Advertisement

ಮಾರುಕಟ್ಟೆಗೆ ಜಾಗ ನೀಡದೇ ನಿರ್ಲಕ್ಷ್ಯ

02:25 PM Aug 10, 2019 | Suhan S |

ಕೋಲಾರ: ಟೊಮೆಟೋ ಮಾರುಕಟ್ಟೆಗೆ ಜಾಗ ನೀಡಲು ನಿರ್ಲಕ್ಷ್ಯ ಖಂಡಿಸಿ ಮತ್ತು ರೇಷ್ಮೆ ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಆ.14ರ ಮಧ್ಯರಾತ್ರಿ 12 ಗಂಟೆಯಿಂದ ಧ್ವಜಾರೋಹಣ ಮಾಡಲು ಬರುವ ಜನಪ್ರತಿನಿಧಿಗಳ ಗಮನ ಸೆಳೆಯಲು ತರಕಾರಿ, ರೇಷ್ಮೆ ಸಮೇತ ಪಲ್ಲವಿ ವೃತ್ತದಲ್ಲಿ ಅಹೋರಾತ್ರಿ ಹೋರಾಟ ನಡೆಸಲು ರೆೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ತೋಟಗಾರಿಕೆ ಇಲಾಖೆಯಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಸ್ವಾತಂತ್ರ್ಯ ಬಂದು 8 ದಶಕ ಕಳೆದರೂ ಇಡೀ ದೇಶಕ್ಕೆ ಅನ್ನ ಹಾಕುವ ಅನ್ನದಾತನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಸಂಪೂರ್ಣವಾಗಿ ವಿಫ‌ಲವಾಗಿವೆ ಎಂದು ದೂರಿದರು.

ಬೆಲೆ ನಿಗದಿ: ಬ್ರಿಟಿಷರ ದಬ್ಟಾಳಿಕೆ ಮಾಡಿ ದೇಶವನ್ನು ದೋಚಿಕೊಂಡರು. ಇಂದು ನಮ್ಮಾನ್ನಾಳುವ ಅ ವಿದ್ಯಾವಂತ ಸರ್ಕಾರಗಳು ರೆೈತರ ಹೆಸರಿನಲ್ಲಿ ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಒಬ್ಬ ಕಂಪನಿ ಮಾಲಿಕ ತಾನು ಉತ್ಪಾದನೆ ಮಾಡಿದ ವಸ್ತುವಿಗೆ ತಾನೇ ಮಾರುಕಟ್ಟೆಯಲ್ಲಿ ಬೆಲೆ ನಿಗದಿ ಮಾಡುತ್ತಾನೆ ಎಂದು ವಿವರಿಸಿದರು.

ದಲ್ಲಾಳಿಗಳ ಅವಲಂಬನೆ: ಬಿಸಿಲು ಗಾಳಿ, ಮಳೆ ಎನ್ನದೆ ರಾತ್ರಿ ಹಗಲು ಕಷ್ಟಪಟ್ಟು ಬೆಳೆದ ಬೆಳೆಯ ಬೆಲೆ ನಿಗದಿ ಮಾಡುವ ತಾಕತ್ತು ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಬೆಲೆ ನಿಗದಿ ಮಾಡಲು ಮಾರುಕಟ್ಟೆಯಲ್ಲಿ ದಲ್ಲಾಳಿಗಳನ್ನು ಅವಲಂಬಿಸಬೇಕಾಗಿದೆ ಎಂದು ಟೀಕಿಸಿದರು.

ಸರ್ಕಾರಗಳ ವಿರುದ್ಧ ಆಕ್ರೋಶ: ಅಭಿವೃದ್ಧಿ ಹೆಸರಿನಲ್ಲಿ ರೆೈತರ ಕೃಷಿ ಜಮೀನನ್ನು ವಶಪಡಿಸಿಕೊಂಡು ಸಂಪೂರ್ಣವಾಗಿ ಕೃಷಿಯನ್ನು ಕಾರ್ಪೋರೆಟ್ ಕಂಪನಿಗಳಿಗೆ ನೀಡಿ ದೇಶದ ಆಹಾರ ಭದ್ರತೆಗೆ ದಕ್ಕೆ ತಂದು ತುತ್ತು ಅನ್ನಕ್ಕಾಗಿ ಹೊರದೇಶದ ಬಳಿ ಕೆೈಚಾಚಬೇಕಾದ ಪರಿಸ್ಥಿತಿ ತರುತ್ತಿದ್ದಾರೆಂದು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಮಾರುಕಟ್ಟೆ ವಿಸ್ತರಿಸಿಲ್ಲ: ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಸತತ 6 ವರ್ಷಗಳಿಂದ ಏಷ್ಯಾ ದಲ್ಲೇ 2ನೇ ಸ್ಥಾನದಲ್ಲಿರುವ ಕೃಷಿ ಉತ್ಪನ್ನ ಮಾರು ಕಟ್ಟೆಯ ಸ್ಥಳ ವಿಸ್ತರಣೆ ಮಾಡಲು ಹೋರಾಟಗಳು ನಡೆಯುತ್ತಿದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿರು ವುದರಿಂದ ರೆೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಹೇಳಿದರು.

ನೆಪ ಮಾತ್ರಕ್ಕೆ ಮಂಗಸಂದ್ರ, ಚೆಲುವನಹಳ್ಳಿ, ಬಳಿ 40 ಎಕರೆ ಜಮೀನು ಮಂಜೂರು ಮಾಡುತ್ತೇವೆಂದು ಜನರನ್ನು ಯಾಮಾರಿಸುವ ಜೊತೆಗೆ ರೇಷ್ಮೇ ಉದ್ಯಮವನ್ನೇ ನಂಬಿ ಸತತವಾಗಿ ಬೆಲೆ ಕುಸಿತದಿಂದ ಬೀದಿಗೆ ಬಿದ್ದಿರುವ ರೇಷ್ಮೆ ಹಾಗೂ ಟೊಮೆಟೋ ಬೆಳೆಗಾರರನ್ನು ನಿರ್ಲಕ್ಷ್ಯ ಮಾಡುತ್ತಿರುವ ಸರ್ಕಾರ ಮತ್ತು ಜಿಲ್ಲಾಡಳಿತದ ರೆೈತ ವಿರೋಧಿ ಧೋರಣೆ, ಸ್ವಾತಂತ್ರ್ಯ ಬಂದ ದಿನದ ಮಧ್ಯ ರಾತ್ರಿ 12 ಗಂಟೆ ಯಿಂದ ಬೆಳಗ್ಗೆ ಧ್ವಜಾರೋಹಣ ಮಾಡಲು ಬರುವ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ಗಮನ ಸೆಳೆಯಲು ಹೋರಾಟ ನಡೆಸಲು ತೀರ್ಮಾನಿಸಲಾಯಿತು ಎಂದರು.

ಈ ಸಭೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸ ಗೌಡ, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್‌, ಉದಯ್‌ಕುಮಾರ್‌, ಮಾಲೂರು ತಾಲೂಕು ಅಧ್ಯಕ್ಷರು ವೆಂಕಟೇಶ್‌, ಪುರುಷೋತ್ತಮ್‌, ಈಕಂ ಬಳ್ಳಿ ಮಂಜುನಾಥ್‌, ಮಂಗಸಂದ್ರ ನಾಗೇಶ್‌, ವೆಂಕ ಟೇಶ್‌, ತಿಮ್ಮಣ್ಣ, ರಂಜಿತ್‌, ಸಾಗರ್‌, ಸುಪ್ರೀಂಚಲ, ಶಿವ, ನಾರಾಯಣ್‌, ಶ್ರೀನಿವಾಸರೆಡ್ಡಿ, ಚಂದ್ರಪ್ಪ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next