Advertisement

ಮೋದಿ ಪಿಎಂ ಆಗಲು ನೆಹರೂ ಕಾರಣ 

07:01 AM Nov 15, 2018 | Team Udayavani |

ಹೊಸದಿಲ್ಲಿ: ಆಗಾಗ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಈಗ, ಪ್ರಥಮ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ರೂಪಿಸಿದ ವ್ಯವಸ್ಥೆಯಿಂದಾಗಿಯೇ ಚಹಾ ಮಾರುತ್ತಿದ್ದ ವ್ಯಕ್ತಿ ಪ್ರಧಾನಿಯಾಗಲು ಸಾಧ್ಯವಾಗಿದೆ ಎಂದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಯಾವುದೇ ವ್ಯಕ್ತಿಯೂ ಈ ದೇಶದ ಅತ್ಯುನ್ನತ ಹುದ್ದೆಯನ್ನು ಏರಲು ಸಾಧ್ಯವಾಗುವಂತೆ ಮಾಡಿದ್ದು ನೆಹರು ರೂಪಿಸಿದ ಸಾಂಸ್ಥಿಕ ರಚನೆಗಳು. ನೆಹರೂ ಬಗ್ಗೆ ಈಗ ಇಂಟರ್‌ನೆಟ್‌ನಲ್ಲಿ ಕೀಳಾಗಿ ಮಾತನಾಡುವುದನ್ನು ಕಾಣುತ್ತಿದ್ದೇವೆ.ಎಂದರು. ಇದಕ್ಕೆ ವ್ಯಂಗ್ಯವಾಗಿ ಟ್ವೀಟ್‌ ಮಾಡಿದ ಬಿಜೆಪಿ, ಜಗತ್ತಿನಲ್ಲಿ ಮಾನವೀಯತೆ ಅಸ್ತಿತ್ವದಲ್ಲಿರು ವುದಕ್ಕೆ ನೆಹರೂ ಕಾರಣ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next