Advertisement

ಬೈಪಾಸ್‌ ರೋಡ್‌ನ‌ಲ್ಲಿ ನಿಂತ ನೇಹಾ ಸಕ್ಸೇನಾ

03:18 PM Nov 21, 2020 | Suhan S |

ಈಗಾಗಲೇ ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ನೇಹಾ ಸಕ್ಸೇನಾ ಈಗ “ಬೈಪಾಸ್‌ ರೋಡ್‌’ನಲ್ಲಿ ಬಂದು ನಿಂತಿದ್ದಾರೆ. ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ನಾವು ಹೇಳುತ್ತಿರೋದು ನೇಹಾ ನಟಿಸಿರುವ ಹೊಸ ಸಿನಿಮಾ ಬಗ್ಗೆ.

Advertisement

ಹೌದು, ನೇಹಾ “ಬೈಪಾಸ್‌ ರೋಡ್‌’ ಎಂಬ ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರ ಹೊಸ ವರ್ಷದಲ್ಲಿ, ಹೊಸ ಜೋಶ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ತಯಾರಿ ಮಾಡಿಕೊಳ್ಳುತ್ತಿವೆ. ಚಿತ್ರದ ಬಗ್ಗೆ ಮಾತನಾಡುವ ನೇಹಾ, “ಇದರಲ್ಲಿ ನಾನು ಬೋಲ್ಡ್‌ ಆಗಿರುವಂಥ ಕಾರ್ಪೋರೆಟ್‌ ಗರ್ಲ್ ಕ್ಯಾರೆಕ್ಟರ್‌ ಮಾಡಿದ್ದೇನೆ. ಮೇಲ್ನೋಟಕ್ಕೆ ಇದೊಂದು ಸಸ್ಪೆನ್ಸ್‌ – ಥ್ರಿಲ್ಲರ್‌ ಅನಿಸಿದ್ದರೂ, ಇದರಲ್ಲಿ ಲವ್‌, ರೊಮ್ಯಾನ್ಸ್‌, ಎಮೋಷನ್ಸ್‌ ಎಲ್ಲವೂ ಇದೆ. ಸಿನಿಮಾ ತುಂಬ ಚೆನ್ನಾಗಿ ಬಂದಿದೆ. ಆಡಿಯನ್ಸ್‌ಗೆ “ಬೈಪಾಸ್‌ ರೋಡ್‌’ ಹೊಸಥರದ ಎಕ್ಸ್ ಪೀರಿಯನ್ಸ್‌ ಕೊಡುವ ಸಿನಿಮಾ’ ಎನ್ನುತ್ತಾರೆ.

ಇದನ್ನೂ ಓದಿ : ಆಕ್ಟ್ 1978 ಚಿತ್ರಕ್ಕೆ ಅದ್ಧೂರಿ ಸ್ವಾಗತ

ಚಿತ್ರರಂಗದಲ್ಲಿ ನಿರ್ದೇಶನ ವಿಭಾಗದಲ್ಲಿ ಹಲವು ವರ್ಷಗಳ ಅನುಭವವಿರುವ ಶ್ರೀನಿವಾಸ್‌ ಎಸ್‌. ಬಿ “ಬೈಪಾಸ್‌ ರೋಡ್‌’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. “ಎಂ.ಬಿ ಪ್ರೊಡಕ್ಷನ್ಸ್‌’ ಬ್ಯಾನರ್‌ ಅಡಿಯಲ್ಲಿ ಭರತ್‌ ರಾಜ್‌ ಎಂ, ಮಹೇಶ್‌ ಬಿ.ಎನ್‌ “ಬೈಪಾನ್‌ ರೋಡ್‌’ ಚಿತ್ರಕ್ಕೆ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next