Advertisement
ಇದು ಕುಂಬ್ಲಾಡಿ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಗದ್ದೆಯಲ್ಲಿ ನಡೆದ ಕಾರ್ಯ. ಇಲ್ಲಿನ ಭಕ್ತರೇ ಸೇರಿಕೊಂಡು ನೇಜಿ ನಾಟಿ ಮಾಡಿ ಸಂಭ್ರಮಿಸಿದರು. 50ಕ್ಕೂ ಅಧಿಕ ಮಂದಿ ಈ ಕೆಲಸದಲ್ಲಿ ತೊಡಗಿಸಿಕೊಂಡರು.
ದೇವಸ್ಥಾನದ ಗದ್ದೆಯಲ್ಲಿ ಶ್ರಮದಾನದ ಮೂಲಕ ನಾಟಿ ಮಾಡುವ ಕಾರ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋನಪ್ಪ ಗೌಡ ಉಳವ, ಆಡಳಿತ ಪಂಗಡದ ಸಂಚಾಲಕ ವಿಶ್ವನಾಥ ಕಂಪ, ವಿಶ್ವನಾಥ ಖಂಡಿಗ, ಜನಾರ್ದನ ಅವರ ಮೇಲುಸ್ತುವಾರಿಯಲ್ಲಿ ನಡೆಯಿತು. ದೇವಸ್ಥಾನದ ಪೈರು ಮನೆಗೆ ತೆನೆ
ಹೀಗೆ ದೇವಸ್ಥಾನದ ಗದ್ದೆಯಲ್ಲಿ ಬೆಳೆಸಲಾದ ಪೈರನ್ನು ಗಣೇಶ ಚತುರ್ಥಿಯ ದಿನ ದೇವಸ್ಥಾನದಲ್ಲಿ ನಡೆಯುವ ಪೈರು ಪೂಜೆಗೆ ಬಳಸಲಾಗುತ್ತದೆ. ಆ ದಿನ ದೇವಸ್ಥಾನಕ್ಕೆ ಬರುವ ಎಲ್ಲ ಭಕ್ತರಿಗೂ ಮನೆಯಲ್ಲಿ ತೆನೆ ತುಂಬಲು ಪೈರನ್ನು ನೀಡಲಾಗುತ್ತದೆ. ದೇವಸ್ಥಾನದಿಂದ ಕೊಂಡುಹೋದ ಪೈರನ್ನು ಬಳಸಿಕೊಂಡು ಮನೆ ತುಂಬಿಸುವ ವಿಧಿ-ವಿಧಾನದ ಬಳಿಕ ಮನೆಯಲ್ಲಿ ತೆನೆ ಕಟ್ಟಲಾಗುತ್ತದೆ. ದೇವಸ್ಥಾನದ ಗದ್ದೆಯಲ್ಲಿ ಬೆಳೆದ ಪೈರು ಆಗಿರುವುದರಿಂದ ಭಕ್ತರಿಗೂ ವಿಶೇಷ ಮಹತ್ವದ್ದಾಗಿರುತ್ತದೆ. ವರ್ಷಂಪ್ರತಿ ಇದೇ ರೀತಿಯ ಕಾರ್ಯ ಕುಂಬ್ಲಾಡಿ ದೇವಸ್ಥಾನದಲ್ಲಿ ನಡೆಯುತ್ತದೆ.