದ ಮೆರವಣಿಗೆ ಮೂಲಕ ಇತ್ತೀಚಿಗೆ ತರಲಾಯಿತು.

Advertisement

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಬಿ.ವಸಂತ ಪೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಶಂಕರ ನಾರಾಯಣ ಮಯ್ಯ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಯಾದ ಗಣೇಶ ವತ್ಸ ನೆಕ್ರಾಜೆ, ಅನುವಂಶಿಕ ಮೊಕ್ತೇಸರರಾದ ನೆಕ್ರಾಜೆ ಸೀತಾರಾಮ ಶೆಟ್ಟಿ , ಸೇವಾ ಸಮಿತಿ ಅಧ್ಯಕ್ಷರಾದ ಗಂಗಾಧರ ಮಣಿಯಾಣಿ ನೆಲ್ಲಿತ್ತಲ, ರತ್ನಾಕರ ಮಾವಿನಕಟ್ಟೆ, ಗೋಪಾಲ ಭಟ್‌ ಕೋಳಾರಿ ಮತ್ತು ಶ್ರೀ ಕ್ಷೇತ್ರ ಮಹಿಳಾ ಸಂಘ ನೆಕ್ರಾಜೆ, ಶ್ರೀ ಗೋಪಾಲ ಕೃಷ್ಣ ಭಜನಾ ಸಂಘ ನೆಕ್ರಾಜೆ ಮತ್ತು ವಿವಿಧ ಸಂಘ ಸಂಸ್ಥೆಗಳ ಹಾಗೂ ಕ್ಲಬ್‌ಗಳ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನೆಕ್ರಾಜೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಯ ಕೆಲಸ ಸಧ್ಯದಲ್ಲಿಯೇ ಪ್ರಾರಂಭವಾಗಲಿದ್ದು ಶಿಲೆಯನ್ನು ಶ್ರೀ ಕ್ಷೇತ್ರಕ್ಕೆ ತಲುಪಿಸಲಾಗಿದೆ. ನೆಕ್ರಾಜೆಯ ಗ್ರಾಮದ ದೇವಸ್ಥಾನವಾಗಿದ್ದು ಸಂತಾನ ಗೋಪಾಲಕೃಷ್ಣ ಎಂದೇ ಖ್ಯಾತಿ ಪಡೆದಿದೆ. ಅತಿ ಶೀಘ್ರದಲ್ಲಿ ಕೆಲಸವನ್ನು ಪೂರ್ತಿಗೊಳಿಸುವ ಯೋಜನೆ ಹಾಕಲಾಗಿದ್ದು ಭಕ್ತ ಜನರ ಸಹಕಾರದಿಂದ ಅದು ಸಾಧ್ಯವಾಗಲಿದೆ.
ಗಣೇಶ ವತ್ಸ ನೆಕ್ರಾಜೆ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ

ಈ ದೇವಾಲಯವು ಸೀಮೆಯ ಒಂದು ಪ್ರಸಿದ್ಧ ಕಾರಣಿಕದ ಕ್ಷೇತ್ರವಾಗಿದ್ದು, ನೆಕ್ರಾಜೆ ಗ್ರಾಮಸ್ಥರ ಗ್ರಾಮ ದೇಗುಲವೆಂದೇ ಪ್ರತೀತವಾಗಿದೆ. ಇಲ್ಲಿ ಶಾಶ್ವತ ಚಪ್ಪರ, ಸುಸಜ್ಜಿತ ಅಡುಗೆ ಶಾಲೆ, ನೆಲಕ್ಕೆ ಹಾಸುಗಲ್ಲು, ಕಾರ್ಯಾಲಯ, ಶಾಶ್ವತ ವೇದಿಕೆ, ನೀರಿನ ಟ್ಯಾಂಕ್‌, ಶೌಚಾಲಯ ಮುಂತಾದ ಕೆಲಸಗಳು ನಡೆಯಬೇಕಿದೆ. ನೆಕ್ರಾಜೆ ನಿವಾಸಿಗಳು ನೀಡುತ್ತಿರುವ ಪೂರ್ಣ ಸಹಕಾರ ಮತ್ತು ಉತ್ಸಾಹ ಇಲ್ಲಿನ ಕೆಲಸ ಕಾರ್ಯಗಳು ಅತ್ಯಂತ ವೇಗವಾಗಿ ನಡೆದು ಪುನರ್‌ಪ್ರತಿಷ್ಠಾ ಕಾರ್ಯವನ್ನು ಕಾಣಲಿದೆ.
ವಸಂತ ಪೈ ಬದಿಯಡ್ಕ. ಧಾರ್ಮಿಕ ಮುಂದಾಳು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next