ಯಲ್ಲಾಪುರ: ತಾಲೂಕಿನ ಚಂದ್ಗುಳಿ ಸಮೀಪದ ಮಳಲಗಾಂವ್ ರಸ್ತೆ ಬದಿ ಪುರಾತನ ಶಾಸನದ ಕುಸುರಿ ಕೆತ್ತನೆ ಇರುವ ಕಲ್ಲುಗಳು ಅನಾಥವಾಗಿ ಬಿದ್ದಿವೆ. ಹಿಂದಿನ ಕಾಲದ ವೈಭವ ಸಾರುವ ಕುರುಹುಗಳಾದ ಶಿಲಾಶಾಸನಗಳು ಇಂದು ಆಡಳಿತ, ಜನರ ಉಪೇಕ್ಷೆಗೆ ಒಳಗಾಗಿ ಹಾಳು ಸುರಿಯುತ್ತಿವೆ. ಸವಕಳಿ ಕಾಣುತ್ತಿದೆ. ಉತVನನದಂತಹ ಚಟುವಟಿಕೆ ನಡೆಯುತ್ತಿದೆ.
ಪುರಾತನ ಕಾಲದ ಶಿವಲಿಂಗ ಇತ್ಯಾದಿ ಚಿತ್ರ ಬರಹಳನ್ನು ಇಂತಹ ಕಲ್ಲುಹಗಳ ಮೇಲೆ ಕೆತ್ತಲಾಗಿದೆ. ಇವುಗಳ ಮಹತ್ವ ತಿಳಿಯದೇ ಮಳೆ ಗಾಳಿಗೆ ನೆನೆಯುತ್ತ, ಬಿರಿಯುತ್ತ, ಆಗೀಗ ದುಷ್ಕರ್ಮಿಗಳ ದಾಳಿಗೆ ನಲುಗುತ್ತ ಶಿಲಾಶಾಸನ ನಿರ್ಲಕ್ಷಕ್ಕೆ ಒಳಗಾಗಿದೆ. ಇಂತಹ ಶಾಸನವನ್ನು ಸಂರಕ್ಷಿಸುವ, ಈ ಬಗ್ಗೆ ಅಧ್ಯಯನ ನಡೆಸಿ ಹಿಂದಿನ ಕಾಲದ ಕಥೆಗಳನ್ನು ತಿಳಿಸುವ ಪ್ರಯತ್ನ ಸಂಬಂಧಟ್ಟವರಿಂದ ಆಗಲಿ.
Advertisement
ಇದು ಶಾಸನವೋ, ವೀರಗಲ್ಲೋ ಅಥವಾ ರಣಕಲ್ಲೋ ಎಂಬುದು ಸ್ಥಳಿಯರಲ್ಲಿ ಸ್ಪಷ್ಟನೆ ಇಲ್ಲ. ಆದರೆ ಯಾವುದೋ ಐತಿಹ್ಯ ಸಾರುವ ಶಿಲಾ ಶಾಸನ ಎಂಬುದಂತೂ ಸತ್ಯ. ರಸ್ತೆಯ ಸಮೀಪ ನಿರ್ಲಕ್ಷಿತ ಸ್ಥಿತಿಯಲ್ಲಿವೆ. ಇವುಗಳ ಸುತ್ತಮುತ್ತ ಈ ಹಿಂದೆ ಅಗೆದ ಕುರುಹುಗಳಿದ್ದು, ಇಲ್ಲಿ ನಿಧಿ ಇತ್ಯಾದಿ ಇದೆ ಎಂಬ ಕಾರಣಕ್ಕೋ ಕೀಳುವ ಪ್ರಯತ್ನ ನೆಡೆಸಿರಬಹುದೆಂದು ಸ್ಥಳಿಯರು ಹೇಳುತ್ತಾರೆ.