Advertisement

ಕೂಲಿ ಕಾರ್ಮಿಕರ ಕುಟುಂಬದ ಸಾಧಕಿ ನೇಹಾ

06:15 AM May 20, 2018 | |

ಬೆಳ್ಮಣ್‌: ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಲು ಮಾಧ್ಯಮ ಮುಖ್ಯವಲ್ಲ, ಬದಲಾಗಿ ಛಲ ಮುಖ್ಯ ಎಂದು ತೋರಿಸಿ ಕೊಟ್ಟವಳೇ ನೇಹಾ ನಾಯಕ್‌. ಈಕೆ ಎಸೆಸೆಲ್ಸಿಯಲ್ಲಿ 605 ಅಂಕ ಗಳಿಸಿ ಶೇ. 96.8ರ ಸಾಧನೆ ಮಾಡಿದ್ದಾಳೆ. ಈಕೆ ಬೆಳ್ಮಣ್‌ ಸಂತ ಜೋಸೆಫ್‌ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ.

Advertisement

ಬೋಳ ಗ್ರಾ. ಪಂ. ವ್ಯಾಪ್ತಿಯ ಕೆದಿಂಜೆ ಸುಂಕಮಾರು ಐದು ಸೆಂಟ್ಸ್‌ನಲ್ಲಿ ವಾಸವಾಗಿರುವ ಸುರೇಶ್‌ ನಾಯಕ್‌ (ದೂರವಾಣಿ: 9731908108), ಸುಮಿತಾ ಎಸ್‌. ನಾಯಕ್‌ ದಂಪತಿಯ ಇಬ್ಬರು ಮಕ್ಕಳಲ್ಲಿ ನೇಹಾ ಹಿರಿಯವಳು. ತಂದೆ ಕೂಲಿ ಕಾರ್ಮಿಕರು, ತಾಯಿ ಮನೆಗೆಲಸ ಮಾಡುತ್ತಾರೆ. ಸಂಘ ಸಂಸ್ಥೆಗಳು ನೀಡಿದ ಸಹಾಯದಿಂದ ನೇಹಾ ಮತ್ತು ಆಕೆಯ ಸಹೋದರಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ನೇಹಾ ಕನ್ನಡ-124, ಹಿಂದಿ-100, ಇಂಗ್ಲಿಷ್‌-96, ಗಣಿತ-97, ವಿಜ್ಞಾನ-90, ಸಮಾಜ ಅಧ್ಯಯನ-98 ಅಂಕ ಗಳಿಸಿದ್ದಾಳೆ. ಮುಂದಿನ ವಿದ್ಯಾಭ್ಯಾಸವನ್ನು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಮುಂದುವರಿಸಿ ಸಿಎ ಆಗಬೇಕು ಎಂಬ ಕನಸು ಈಕೆಗಿದೆ. ತನಗೆ ಉಪಕಾರ ಮಾಡಿದವರಿಗೆ ಸದಾ ಕೃತಜ್ಞರಾಗಿದ್ದು, ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಶಯ ಅವಳದು. 

ತಾಯಿಯ ಪ್ರೋತ್ಸಾಹ
ವಿಜ್ಞಾನ ಪರೀಕ್ಷೆ ಕಷ್ಟ ಇದ್ದುದರಿಂದ ಕಡಿಮೆ ಅಂಕ ಬಂದಿದೆ. ಇಷ್ಟು ಸಾಧನೆ ಮಾಡುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ, ಸಂತೋಷವಾಗಿದೆ. ತಾಯಿಯ ಸತತ ಪ್ರೋತ್ಸಾಹ, ಶಿಕ್ಷಕರು ವಿವಿಧ ರೀತಿಯಲ್ಲಿ ನೀಡಿದ ನಿರಂತರ ಮಾರ್ಗದರ್ಶನ ಹಾಗೂ ಚೆನ್ನಾಗಿ ಸಾಧನೆ ಮಾಡಬೇಕು ಎಂಬ ಛಲ ಇದ್ದುದರಿಂದ ಈ ಹಂತಕ್ಕೆ ಬೆಳೆಯಲು ಸಾಧ್ಯವಾಯಿತು.

– ನೇಹಾ

Advertisement

Udayavani is now on Telegram. Click here to join our channel and stay updated with the latest news.

Next