Advertisement

ಕತ್ತಿ ಸಹೋದರರ ಜತೆ ಸಂಧಾನ ಇಂದು

11:49 PM Mar 31, 2019 | Vishnu Das |

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ವಿಚಾರದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಹಾಗೂ ಶಾಸಕ ಉಮೇಶ ಕತ್ತಿ ಅವರ ಅಸಮಾಧಾನ ಮತ್ತಷ್ಟು ತೀವ್ರಗೊಂಡಿದ್ದು, ಸಹೋದರರ ಅಸಮಾಧಾನ ಶಮನಕ್ಕೆ ಈಗ ಸ್ವತಃ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಮುಂದಾಗಿದ್ದಾರೆ.
ದೂರವಾಣಿ ಮೂಲಕ ಉಮೇಶ ಕತ್ತಿ ಜೊತೆ ನಡೆಸಿದ ಮಾತುಕತೆ ಸಫಲವಾಗದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸೋಮವಾರ ಬೆಳಗಾವಿಗೆ ಆಗಮಿ ಸುತ್ತಿದ್ದು, ಮತ್ತೂಮ್ಮೆ ಅವರ ಜೊತೆ ಮಾತುಕತೆ ನಡೆಸಿ ಪಕ್ಷದಲ್ಲೇ
ಉಳಿಸಿಕೊಳ್ಳಲು ಪ್ರಯತ್ನ ನಡೆಸಲಿ ದ್ದಾರೆಂದು ಮೂಲಗಳು ತಿಳಿಸಿವೆ.

Advertisement

ಬಿಜೆಪಿ ನಾಯಕರ ಕ್ರಮದಿಂದ ತೀವ್ರ ಆಸಮಾಧಾನಗೊಂಡಿರುವ ಕತ್ತಿ
ಸಹೋದರರು, ಕಾಂಗ್ರೆಸ್‌ ಸೇರಲು ಸಿದ್ಧತೆ ನಡೆಸಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಯಡಿಯೂರಪ್ಪ ಬೆಳಗಾವಿಗೆ ಆಗಮಿಸುತ್ತಿರುವುದು ಬಹಳ ಮಹತ್ವ ಪಡೆದುಕೊಂಡಿದೆ. ಈ ಸಂಧಾನ ಸಭೆಯಲ್ಲಿ ಸಂಸದ ಸುರೇಶ ಅಂಗಡಿ, ಬೆಳಗಾವಿ ವಿಭಾಗದ ಪ್ರಭಾರಿ ಈರಣ್ಣ ಕಡಾಡಿ ಭಾಗವಹಿಸಲಿದ್ದು, ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಕತ್ತಿ ಸಹೋದರರಿಗೆ
ತಿಳಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪ್ರಭಾಕರ ಕೋರೆ ಅವರು ಕತ್ತಿ ಜತೆ ಒಂದು ಸುತ್ತಿನ ಮಾತುಕತೆ ಸಹ ನಡೆಸಿದ್ದಾರೆಂದು ಪಕ್ಷದ ಮೂಲಗಳು ಖಚಿತಪಡಿಸಿವೆ. ಕತ್ತಿ ಸಹೋದರರು ಮೊದಲಿಂದಲೂ ಯಡಿಯೂರಪ್ಪ ಪಾಳೆಯದಲ್ಲಿ ಗುರುತಿಸಿಕೊಂಡವರು. ಇದೇ ಕಾರಣದಿಂದ ಯಡಿಯೂರಪ್ಪ ಸಹ ಚಿಕ್ಕೋಡಿ ಕ್ಷೇತ್ರದಿಂದ ರಮೇಶ ಕತ್ತಿ ಅವರ ಹೆಸರನ್ನು ಶಿಫಾರಸು ಮಾಡಿದ್ದರು. ಆದರೆ, ಅವರಿಗೆ ಟಿಕೆಟ್‌ ಸಿಗದ ಕಾರಣ ಯಡಿಯೂರಪ್ಪ ಸಹ ಬೇಸರಗೊಂಡಿದ್ದರು. ಈಗ ಅವರೇ
ಅಸಮಾಧಾನ ಶಮನ ಮಾಡಲು ಬರುತ್ತಿರುವುದು ಕುತೂಹಲ ಹುಟ್ಟಿಸಿದೆ.
ಚಿಕ್ಕೋಡಿ ಟಿಕೆಟ್‌ ವಿಚಾರದಲ್ಲಿ ಕತ್ತಿ ಸಹೋದರರಿಂದ ಮೊದಲೇ ತಪ್ಪಾಗಿದೆ. ಆಗ ಅವರು ಎಚ್ಚರಗೊಳ್ಳಲಿಲ್ಲ. ಟಿಕೆಟ್‌ ನಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದು ಪಕ್ಷದ ನಾಯಕರನ್ನು ನಿರ್ಲಕ್ಷé ಮಾಡಿ ದರು. ಅದರ ಪರಿಣಾಮ ಈಗ ಗೊತ್ತಾಗಿದೆ. ಆದಾಗ್ಯೂ ಕತ್ತಿ ಸಹೋದರರ ಜತೆ ಸಂಧಾನ ಮಾಡಿಕೊಂಡು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವುದು ಅನಿವಾರ್ಯವಾಗಿದೆ. ಅವರಿಗೆ ಕಾಂಗ್ರೆಸ್‌ ಗೆ ಹೋಗುವ ಮನಸ್ಸು ಇದೆ. ಆದರೆ, ತಕ್ಷಣವೇ ಇಂತಹ ಕಠಿಣ ನಿರ್ಧಾರಕ್ಕೆ ಬರಲಿಕ್ಕಿಲ್ಲ. ಯಡಿಯೂರಪ್ಪ ಮಾತುಕತೆ ನಡೆಸಿದರೆ ಎಲ್ಲವೂ ಬಗೆಹರಿಯಲಿದೆ
ಎನ್ನುತ್ತಾರೆ ಬಿಜೆಪಿ ಮುಖಂಡರು.

ಈ ಮಧ್ಯೆ, ಟಿಕೆಟ್‌ ಸಿಗದೆ ತೀವ್ರ ಅಸಮಾಧಾನಗೊಂಡಿರುವ ರಮೇಶ ಕತ್ತಿ ಇದುವರೆಗೆ ಬಿಜೆಪಿ ನಾಯಕರ ಸಂಪರ್ಕಕ್ಕೆ ಸಿಕ್ಕಿಲ್ಲ. ಬೆಂಗಳೂರಿನಲ್ಲಿರುವ ಅವರು ಕಾಂಗ್ರೆಸ್‌ ನಾಯಕರ ಸಂಪರ್ಕದಲ್ಲಿದ್ದು ಮಾತುಕತೆ ಸಹ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಹುಕ್ಕೇರಿಯಲ್ಲಿ ಸಮಾವೇಶ
ಬಿಜೆಪಿ ಟಿಕೆಟ್‌ ಕೈತಪ್ಪಿದ ಬೆನ್ನಲ್ಲೇ ಶಾಸಕ ಉಮೇಶ ಕತ್ತಿ ಅವರು ಸೋಮವಾರ ಹುಕ್ಕೇರಿಯಲ್ಲಿ ಕಾರ್ಯಕರ್ತರ ಸಮಾವೇಶ ಆಯೋಜಿಸಿದ್ದಾರೆ. ಏಪ್ರಿಲ್‌ 4ರವರೆಗೆ ಕಾದು ನೋಡಿ ಎಂದು ಈಗಾಗಲೇ ಹೇಳಿರುವ ಅವರು, ಈ ಸಮಾವೇಶದಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಮೇಶ “ಕತ್ತಿ’ಗೆ ಟಿಕೆಟ್‌ ಕೈ ತಪ್ಪಿದ್ದಕ್ಕೆ ಪ್ರತಿಭಟನೆ

Advertisement

ಹುಕ್ಕೇರಿ: ಚಿಕ್ಕೋಡಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ರಮೇಶ ಕತ್ತಿಗೆ ಟಿಕೆಟ್‌ ನೀಡದಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಯುವಕರು ಮಾನವ ಸರಪಳಿ ನಿರ್ಮಿಸಿ ಭಾನುವಾರ ಪ್ರತಿಭಟನೆ
ನಡೆಸಿದರು. ಇದಕ್ಕೂ ಮೊದಲು ಪಟ್ಟಣದ ಕೋರ್ಟ್‌ ಸರ್ಕಲ್‌ನಲ್ಲಿ ನೂರಾರು ಬಿಜೆಪಿಕಾರ್ಯಕರ್ತರು ಸೇರಿ  ರಸ್ತೆ ತಡೆ ನಡೆಸಿ ಅರೆಬೆತ್ತಲೆ
ಪ್ರತಿಭಟನೆ ಮೂಲಕ ಬಿಜೆಪಿ ಹೈಕಮಾಂಡ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ರಮೇಶ ಕತ್ತಿಗೆ ಟಿಕೆಟ್‌ ನೀಡದಿದ್ದರೆ ಈ ಬಾರಿ ಮತದಾನ ಬಹಿಷ್ಕಾರ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಾಮೂಹಿಕ ರಾಜೀನಾಮೆ ಎಚ್ಚರಿಕೆ: ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ರಮೇಶ ಕತ್ತಿಗೆ ಬಿಜೆಪಿ ಟಿಕೆಟ್‌ ನೀಡದಿದ್ದರೆ ಪುರಸಭೆ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಲಿದ್ದಾರೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪುರಸಭೆ ಸದಸ್ಯರು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next