Advertisement
ಗ್ರಾಮದ 3ನೇ ಬ್ಲಾಕ್‌ನ ಹನುಮಂತ ನಗರ ನಿವಾಸಿಗಳು ಮಹಿಳಾ ಸ್ವಸಹಾಯ ಸಂಘಗಳನ್ನು ಮಾಡಿಕೊಂಡು ತಲಾ 5 ಲಕ್ಷ ರೂ. ನಂತೆ ಸಾಲ ಪಡೆದುಕೊಂಡು, 3 ವರ್ಷ ಕಳೆಯುತ್ತಿದ್ದರೂ ಸಕಾಲಕ್ಕೆ ಪಾವತಿ ಮಾಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ದೂರಿದರು.
Related Articles
Advertisement
ಸಂಘದ ಪ್ರತಿನಿಧಿಗಳಿಂದ ಮೋಸ: ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಸಕಾಲಕ್ಕೆ ಹಣ ಪಾವತಿ ಮಾಡುತ್ತಿದ್ದರೂ ಸಂಘದ ಪ್ರತಿನಿಧಿಗಳು ಡಿಸಿಸಿ ಬ್ಯಾಂಕ್‌ಗೆ ಪಾವತಿ ಮಾಡದೆ ವಂಚಿಸಿರುವ ಘಟನೆ ಬೆಳಕಿಗೆ ಬಂತು. ವಿಷಯ ಬಯಲಾಗುತ್ತಿದ್ದಂತೆ ಕೋಪಗೊಂಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಸಂಘದ ಎಲ್ಲಾ ಸದಸ್ಯರನ್ನು ಜತೆ ಸ್ಥಳದಲ್ಲೇ ವಿಚಾರಣೆ ನಡೆಸಿದರು. ಕೆಲವು ಸದಸ್ಯರು ಬಾಕಿ ಉಳಿಸಿಕೊಂದ್ದ ಹಣವನ್ನು ಅಧ್ಯಕ್ಷರ ಉಪಸ್ಥಿತಿಯಲ್ಲಿ ಬಾಕಿ ಹಣದಲ್ಲಿ ಒಂದಷ್ಟು ಹಣವನ್ನು ಪಾವತಿ ಮಾಡಿದ ಪ್ರಸಂಗ ನಡೆಯಿತು.
ತಪ್ಪು ಒಪ್ಪಿಕೊಂಡ ಪ್ರತಿನಿಧಿಗಳು: ಬೆಳಗ್ಗೆ 12 ಗಂಟೆಯಿಂದ 3 ಗಂಟೆಯವರೆಗೆ ನಡೆದ ವಿಚಾರಣೆ ನಂತರ ಸಂಘದ ಪ್ರತಿನಿಧಿಗಳಾದ ಮೋಬಿನ್ ತಾಜ್ ಮತ್ತು ಜಯಲಕ್ಷ್ಮೀ ತಪ್ಪು ಒಪ್ಪಕೊಂಡರು. ಸಾಲದಲ್ಲಿ ಬಾಕಿ ಇರುವ 9 ಲಕ್ಷ ರೂ., ಹಣವನ್ನು 3 ತಿಂಗಳಿನಲ್ಲಿ ಪಾವತಿ ಮಾಡುವುದಾಗಿ ಒಪ್ಪಿಗೆ ಪತ್ರ ಬರೆದುಕೊಟ್ಟರು.
3 ತಿಂಗಳಿನಲ್ಲಿ ಸ್ವಲ್ಪ ಹಣ ಕಟ್ಟಿ ಸಾಲ ಪಾವತಿ ಮಾಡಿಕೊಳ್ಳಿ, ಇಲ್ಲದಿದ್ದರೆ ನಿಮ್ಮ ವಿರುದ್ಧ ಕಾನೂನು ರಿತ್ಯ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಪೊಲೀಸರು ಭೇಟಿ: ಬೇತಮಂಗಲ ಪೊಲೀಸ್ ಠಾಣೆಯ ಪಿಎಸ್‌ಐ ಸುನಿಲ್ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಬ್ಯಾಂಕಿನಿಂದ ಪಡೆದಿರುವ ಸಾಲ ಪಾವತಿ ಮಾಡದಿರುವ ಮಹಿಳೆಯರ ವಿರುದ್ಧ ದೂರು ಬಂದರೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಘಟನೆಯೂ ನಡೆಯಿತು. ತಪ್ಪೊಪ್ಪಿಕೊಂಡ ಪ್ರತಿನಿಧಿಗಳು 3 ತಿಂಗಳ ಒಳಗೆ ಪೂರ್ಣ ಸಾಲ ಬಾಕಿಯಿಲ್ಲದೆ ಪಾವತಿ ಮಾಡುವು ದಾಗಿ, ಯಾವುದೇ ಕ್ರಮಕ್ಕೆ ಒಳಗಾಗುವುದಿಲ್ಲ ಎಂದು ಭರವಸೆ ನೀಡಿದರು.
ಬೇತಮಂಗಲ ವಿಎಸ್‌ಎನ್‌ಎನ್ ನಿರ್ದೇಶಕ ನಲ್ಲೂರು ಶಂಕರ್, ನೌಕರರಾದ ಕೃಷ್ಣ ಮೂರ್ತಿ, ಅಂಜಪ್ಪ, ಮುಖಂಡ ನಲ್ಲೂರು ಶ್ರೀಕಾಂತಪ್ಪ, ಜೀಡಮಾಕನಹಳ್ಳಿ ಕೃಷ್ಣಪ್ಪ, ಧನುಶ್ ಉಪಸ್ಥಿತರಿದ್ದರು.